• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಪಾಕ್ ನಡುವಿನ ಸಮ್ಜೋತಾ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ

|

ನವದೆಹಲಿ, ಫೆಬ್ರವರಿ 28: ಭಾರತ-ಪಾಕಿಸ್ತಾನದ ನಡುವೆ ಒಪ್ಪಂದದ ತರುವಾಯ ಎರಡೂ ಬದಿಯಿಂದ ಸಂಚಾರ ನಡೆಸುತ್ತಿದ್ದ ಸಮ್ಜೋತಾ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಭಾರತ ರದ್ದು ಮಾಡಿದೆ.

ಅಭಿನಂದನ್ ಸ್ವಾಗತಕ್ಕೆ ಸೇನೆ ಸಿದ್ಧ, ಪ್ರತಿದಾಳಿಗೂ ಸನ್ನದ್ಧ

ಮಾರ್ಚ್‌ 3 ರಿಂದ ಅನಿರ್ದಿಷ್ಟಾವಧಿ ವರೆಗೂ ಸಮ್ಜೋತಾ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸದು. ಪಾಕಿಸ್ತಾನವು ಈಗಾಗಲೇ ತನ್ನ ಕಡೆಯಿಂದ ಸೇವೆಯನ್ನು ರದ್ದು ಮಾಡಿದೆ.

ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

ಪುಲ್ವಾಮಾ ದಾಳಿಯ ಬಳಿಕ ಸಮ್ಜೋತಾ ಎಕ್ಸ್‌ಪ್ರೆಸ್‌ನಲ್ಲಿ ಸಂಚರಿಸುವವರ ಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖವಾಗಿರುವ ಕಾರಣದಿಂದ ಈ ನಿರ್ಧಾರ ಮಾಡಿರುವುದಾಗಿ ಭಾರತೀಯ ರೈಲ್ವೆ ಹೇಳಿದೆ. ಭಾರತ-ಪಾಕಿಸ್ತಾನ ನಡುವೆ ಉಂಟಾಗುತ್ತಿರುವ ಉದ್ವಿಗ್ನ ಪರಿಸ್ಥಿತಿಯೂ ಸಹ ಇದಕ್ಕೆ ಕಾರಣ ಎನ್ನಲಾಗಿದೆ.

ಪಾಕಿಸ್ತಾನದ ಕಡೆಯಿಂದ ಒಬ್ಬ ಪ್ರಯಾಣಿಕರು ಇಲ್ಲದ ಕಾರಣ ನಾವು ಈ ರೈಲು ಸೇವೆಯನ್ನು ಮುಂದುವರೆಸುವುದರಲ್ಲಿ ಅರ್ಥವೇ ಇಲ್ಲ ಎಂದಿರುವ ರೈಲು ಅಧಿಕಾರಿಗಳು, ಸಂಬಂಧ ಸುಧಾರಣೆ ನಂತರ ಮತ್ತೆ ಇದು ಪುನರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು

ಸಮ್ಜೋತಾ ಎಕ್ಸ್‌ಪ್ರೆಸ್ ರೈಲು ಭಾರತದಿಂದ ಲಾಹೋರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ರೈಲು ವಾಘಾ ಗಡಿಯ ವರೆಗೂ ಹೋದರೆ ಅಲ್ಲಿಂದ ಮುಂದಕ್ಕೆ ಪಾಕಿಸ್ತಾನದ ರೈಲು ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಆದರೆ ಕೆಲವು ದಿನಗಳ ಮುನ್ನಾ ಪಾಕಿಸ್ತಾನವು ತನ್ನ ಕಡೆಯ ರೈಲಿನ ಸೇವೆಯನ್ನು ಬಂದ್ ಮಾಡಿದೆ. ಈಗ ಭಾರತವೂ ಸಹ ಸೇವೆಯನ್ನು ಬಂದ್ ಮಾಡಿದೆ.

English summary
CPRO Northern railways says, Samjhauta Express has been cancelled from India with effect from 3rd March, 2019 till further notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X