ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಕಪಾಳಮೋಕ್ಷ

Posted By:
Subscribe to Oneindia Kannada

ನವದೆಹಲಿ, ಜನವರಿ 27: 'ಪದ್ಮಾವತಿ' ಎಂಬ ಹೆಸರಿನಲ್ಲಿ ರಜಪೂತ್ ರಾಜವಂಶದ ಅರಸಿ ಪದ್ಮಿನಿ ಅವರ ಜೀವನಾಧಾರಿತ ಚಿತ್ರವನ್ನು ನಿರ್ಮಿಸುತ್ತಿರುವ ಸಂಜಯ್ ಲೀಲಾ ಬನ್ಸಾಲಿಯವರು ಆ ಚಿತ್ರದಲ್ಲಿ ರಾಣಿ ಪದ್ಮಿನಿಯವರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿದ್ದಾರೆಂದು ಆರೋಪಿಸಿ ರಜಪೂತ್ ಕಾರ್ಣಿ ಸೇನಾ ಸಂಘಟನೆಯ ಕಾರ್ಯಕರ್ತರು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ಮಾಡಿದ್ದಾರೆ.

ಪದ್ಮಾವತಿ ಚಿತ್ರದ ಶೂಟಿಂಗ್ ಜೈಗಢದ ಕೋಟೆಯಲ್ಲಿ ನಡೆಯುತ್ತಿದೆ. ಶುಕ್ರವಾರವೂ ಚಿತ್ರದ ಶೂಟಿಂಗ್ ಮುಂದುವರಿದಿತ್ತು. ಆಗ, ಪ್ರತ್ಯಕ್ಷವಾದ ರಜಪೂತ್ ಕಾರ್ಣಿ ಸೇನಾದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ, ಚಿತ್ರದಲ್ಲಿನ ಆಕ್ಷೇಪಾರ್ಹ ಅಂಶಗಳಿಗೆ ಕತ್ತರಿ ಹಾಕಬೇಕೆಂದು ಆಗ್ರಹಿಸಿದರು.

Sanjay Leela Bhansali Slapped on the sets of movie Padmavathi

ಇದೇ ವೇಳೆ, ಚಿತ್ರತಂಡದೊಂದಿಗೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಸಿದ ಕಾರ್ಯಕರ್ತರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರಿಗೆ ಕಪಾಳ ಮೋಕ್ಷ ಮಾಡಿದರು. ಅಲ್ಲದೆ, ಅವರ ಕೂದಲು ಹಿಡಿದು ಎಳೆದಾಡಿ ರಂಪ ಮಾಡಿದರೆನ್ನಲಾಗಿದೆ.

ಆ ವೇಳೆ, ನಿರ್ದೇಶಕರ ರಕ್ಷಣೆಗೆ ಆಗಮಿಸಿದ, ನಟ ರಣವೀರ್ ಹಾಗೂ ನಟಿ ದೀಪಿಕಾ ಪಡುಕೋಣೆಯನ್ನೂ ಎಳೆದಾಡಿ ದಾಂಧಲೆ ಮಾಡಿದ್ದಾರೆನ್ನಲಾಗಿದೆ.

ಕಾರ್ಯಕರ್ತರ ಆಗ್ರಹವೇನು?
ರಜಪೂತ್ ಕಾರ್ಣಿ ಸಂಘಟನೆಯ ಕಾರ್ಯಕರ್ತರ ಪ್ರಕಾರ, ರಾಣಿ ಪದ್ಮಿನಿಯು ಸ್ವಾಭಿಮಾನದ ಅರಸಿಯಾಗಿದ್ದವಳು. ಇಂಥ ಅರಸಿ ವಾಸಿಸುತ್ತಿದ್ದ ಕೋಟೆಯಾದ ಜೈಗಢ ಕೋಟೆಯ ಮೇಲೆ ದಂಡೆತ್ತಿ ಬರುವ ಅಲ್ಲಾವುದ್ದೀನ್ ಖಿಲ್ಜಿ, ಕೋಟೆಯೊಂದಿಗೆ ಆಕೆಯನ್ನೂ ವಶಪಡಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಾನೆ. ಆತನ ಸೈನ್ಯ ಕೋಟೆಯನ್ನು ಮುತ್ತಿಗೆ ಹಾಕಿದಾಗ ಎರಡೂ ಪಕ್ಷಗಳ ನಡುವೆ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ತಾನು ಸೋತು, ಖಿಲ್ಜಿಗೆ ಶರಣಾಗಬೇಕಾದ ಪ್ರಸಂಗ ಎದುರಾಗುವುದನ್ನು ಮನಗಂಡ ಪದ್ಮಿನಿ ತನ್ನನ್ನು ತಾನು ಬಲಿದಾನಗೈಯ್ಯುತ್ತಾಳೆ.

ಆದರೆ, ಚಿತ್ರದಲ್ಲಿ ಖಿಲ್ಜಿಗೂ, ರಾಣಿ ಪದ್ಮಿನಿಗೂ ಪ್ರಣಯವಿತ್ತೆಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ಮಾಡಿರುವ ರಣವೀರ್ ಹಾಗೂ ರಾಣಿ ಪದ್ಮಿನಿ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆ ನಡುವೆ ಪ್ರಣಯ ಪ್ರಸಂಗಗಳನ್ನು ಚಿತ್ರಿಸಲಾಗಿದ್ದು, ಇದು ಚರಿತ್ರೆಗೆ ಅಪಚಾರ ಎಸಗಿದಂತಾಗಿದೆ. ರಾಣಿ ಪದ್ಮಿನಿಯವರ ಚಾರಿತ್ರ್ಯಕ್ಕೆ ಧಕ್ಕೆ ತರುವಂಥ ಯಾವುದೇ ಅಂಶಗಳಿದ್ದರೂ ಅವನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Filmmaker Sanjay Leela Bhansali was attacked and the sets of his film "Padmavati" at a fort in Jaipur were vandalized by protesters who alleged that the film shows a much-celebrated Rajput queen in poor light.
Please Wait while comments are loading...