ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ಪುರಿ, ಡಿಸೆಂಬರ್ 04: ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರ ಮೇಲೆ ಅಪರಿಚಿತ ದರೋಡೆಕೋರನೊಬ್ಬ ದಾಳಿ ನಡೆಸಿದ ಘಟನೆ ಇಂದು(ಡಿ.04) ನಡೆದಿದೆ.

ಶ್ರೀನಗರದಲ್ಲಿ ಪಿಡಿಪಿ ನಾಯಕನ ಮೇಲೆ ಗುಂಡಿನ ದಾಳಿ

ಒಡಿಶಾದ ಪುರಿಯಲ್ಲಿ ನಡೆಯುತ್ತಿದ್ದ ಕೊನಾರ್ಕ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ಪಟ್ನಾಯಕ್ ಅವರು ಧರಿಸಿದ್ದ ಬೆಲೆಬಾಳುವ ವಾಚನ್ನು ಕದಿಯಲು ಬಂದ ದರೋಡೆಕೋರ, ಪ್ರತಿರೋಧಿಸಿದ ಮರಳುಶಿಲ್ಪಿ ಮೇಲೆ ಹಲ್ಲೆ ನಡೆಸಿದ್ದ. ಪರಿಣಾಮ ಪಟ್ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪುರಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

Sand artist Sudarshan Pattnaik attacked, hospitalized

ಒಡಿಶಾ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿರುವ ಐದು ದಿನಗಳ ಅಂತಾರಾಷ್ಟ್ರೀಯ ಸ್ಯಾಂಡ್ ಆರ್ಟ್ ಫೆಸ್ಟಿವಲ್ ಗೆ ಸುದರ್ಶನ್ ಪಟ್ನಾಯಕ್ ರಾಯಭಾರಿಯಾಗಿದ್ದಾರೆ. ಕೊನಾರ್ಕ್ ನ ಸೂರ್ಯದೇವಾಲಯದಲ್ಲಿ ಈ ಸಮ್ಮೇಳನ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
International sand artist Sudarshan Pattnaik has been hospitalised after he suffered injuries following an attack on him during the Konark Sand Art Festival in Odisha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ