ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ
ಬೆಂಗಳೂರು, ಏಪ್ರಿಲ್ 05: ಜೋಧಪುರ ಜೆಎಂಸಿ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಬೆಳಿಗ್ಗೆ 10.30ರ ವೇಳೆಗೆ ನಡೆಯುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಸಲ್ಮಾನ್ ಜೋಧಪುರ ಜೈಲಿನಲ್ಲಿ ದಿನ ಕಳೆಯಬೇಕಾಗಲಿದೆ.
ಅಸಾರಾಂ ಇರುವ ಜೈಲಿನಲ್ಲೇ ಸಲ್ಮಾನ್:
ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಇರುವ ಜೈಲಿನಲ್ಲಿಯೇ ಸಲ್ಮಾನ್ ರಾತ್ರಿ ಕಳೆಯಲಿದ್ದಾರೆ.
ಅಸಾರಾಂ ಬಾಪು ಇದೇ ಕಾರಾಗೃಹದ ಬ್ಯಾರಕ್ 2ನಲ್ಲಿದ್ದಾರೆ.

ವಿವಿಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಪ್ರಸಿದ್ಧ ವ್ಯಕ್ತಿಗಳು ಇದೇ ಕಾರಾಗೃಹದಲ್ಲಿದ್ದಾರೆ.
ಸಲ್ಮಾನ್ ಖಾನ್ ಒಬ್ಬ ರೂಢಿಗತ ಅಪರಾಧಿ ಎಂಬುದನ್ನು ಜೋಧಪುರ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ದೇವ್ ಕುಮಾರ್ ಖತ್ರಿ ಒಪ್ಪಿಕೊಂಡಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಭಾಟಿ ವ್ಯಾಖ್ಯಾನಿಸಿದ್ದಾರೆ.











Click it and Unblock the Notifications