ತೆರಿಗೆ ವಂಚನೆ ವಿಚಾರಣೆಗೆ ಹಾಜರಾದ ಸಾನಿಯಾ ಮಿರ್ಜಾ

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 17: ಸೇವಾ ತೆರಿಗೆ ವಂಚನೆಯಾಗಿದೆಯೆಂದು ಹೇಳಿ ತಮಗೆ ನೋಟಿಸ್ ಜಾರಿಗೊಳಿಸಿದ್ದ ಕೇಂದ್ರೀಯ ಅಬಕಾರಿ ಹಾಗೂ ಸುಂಕ ಮಂಡಳಿಯ ಹೈದರಾಬಾದ್ ಶಾಖೆಗೆ ಸಾನಿಯಾ ಮಿರ್ಜಾ ಸ್ಪಷ್ಟನೆ ನೀಡಿದ್ದಾರೆ.

ತೆಲಂಗಾಣ ರಾಜ್ಯ ಸರ್ಕಾರದ ರಾಯಭಾರತ್ವಕ್ಕಾಗಿ ಸಾನಿಯಾ ಮಿರ್ಜಾ ಅವರು ಸುಮಾರು 1 ಕೋಟಿ ರು. ಹಣವನ್ನು ಪಡೆದಿದ್ದು ಅದರಲ್ಲಿ ಸೇವಾ ತೆರಿಗೆ ಕಟ್ಟಿಲ್ಲ ಎಂಬುದನ್ನು ಉಲ್ಲೇಖಿಸಿ, ಈ ಬಗ್ಗೆ ಉತ್ತರ ಕೊಡುವಂತೆ ಇತ್ತೀಚೆಗೆ ಇಲಾಖೆಯು ಮಿರ್ಜಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.[ಸಾನಿಯಾ ಮಿರ್ಜಾಗೆ ತೆರಿಗೆ ಇಲಾಖೆ ನೋಟಿಸ್]

Sania Mirza denies service tax evasion over Telangana award

ಫೆ. 16ರಂದು ವಿಚಾರಣೆಗೆ ಹೈದರಾಬಾದ್ ನಲ್ಲಿರುವ ಇಲಾಖಾ ಕಚೇರಿಗೆ ಖುದ್ದಾಗಿ ಹಾಜರಾಗಿ ಅಥವಾ ಪ್ರತಿನಿಧಿಯೊಬ್ಬರ ಮೂಲಕ ಉತ್ತರಿಸುವಂತೆಯೂ ಸೂಚಿಸಲಾಗಿತ್ತು.[ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್ ತಲುಪಿದ ಸಾನಿಯಾ ಮಿರ್ಜಾ]

ಈ ಹಿನ್ನೆಲೆಯಲ್ಲಿ, ಗುರುವಾರ (ಫೆ. 16) ವಿಚಾರಣೆಗೆ ಬಂದಿದ್ದ ಸಾನಿಯಾ ಮಿರ್ಜಾ ಅವರ ಅಕೌಂಟಂಟ್, ತೆಲಂಗಾಣ ಸರ್ಕಾರದಿಂದ 1 ಕೋಟಿ ರು. ಪಡೆದಿರುವುದು ರಾಯಭಾರತ್ವಕ್ಕಾಗಿ ಅಲ್ಲ. ಬದಲಿಗೆ, ರಾಜ್ಯದ ಟೆನಿಸ್ ಆಟಗಾರರಿಗೆ ತರಬೇತಿ ನೀಡಲು ನೀಡಲಾದ ಸಂಭಾವನೆ ಎಂದು ವಿವರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tennis champ Sania Mirza on Thursday denied service tax evasion in a response to notices last week issued by the service taxes division of the Central Board of Excise and Customs, Hyderabad.
Please Wait while comments are loading...