ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ

Posted By:
Subscribe to Oneindia Kannada

ಜೋಧ್ ಪುರ(ರಾಜಸ್ಥಾನ), ಜನವರಿ 18: ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರಿಗೆ ಪರವಾನಗಿ ಇಲ್ಲದ ಶಸ್ತ್ರಾಸ್ತ್ರವನ್ನು ಅಕಮವಾಗಿ ಹೊಂದಿದ್ದ ಆರೋಪ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಂದು ಜೋಧಪುರ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಸಲ್ಮಾನ್ ಅವರು ನಿರ್ದೋಷಿ ಎಂದು ಘೋಷಿಸಿ, ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಈಗಾಗಲೆ ಖುಲಾಸೆಗೊಂಡಿದ್ದಾರೆ.[ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ಗೆ ಖುಲಾಸೆ]

1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು.

* ಕೋರ್ಟಿನಲ್ಲಿ ಹಾಜರಿರುವ ಸಲ್ಮಾನ್ ಖಾನ್ ಸೋದರಿ ಆಲ್ವಿರಾ.
* 30 ನಿಮಿಷದಲ್ಲಿ ಕೋರ್ಟಿಗೆ ಬರಬೇಕಿದ್ದ ಸಲ್ಮಾನ್ ಗೆ ಟ್ರಾಫಿಕ್ ಪೊಲೀಸರಿಂದ ಅಡ್ಡಿ.
* ಸಲ್ಮಾನ್ ಕಾರಿಗೆ ಟಿಂಟೆಡ್ ಗ್ಲಾಸ್ ಇದ್ದಿದ್ದರಿಂದ ವಿಳಂಬ, ನ್ಯಾ, ದಲ್ಪಿತ್ ಸಿಂಗ್ ರಾಜ್ ಪುರೋಹಿತ್ ಗರಂಅ.
* 30 ನಿಮಿಷದಲ್ಲಿ ಕೋರ್ಟಿಗೆ ಹಾಜರಾಗುವಂತೆ ಸೂಚನೆ.

Salman Khan Arms Act case: Jodhpur court to pronounce verdict

ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿತ್ತು.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಫೆ.5ರಂದು ವಿಚಾರಣೆ ಮುಗಿಸಿದ ರಾಜಸ್ಥಾನ ಕೋರ್ಟ್ ಅಂತಿಮ ತೀರ್ಪು ಫೆಬ್ರವರಿ 25, 2015ರಂದು ನೀಡಲು ಮುಂದಾಗಿತ್ತು. ಆದರೆ, 5 ಪ್ರಮುಖ ಸಾಕ್ಷಿಗಳ ಮರು ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಮತ್ತೊಮ್ಮೆ ಸಲ್ಮಾನ್ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Arms Act case: Jodhpur court acquits Salman Khan : A Jodhpur court on Wednesday pronounced its verdict in a case where Bollywood actor Salman Khan has been charged under the Arms Act. This is one of the four cases against the actor.
Please Wait while comments are loading...