ಸ್ಯಾಮ್ ಸಂಗ್ ಕಂಪನಿ ಬಾಸ್ ಲೀ ಬಂಧನ

Posted By:
Subscribe to Oneindia Kannada
ಸಿಯೋಲ್, ಫೆಬ್ರವರಿ 17: ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪನ್ನ ಸಂಸ್ಥೆ ಸ್ಯಾಮ್ ಸಂಗ್ ಕಂಪನಿಯ ಮುಖ್ಯಸ್ಥ ಜೇ ವೈ. ಲೀ ಅವರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರ ಹಾಗೂ ಹಲವಾರು ಹಗರಣಗಳ ಆರೋಪ ಎದುರಿಸಿದ್ದ ಅವರ ವಿರುದ್ಧ ದಕ್ಷಿಣ ಕೊರಿಯಾ ಸರ್ಕಾರ ತನಿಖೆಗೆ ಆದೇಶಿಸಿತ್ತು.

ತನಿಖಾ ವರದಿಯು ನ್ಯಾಯಾಲಯದಲ್ಲಿ ಮಂಡನೆಯಾಗಿ ವರ್ಷಗಟ್ಟಲೆ ವಾದ-ವಿವಾದಗಳು ನಡೆದು, ಗುರುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 5:30ಕ್ಕೆ) ಲೀ ಬಂಧನಕ್ಕೆ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ. ಸದ್ಯಕ್ಕೀಗ ಅವರನ್ನು ಸಿಯೋಲ್ ಡಿಟೆನ್ಷನ್ ಸೆಂಟರ್ ನಲ್ಲಿ ಬಂಧಿಯಾಗಿರಿಸಲಾಗಿದೆ.

ದೈತ್ಯ ಕಂಪನಿಯಾದ ಸ್ಯಾಮ್ ಸಂಗ್

ದೈತ್ಯ ಕಂಪನಿಯಾದ ಸ್ಯಾಮ್ ಸಂಗ್

48 ವರ್ಷದ ಲೀ, ದಕ್ಷಿಣ ಕೊರಿಯಾದ ಅತಿ ಶ್ರೀಮಂತ ಉದ್ಯಮಿಯ ವಂಶಸ್ಥ. ಲೀ ಅವರು ಸ್ಯಾಮ್ ಸಂಗ್ ಕಂಪನಿಯ ಬಾಸ್ ಆಗಿದ್ದಂತೆ ಅವರ ಕುಟುಂಬದ ಅನೇಕ ಸದಸ್ಯರು ಸ್ಯಾಮ್ ಸಂಗ್ ಅಂಗ ಸಂಸ್ಥೆಗಳೆನಿಸಿಕೊಂಡ ಹಲವಾರು ಕಂಪನಿಗಳ ಮುಖ್ಯಸ್ಥರಾಗಿದ್ದಾರೆ.

ಜಿಡಿಪಿಗೆ ಕಾಣಿಕೆ ಸಲ್ಲಿಸುತ್ತಿದ್ದ ವಂಶ!

ಜಿಡಿಪಿಗೆ ಕಾಣಿಕೆ ಸಲ್ಲಿಸುತ್ತಿದ್ದ ವಂಶ!

ದೇಶದ ಒಟ್ಟಾರೆ ಉತ್ಪನ್ನದಲ್ಲಿ ಶೇ. 17ರಷ್ಟು ಈ ಕುಟುಂಬದ ಕಂಪನಿಗಳ ಪಾಲು ಇತ್ತೆಂದರೆ, ಆ ದೇಶದ ಸರ್ಕಾರದ ಮೇಲೆ ಆ ಕುಟುಂಬದ ಪ್ರಭಾವ ಎಷ್ಟಿರಬಹುದೆಂದು ಯಾರಾದರೂ ಊಹಿಸಬಹುದು.

ಕೋಟ್ಯಂತರ ಮೊತ್ತದ ಹಗರಣ

ಕೋಟ್ಯಂತರ ಮೊತ್ತದ ಹಗರಣ

ದೇಶದ ಜಿಡಿಪಿಗೆ ತಮ್ಮ ಕಂಪನಿಗಳ ಸಮೂಹದ ಕಾಣಿಕೆಯೂ ಇರುವುದರನ್ನು ಗಮನಿಸಿದ ನಂತರ, ಇದರ ದುರುಪಯೋಗಪಡೆದುಕೊಂಡ ಲೀ ಹಾಗೂ ಅವರ ಸಂಬಂಧಿಗಳು ಸರ್ಕಾರದ ಮಟ್ಟದಲ್ಲಿ ಕೆಲವಾರು ಲಾಭಿಗಳನ್ನು ಮಾಡಿ ಕೋಟ್ಯಾಂತರ ಮೊತ್ತದ ಹಲವಾರು ಹಗರಣಗಳನ್ನು ನಡೆಸಿದ್ದಾರೆಂಬ ಆರೋಪವಿದೆ.

ಸರ್ಕಾರವೇ ಅವರ ಅಡಿಯಾಳಾಗಿತ್ತಾ?

ಸರ್ಕಾರವೇ ಅವರ ಅಡಿಯಾಳಾಗಿತ್ತಾ?

ಲೀ ಅವರ ಶ್ರೀಮಂತ ಕುಟುಂಬದ ಇತರ ಸದಸ್ಯರೂ ಸ್ಯಾಮ್ ಸಂಗ್ ನಂಥದ್ದೇ ಹಲವಾರು ಕಂಪನಿಗಳನ್ನು ನಡೆಸುತ್ತಿದ್ದು ಹಲವಾರು ಲಾಬಿಗಳನ್ನು ಮಾಡಿ ತಮ್ಮ ಕಂಪನಿಗಳಿಗೆ ಕೋಟ್ಯಾಂತರ ಮೊತ್ತದ ಯೋಜನೆಗಳನ್ನು, ಸವಲತ್ತುಗಳನ್ನು ಬಾಚಿಕೊಂಡಿದ್ದಾರೆ ಎಂಬ ಆರೋಪಗಳಿದ್ದವು.

ಎಲ್ಲಾ ಅವ್ಯವಹಾರಗಳಿಗೆ ಅಡಿಪಾಯ ಅವರೇ?

ಎಲ್ಲಾ ಅವ್ಯವಹಾರಗಳಿಗೆ ಅಡಿಪಾಯ ಅವರೇ?

ಸರ್ಕಾರದ ಮಟ್ಟದಲ್ಲಿ ಆಗಿರುವ ಎಲ್ಲಾ ಆರ್ಥಿಕ ಅವ್ಯವಹಾರಗಳಿಗೂ ಮೂಲ ಆಧಾರವೇ ಲೀ ಆಗಿದ್ದು, ಅವರ ಅಡಿಯಲ್ಲೇ ಎಲ್ಲಾ ಅವ್ಯವಹಾರಗಳಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಹಾಗಾಗಿ, ಅವರ ಬಂಧನವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Samsung Group chief Jay Y. Lee was arrested early on Friday over his alleged role in a corruption scandal rocking the highest levels of power in South Korea.
Please Wait while comments are loading...