ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು?
'ನಾಚಿಕೆಯಾಗಬೇಕು ನಿಮಗೆ...!' ಹಾಗಂತ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನ ಸಾಗರೋತ್ತರ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರಿಗೆ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಅಷ್ಟಕ್ಕೂ ಮೋದಿ ಅವರಿಗೆ ಆ ಪರಿ ಕೋಪ ಬರುವಂತೆ ಸ್ಯಾಮ್ ಪಿತ್ರೊಡ ಹೇಳಿದ್ದೇನು?
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಎಎನ್ ಐ ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸ್ಯಾಮ್ ಪಿತ್ರೋಡಾ, ಬಾಲಕೋಟ್ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಾಲಕೋಟ್ ದಾಳಿ ನಡೆದಿದ್ದೇ ಹೌದಾಗಿದ್ದರೆ ಸಾಕ್ಷಿ ಕೊಡುತ್ತೀರಾ ಎಂದು ಕೇಳಿದ ಪಿತ್ರೋಡಾ ಅವರಿಗೆ ಪ್ರತಿಕ್ರಿಯೆ ನೀಡಿದ್ದ ನರೇಂದ್ರ ಮೋದಿ, 'ಭಾರತೀಯ ಸೇನೆಯನ್ನು ನೀವು ಅವಮಾನಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು' ಎಂದು ಮೋದಿ ಟ್ವೀಟ್ ಮಾಡಿದ್ದರು.
ಅಷ್ಟಕ್ಕೂ ಮೋದಿ ಅವರಿಗೆ ಆ ಪರಿ ಕೋಪ ಬರುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆ ಏನು? ಎಎನ್ ಐ ಗೆ ಅವರು ನೀಡಿದ ಸಂದರ್ಶನದಲ್ಲಿ ಪುಲ್ವಾಮಾ ಉಗ್ರದಾಳಿ, ಏರ್ ಸ್ಟ್ರೈಕ್ ಮುಂತಾದ ವಿಷಯಗಳ ಕುರಿತು ಅವರಾಡಿದ ಮಾತಿನ ಆಯ್ದ ಭಾಗ ಇಲ್ಲಿದೆ.

300 ಜನ ಸತ್ತಿದ್ದು ನಿಜಾನಾ?
"ನಾನು ನ್ಯಾಯಾರ್ಕ್ ಟೈಮ್ಸ್ ಮತ್ತಿತರ ಪತ್ರಿಕೆಗಳಲ್ಲಿ ಓದಿದಂತೆ, ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ನಾವು ನಿಜಕ್ಕೂ ಯಾವುದರ ಮೇಲೆ ದಾಳಿ ಮಾಡಿದ್ದೇವೆ? ನಾವು ನಿಜಕ್ಕೂ 300 ಜನರನ್ನು ಕೊಂದೆವಾ? ನಿಜಕ್ಕೂ ಮುನ್ನೂರು ಜನರನ್ನು ಕೊಂದಿದ್ದರೆ ನಮಗೆ ಸಾಕ್ಷಿ ಕೊಡಿ. ಜಾಗತಿಕ ಮಾಧ್ಯಮಗಳು ಅಲ್ಲಿ ಯಾರೂ ಸತ್ತೇ ಇಲ್ಲ ಎನ್ನುತ್ತವೆ. ಆಗ ಭಾರತೀಯ ನಾಗರಿಕನಾಗಿ ನನಗೆ ನೋವಾಗುತ್ತದೆ!" ಎಂದು ಸ್ವಾಮ್ ಪಿತ್ರೋಡಾ ಹೇಳಿದ್ದರು.

ಎಂಟು ಜನರ ತಪ್ಪಿಗೆ ಇಡೀ ಪಾಕಿಸ್ತಾನಕ್ಕೂ ಶಿಕ್ಷೆ!
"26/11 ರ ಮುಂಬೈ ದಾಳಿಯನ್ನು ಮಾಡಿದ್ದು ಏಳೆಂಟು ಭಯೋತ್ಪಾದಕರು. ಹಾಗಂತ ಇಡೀ ಪಾಕಿಸ್ತಾನವನ್ನು ದೂರುವುದು ಸರಿಯೇ? ಆ ಏಳೆಂಟು ಜನರಿಗಾಗಿ ಇಡೀ ಪಾಕಿಸ್ತಾನದ ಮೇಲೆ ದಾಳಿ ಮಾಡುವುದು ಸರಿಯೇ? ಯಾರದೋ ತಪ್ಪಿಗಾಗಿ ಆ ದೇಶದ ಎಲ್ಲರನ್ನೂ ತೆಗಳುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ" -ಸ್ವಾಮ್ ಪಿತ್ರೋಡಾ

ಬಲಾಢ್ಯ ಎಂದರೆ ಅರ್ಥವೇನು?
ಪ್ರಧಾನಿ ಮೋದಿ ಬಲಾಢ್ಯ ಸರ್ಕಾರವನ್ನು ಸಂಕೇತಿಸುತ್ತಾರೆ ಎಂದು ಬಿಜೆಪಿ ಹೇಳುತ್ತದೆ. ಬಲಾಢ್ಯ ಎಂದರೆ ಏನು? ಭಾರತದ ಪ್ರಜಾಪ್ರಭುತ್ವಕ್ಕೆ ಬಲಾಢ್ಯತೆಯ ಅಗತ್ಯವಿಲ್ಲ ಎಂಬುದನ್ನು ಜನರು ತಿಳಿಯಬೇಕು. ಹಿಟ್ಲರ್ ಸಹ ಬಲಾಢ್ಯನಾಗಿದ್ದ. ಎಲ್ಲಾ ಸರ್ವಾಧಿಕಾರಿಗಳೂ ಬಲಾಢ್ಯರೇ! ಚೀನಾ ಮುಖಂಡರೂ ಬಹಳ ಬಲಾಢ್ಯರು! ಭಾರತಕ್ಕೆ ಇಂಥ ಬಲಾಢ್ಯತೆ ಬೇಕೆ?- ಸ್ಯಾಮ್ ಪಿತ್ರೋಡಾ

ಮಾಹಿತಿ ತಿಳಿಯುವುದು ನನ್ನ ಹಕ್ಕು
ಭಾರತದ ನಾಗರಿಕನಾಗಿ ಮಾಹಿತಿ ತಿಳಿಯುವುದು ನನ್ನ ಹಕ್ಕು. ಅದಕ್ಕೆಂದೇ ಏರ್ ಸ್ಟ್ರೈಕ್ ಬಗ್ಗೆ ಮಾಹಿತಿ ಕೇಳಿದೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ, ಭಾರತದ ಒಬ್ಬ ನಾಗರಿಕನಾಗಿ ಅದನ್ನು ಕೇಳುವ ಹಕ್ಕು ನನಗಿದೆ - ಸ್ಯಾಮ್ ಪಿತ್ರೋಡಾ.

ಮೋದಿ ಟ್ವೀಟ್ ಗೆ ಪ್ರತಿಕ್ರಿಯೆ
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಏರ್ ಸ್ಟ್ರೈಕ್ ನಡೆದಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ' ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಿತ್ರೋಡಾ, 'ನನ್ನ ಮಾತಿನಲ್ಲಿ ವಿವಾದ ಸೃಷ್ಟಿಸುವಂಥದ್ದು ಏನಿದೆ ಎಂಬುದೇ ಅರ್ಥವಾಗುತ್ತಿಲ್ಲ. ನಾನು ಒಬ್ಬ ನಾಗರಿಕನಾಗಿ, ಮಾಹಿತಿಗಾಗಿ ಪ್ರಶ್ನೆ ಕೇಳಿದ್ದೇನೆ. ಈ ಕ್ಷುಲ್ಲಕ ವಿಷಯಕ್ಕೆ ಹೀಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ' ಎಂದಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications