ಪತ್ರಕರ್ತರ ಮೇಲೆ ಹಲ್ಲೆ, ಸಂಜಯ್ ದತ್ ವಿರುದ್ಧ ದೂರು

ನಟ ಸಂಜಯ್ ದತ್ ಅವರು ಜೈಲಿನಿಂದ ಹೊರ ಬಂದ ಮೇಲೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಭೂಮಿ ಚಿತ್ರದ ಶೂಟಿಂಗ್ ವೇಳೆ ಸಂಜಯ್ ದತ್ ಅವರ ಬೌನ್ಸರ್ ಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಆಗ್ರಾ, ಮಾರ್ಚ್ 03: ನಟ ಸಂಜಯ್ ದತ್ ಅವರು ಜೈಲಿನಿಂದ ಹೊರ ಬಂದ ಮೇಲೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಭೂಮಿ ಚಿತ್ರದ ಶೂಟಿಂಗ್ ವೇಳೆ ಸಂಜಯ್ ದತ್ ಅವರ ಬೌನ್ಸರ್ ಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಆಗ್ರಾದ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ನಡೆದ ವೇಳೆಯಲ್ಲಿ ಸಂಜಯ್ ದತ್ ಕೂಡಾ ಇದ್ದರು ಎಂದು ತಿಳಿದು ಬಂದಿದೆ.

Sanjay Dutt's bodyguards badly thrashed the media persons

ಐದಾರು ಮಂದಿ ಪತ್ರಕರ್ತರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಂಜಯ್ ದತ್ ಅವರು ಕ್ಷಮೆಯಾಚಿಸಿದ್ದಾರೆ.

ಆಗ್ರಾದಲ್ಲಿ ಶೂಟಿಂಗ್ ವೇಳೆ ಗದ್ದಲ ಏರ್ಪಟ್ಟು ಶೂಟಿಂಗ್ ಗೆ ತೊಂದರೆ ಉಂಟಾಗಿತ್ತು. ಇದನ್ನು ಚಿತ್ರೀಕರಿಸಿ ವರದಿ ಮಾಡಲು ಬಂದ ಸ್ಥಳೀಯ ವರದಿಗಾರರಿಗೆ ಸಂಜಯ್ ದತ್ ಅವರ ಬಾಡಿಗಾರ್ಡ್ ಗಳು ಗೂಸಾ ಕೊಟ್ಟಿದ್ದಾರೆ. ಸಾಲದ್ದಕ್ಕೆ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಬೀಸಿದ ದೊಣ್ಣೆ ಪತ್ರಕರ್ತರಿಗೂ ಬಿದ್ದಿದೆ ಎನ್ನಲಾಗಿದೆ.

ಅಮೀರ್ ಖಾನ್ ಅವರ ಪಿಕೆ ಚಿತ್ರದಲ್ಲಿ ನಟಿಸಿದ್ದ ಸಂಜಯ್ ಅವರು ಈಗ ಭೂಮಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ಜತೆಗೆ ಅದಿತಿ ರಾವ್ ಹೈದರಿ, ಶೇಖರ್ ಸುಮನ್ ಕೂಡಾ ತಾರಾಗಣದಲ್ಲಿದ್ದಾರೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪ ಸಾಬೀತಾಗಿ ಜೈಲು ಸೇರಿದ್ದ ಬಾಲಿವುಡ್ ನಟ 57 ವರ್ಷ ವಯಸ್ಸಿನ ಸಂಜಯ್ ದತ್ ಅವರು 42 ತಿಂಗಳು ಶಿಕ್ಷೆ ಅನುಭವಿಸಿ ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+