• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯಾಯಾಲಯಕ್ಕೆ ತೆರಳುವ ಮುನ್ನ ಸಲ್ಮಾನ್: ಪ್ರಮುಖ ಚಿತ್ರಗಳು

|

ನವದೆಹಲಿ, ಏಪ್ರಿಲ್ 06: ಕೃಷ್ಣಮೃಗ ಬೇಟೆಯಲ್ಲಿ ಪ್ರಮುಖ ಆರೋಪಿ ಬಾಲಿವುಡ್ ನಟ ಸಲ್ಮಾನ್‌ಖಾನ್‌ನನ್ನು ದೋಷಿಯೆಂದು ಜೋಧಪುರ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪಿಗೂ ಮುನ್ನ ಜೋದ್ ಪುರ ನ್ಯಾಯಾಲಯಕ್ಕೆ ಸಲ್ಮಾನ್‌ಖಾನ್ ತೆರಳುತ್ತಿರುವ ದೃಶ್ಯವನ್ನು ನೀವು ನೋಡಬಹುದು. ಸಾಕಷ್ಟು ಭದ್ರತೆಯ ನಡುವೆ ಸಲ್ಮಾನ್ ಖಾನ್ ಜೋಧಪುರ ನ್ಯಾಯಾಲಯಕ್ಕೆ ತೆರಳುತ್ತಿರುವುದು.

1998ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಾಜಸ್ಥಾನದ ಭವಾದ್ ನಲ್ಲಿ ನಡೆದ ಶೂಟಿಂಗ್ ಹಾಗೂ ಘೋಡಾ ಫಾರ್ಮ್ ನಲ್ಲಿ ಸೆಪ್ಟೆಂಬರ್ 28, 1998ರಲ್ಲಿ ನಡೆದ ಶೂಟಿಂಗ್ ನಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು.

ಕೃಷ್ಣಮೃಗ ಬೇಟೆ ಪ್ರಕರಣ: ಇಂದು ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ

ಈ ಪ್ರಕರಣದಲ್ಲಿ ಸಲ್ಮಾನ್‌ಗೆ 1 ಹಾಗೂ 5 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಿ ನೀಡಿದ್ದ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಸಲ್ಮಾನ್ ನಿರ್ದೋಷಿ ಎಂದು ಜುಲೈ 25 ರಂದು ಹೈಕೋರ್ಟ್‌ ತೀರ್ಪು ನೀಡಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10000 ರೂಪಾಯಿ ದಂಡ ವಿಧಿಸಲಾಗಿದೆ. ಸಲ್ಮಾನ್‌ ಖಾನ್ ಅವರನ್ನು ಜೋದ್‌ಪುರ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯಲಾಗುತ್ತದೆ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಜಾಮೀನು ದೊರೆಯುವವರೆಗೂ ಸಲ್ಮಾನ್ ಖಾನ್ ಜೈಲು ವಾಸ ಮಾಡಬೇಕಾಗಿದೆ. ಏಪ್ರಿಲ್ 05 ರಂದು ಭಾರತದಲ್ಲಿ ನಡೆದ ಅನೇಕ ಪ್ರಮುಖ ಘಟನೆಗಳ ಫೋಟೊ ಹಾಗೂ ಮಾಹಿತಿಯನ್ನು ನೀವು ಪಡೆಯಬಹುದು.

ಬಾಲಿವುಡ್ ನಟ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಹೋಗುತ್ತಿರುವುದು

ಬಾಲಿವುಡ್ ನಟ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಹೋಗುತ್ತಿರುವುದು

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ದೋಷಿ ಎಂದು ಪ್ರಕಟವಾಗುವ ಮೊದಲು ಸಲ್ಮಾನ್ ಸಾಕಷ್ಟು ಭದ್ರತೆ ನಡುವೆ ಜೋಧಪುರ ನ್ಯಾಯಾಲಯಕ್ಕೆ ತೆರಳುತ್ತಿರುವುದು. 1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪು ಇದಾಗಿದ್ದು, ಪ್ರಕರಣದ ಉಳಿದ ಆರೋಪಿಗಳಾದ ಸೈಫ್ ಅಲಿ ಖಾನ್, ರವೀನಾ ಟಂಡನ್, ನೀಲಂ, ಟಬು ಮತ್ತು ಒಬ್ಬ ಗೈಡ್ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.

ಪ್ರತಿಭಟನೆಯಲ್ಲಿ ನಿರತರಾಗಿದ್ದ ವಾಟಾಳ್ ನಾಗರಾಜ್ ಬಂಧಿಸುತ್ತಿರುವ ದೃಶ್ಯ

ಪ್ರತಿಭಟನೆಯಲ್ಲಿ ನಿರತರಾಗಿದ್ದ ವಾಟಾಳ್ ನಾಗರಾಜ್ ಬಂಧಿಸುತ್ತಿರುವ ದೃಶ್ಯ

ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಏಪ್ರಿಲ್ 12ರ (ಗುರುವಾರ) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಮುಂದಾಗಬಾರದು. ಮಂಡಳಿ ರಚನೆ ಮಾಡಲು ಮುಂದಾದರೆ ಕನ್ನಡಿಗರಿಂದ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು. ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗೂತ್ತ ಅತ್ತಿಬೆಲೆ ಬಳಿ ರಸ್ತೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ದೃಶ್ಯ ಸೆರೆಯಾಗಿದ್ದು ಹೀಗೆ.

ಭಾಗವನ್ ಬಿಸ್ರ ಪಾರ್ಕಿನಲ್ಲಿ ಚಿರತೆಗಳು ಆಟವಾಡುತ್ತಿರುವ ದೃಶ್ಯ

ಭಾಗವನ್ ಬಿಸ್ರ ಪಾರ್ಕಿನಲ್ಲಿ ಚಿರತೆಗಳು ಆಟವಾಡುತ್ತಿರುವ ದೃಶ್ಯ

ರಾಂಚಿಯಲ್ಲಿರುವ ಭಾಗ್ವನ್ ಬಿಸ್ರಾ ಜೈವಿಕ ಉದ್ಯಾನದಲ್ಲಿ ಎರಡು ಚಿರತೆಗಳು ಅಲ್ಲಿನ ಗೋಡೆಯ ಪಕ್ಕದಲ್ಲಿ ಕುಳಿತು ಆಟವಾಡುತ್ತಿರುವ ಬಹು ಅಪರೂಪದ ದೃಶ್ಯ ಸೆರೆಯಾಗಿದೆ. ಇಂತಹ ದೃಶ್ಯಗಳು ಸಿಗುವುದು ಸಾಮಾನ್ಯವಲ್ಲ, ಛಾಯಾಗ್ರಾಹಕರು ತಿಂಗಳುಗಟ್ಟಲೆ ಕಾದು ನಿಂತರೂ ಒಮ್ಮೆಯೂ ಉತ್ತಮ ದೃಶ್ಯಗಳು ಸಿಗದೆ ನಿರಾಸರಾಗಿ ಹಿಂದಿರುಗಿರುವ ಎಷ್ಟೋ ಘಟನೆಗಳು ನಮ್ಮ ಕಣ್ಣಮುಂದಿದೆ.

ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ನಾಗರಹಾವು

ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ನಾಗರಹಾವು

ಬೆಂಗಳೂರಿನ ಕೆಆರ್ ಪುರಂನ ರೈಲ್ವೆ ನಿಲ್ದಾಣದಲ್ಲಿ ಮೊಟ್ಟೆಗಳ ಜತೆಯಲ್ಲಿ ಕಾನೀಸಿಕೊಂಡ ನಾಗರ ಹಾವನ್ನು ರಕ್ಷಿಸಲಾಗಿದೆ. ಒಂದು ಪೆಟ್ಟಿಗೆಯಲ್ಲಿ ಹಾವುಗಳನ್ನು ರಕ್ಷಿಸಿಡಲಾಗಿದ್ದು, ಅದರ ಮೊಟ್ಟೆಗಳನ್ನು ಹಾವಿನ ಜತೆಯಲ್ಲಿಯೇ ಇರಿಸಲಾಗಿದೆ.

ಕೊಲ್ಕತ್ತ: ಗಂಗಾನದಿಯಲ್ಲಿ ನಾಣ್ಯಗಳನ್ನು ಹುಡುಕುತ್ತಿರುವುದು

ಕೊಲ್ಕತ್ತ: ಗಂಗಾನದಿಯಲ್ಲಿ ನಾಣ್ಯಗಳನ್ನು ಹುಡುಕುತ್ತಿರುವುದು

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ತಾಪಮಾನ ಹೆಚ್ಚಾಗಿದೆ. ಜತೆಗೆ ನದಿಯಲ್ಲಿ ನೀರಿನ ಮಟ್ಟವೂ ಕೂಡ ಇಳಿಕೆಯಾಗಿದೆ. ಕೊಲ್ಕತ್ತದ ವಿವೇಕಾನಂದ ಬ್ರಿಡ್ಜ್ ಬಳಿ ಗಂಗಾ ನದಿಯಲ್ಲಿ ಯುವಕನೊಬ್ಬ ನಾಣ್ಯಗಳನ್ನು ಆರಿಸುವಲ್ಲಿ ಮಗ್ನರಾಗಿರುವ ವಿಶೇಷ ಚಿತ್ರವನ್ನು ನೀವು ನೋಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here are the pictures which showing Bollywood sultan Salman Khan appearing before Jodhpur on Thursday who was later convicted in poaching case. in the other pictures Kannada activist Vatal Nagaraj arrested. In interesting one leopards were playing KN Ranchi biological park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more