ಇಂದು ಸಂಯುಕ್ತ ಕಿಸಾನ್ ಮೋರ್ಚಾ ಸಭೆ: ಎಂಎಸ್‌ಪಿ, ಲಖಿಂಪುರ ಪ್ರಕರಣದ ಬಗ್ಗೆ ಚರ್ಚೆ

ಲಖಿಂಪುರ ಜುಲೈ 12: ಲಖಿಂಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜುಲೈ 12) ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನೇತೃತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ 60 ಕೃಷಿ ಸಂಸ್ಥೆಗಳು ಭಾಗವಹಿಸಲಿವೆ. ವಿವರಗಳ ಪ್ರಕಾರ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆ ಸಭೆಯ ಚರ್ಚೆಯ ವಿಷಯಗಳಾಗಿವೆ. ಸಭೆಯ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡ ಮತ್ತು ಎಸ್‌ಕೆಎಂ ಸದಸ್ಯ ಅಭಿಮನ್ಯು ಕೋಹರ್, 'ಭಾರತದಾದ್ಯಂತದ ರೈತ ಸಂಘಟನೆಗಳು ಸಭೆಯಲ್ಲಿ ಭಾಗವಹಿಸಲಿವೆ' ಎಂದಿದ್ದಾರೆ.

ಜೊತೆಗೆ ಮಂಗಳವಾರದ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಕೇಳಿದ ಪ್ರಶ್ನೆಗೆ, ರದ್ದಾದ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ಪ್ರತಿಭಟನೆಯನ್ನು ಹಿಂತೆಗೆದುಕೊಂಡಾಗ ರೈತರಿಗೆ ನೀಡಿದ ಲಿಖಿತ ಭರವಸೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕೇಂದ್ರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ರೈತರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಲಖಿಂಪುರ ಪ್ರಕರಣದ ಬಗ್ಗೆ ಚರ್ಚೆ

ಲಖಿಂಪುರ ಪ್ರಕರಣದ ಬಗ್ಗೆ ಚರ್ಚೆ

"ನಾವು ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಮತ್ತು SKM ಅನ್ನು ಅರಾಜಕೀಯವಾಗಿಡಲು ನಿಯಮಗಳು ಮತ್ತು ನಿಬಂಧನೆಗಳನ್ನು ಚರ್ಚಿಸುತ್ತೇವೆ. 2021 ರ ಕೃಷಿಗೆ ಸಂಬಂಧಿಸಿದ ವಿಶ್ವ ವ್ಯಾಪಾರ ಸಂಸ್ಥೆ (WTO) ನಿರ್ಧಾರವನ್ನು ಸಹ ಚರ್ಚಿಸಲಾಗುವುದು. ಇದು ಭಾರತದಲ್ಲಿ ರೈತರ ಮೇಲೆ ತಪ್ಪು ತೀರ್ಪು ಮತ್ತು ನೇರವಾಗಿ ಪರಿಣಾಮ ಬೀರುತ್ತದೆ" ಎಂದು ಕೋಹರ್ ಹೇಳಿದರು. "ನಾವು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಬಗ್ಗೆಯೂ ಚರ್ಚಿಸುತ್ತೇವೆ. ನಿಜವಾದ ಅಪರಾಧಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಆದರೆ ರೈತರನ್ನು ಬಂಧಿಸಲಾಗಿದೆ" ಎಂದು ಅವರು ಹೇಳಿದರು.

ಸಂತ್ರಸ್ತರ ಕಡೆಯವರ ವಾದ ಆಲಿಸಿದ ಕೋರ್ಟ್

ಸಂತ್ರಸ್ತರ ಕಡೆಯವರ ವಾದ ಆಲಿಸಿದ ಕೋರ್ಟ್

ನಿನ್ನೆ (ಜುಲೈ 11) ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಡೆಸಿತು. ವಿಚಾರಣೆಯನ್ನು ಬುಧವಾರ ಮುಂದುವರಿಸಲಿದೆ. ಸಂತ್ರಸ್ತರ ಕಡೆಯವರು ಸೋಮವಾರ ತಮ್ಮ ವಾದವನ್ನು ಮುಕ್ತಾಯಗೊಳಿಸಿದ ನಂತರ ನ್ಯಾಯಾಲಯವು ಜುಲೈ 13 ರಂದು ರಾಜ್ಯ ಸರ್ಕಾರದ ವಾದಗಳನ್ನು ಆಲಿಸಲು ದಿನಾಂಕವನ್ನು ನಿಗದಿಪಡಿಸಿತು.

ನಾಲ್ವರು ರೈತರು ಸಾವು

ನಾಲ್ವರು ರೈತರು ಸಾವು

ಆಶಿಶ್ ಮಿಶ್ರಾ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಮೂರ್ತಿ ಕೃಷ್ಣಾ ಪಹಲ್ ಈ ಆದೇಶ ನೀಡಿದ್ದಾರೆ. ಸಂತ್ರಸ್ತೆಯ ಕಡೆಯವರು ಆಶಿಶ್ ಮಿಶ್ರಾ ಸ್ಥಳದಲ್ಲಿದ್ದಾರೆ ಮತ್ತು ಘಟನೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿದೆ ಎಂದು ಸ್ಥಾಪಿಸಲು ಹಲವಾರು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು. ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಕಳೆದ ವರ್ಷ ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿರುವ ಟಿಕೋನಿಯಾ ಗ್ರಾಮದ ಬಳಿ ಕಾರೊಂದು ಢಿಕ್ಕಿ ಹೊಡೆದು ನಾಲ್ವರು ರೈತರು ಸಾವನ್ನಪ್ಪಿದ್ದರು. ಆಶಿಶ್ ಮಿಶ್ರಾ ಕಾರಿನಲ್ಲಿ ಕುಳಿತಿದ್ದರು ಎಂದು ಆರೋಪಿಸಲಾಗಿದೆ.

ಆ ದಿನ (ಅಕ್ಟೋಬರ್ 3) ಅಜಯ್ ಮಿಶ್ರಾ ಅವರ ಹುಟ್ಟೂರಾದ ಬನ್ಬೀರ್ ಗ್ರಾಮಕ್ಕೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ನಂತರದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಚಾಲಕ ಸಾವನ್ನಪ್ಪಿದ್ದರು. ಪತ್ರಕರ್ತರೊಬ್ಬರು ಎಂಟನೇ ಬಲಿಪಶು. ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಸಚಿವರ ಮಗನಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿತು. ಆದರೆ ಹೈಕೋರ್ಟ್ ಈ ವಿಷಯವನ್ನು ಮರು ಪರಿಶೀಲಿಸಬಹುದು ಎಂದು ನಿರ್ದೇಶಿಸಿತು.

ರೈತರಿಗೆ ಭದ್ರತೆ ನೀಡಲು ಆಗ್ರಹ

ರೈತರಿಗೆ ಭದ್ರತೆ ನೀಡಲು ಆಗ್ರಹ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಕಪ್ಪು ಮಸಿ ಬಳಿದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ "ಇದನ್ನು ಇಡೀ ದೇಶದ ರೈತ ಸಮೂಹ ಉಗ್ರವಾಗಿ ಖಂಡಿಸುತ್ತದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಕೂಡಲೇ ಅವರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ಸರಕಾರ ಎಚ್ಚರಿಕೆ ವಹಿಸಬೇಕು. ರೈತ ನಾಯಕರ ಪ್ರವಾಸದ ವೇಳೆ ಸೂಕ್ತ ಭದ್ರತೆ ಒದಗಿಸಬೇಕು" ಎಂದು ರೈತ ಸಂಘಟನೆಗಳು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+