ಝಾಕೀರ್ ನಾಯ್ಕ್ ತಲೆಗೆ ಬೆಲೆ ಕಟ್ಟಿದ ಸಾಧ್ವಿ ಪ್ರಾಚಿ

Posted By:
Subscribe to Oneindia Kannada

ನವದೆಹಲಿ, ಜುಲೈ 14: ಇಸ್ಲಾಮಿಕ್ ಧಾರ್ವಿುಕ ಬೋಧಕ, ಪೀಸ್ ಟಿ.ವಿ ಮಾಲೀಕ ಝಾಕೀರ್ ನಾಯ್ಕ್ ತಲೆಗೆ ಸಾಧ್ವಿ ಪ್ರಾಚಿ ಅವರು ಬೆಲೆ ಕಟ್ಟಿದ್ದಾರೆ. ಝಾಕೀರ್ ತಲೆ ಕಡಿದು ತಂದವರಿಗೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ಅವರು ಬುಧವಾರದಂದು ಘೋಷಿಸಿದ್ದಾರೆ.

ದ್ವೇಷ ಭಾಷಣದ ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಝಾಕೀರ್ ನಾಯ್ಕ್ ಧಾರ್ವಿುಕ ಬೋಧಕನಲ್ಲ. ಭಯೋತ್ಪಾದಕ ಎಂದು ಸಾಧ್ವಿ ಅವರು ಬಹಿರಂಗವಾಗಿ ಘೊಷಿಸಿದ್ದಾರೆ.[ಬಾಂಗ್ಲಾದಲ್ಲಿ ಬಾಂಬ್ ಎಸೆದವರ ಮೇಲೆ ಪೊಲೀಸರ ಗುಂಡಿನ ದಾಳಿ]

Sadhvi Prachi offers Rs 50-lakh reward for Zakir Naik’s Head

ಝಾಕೀರ್ ಮಾದರಿಯ ಅನೇಕ ಬೋಧಕರು ಮದರಸಾಗಳಲ್ಲಿದ್ದಾರೆ. ನಾಯ್ಕ್ ತಲೆಗೆ ಬೆಲೆ ಕಟ್ಟಿದ್ದು ನನ್ನ ವೈಯಕ್ತಿಕ ಹೇಳಿಕೆ. ಇದರ ಹಿಂದೆ ಯಾವುದೇ ಸಂಘಟನೆಯ ಕುಮ್ಮಕ್ಕು ಇಲ್ಲ. ಈ ಬಹುಮಾನದ ಮೊತ್ತವನ್ನು ನಾನೇ ನೀಡುತ್ತೇನೆ. ಇದಕ್ಕಾಗಿ ಸರ್ಕಾರ ಅಧವಾ ವಿವಿಧ ಸಂಘಟನೆಯ ಮೊರೆಹೋಗುವುದಿಲ್ಲ ಎಂದು ರೂರ್ಕಿಯಲ್ಲಿ ಸ್ಷಷ್ಟನೆ ನೀಡಿದ್ದಾರೆ.[ಝಕೀರ್ ನಾಯ್ಕ್‌ ಮುಂಬೈಗೆ ಬರ್ತಾ ಇಲ್ಲ!]

ಬಾಂಗ್ಲಾದೇಶದಲ್ಲಿನ ರೆಸ್ಟೊರೆಂಟ್ ಮೇಲೆ ದಾಳಿ ನಡೆಸಿದ್ದ ಉಗ್ರರಿಗೆ ಝಾಕೀರ್ ನಾಯ್ಕ್ ನ ಭಾಷಣವೇ ಪ್ರೇರಣೆಯಾಗಿದೆ ಎಂಬ ಆರೋಪವಿದೆ. ಈ ಚಾನೆಲ್​ನಲ್ಲಿ ಪ್ರಸಾರವಾದ ಜಾಕಿರ್ ಭಾಷಣ ಕೇಳಿ ಉಗ್ರರು ಪ್ರಭಾವಿತರಾಗಿದ್ದರು ಎಂಬ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ನಿಷೇಧ ಹೇರಲಾಗಿದೆ.[ಕರ್ನಾಟಕದ ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ]

ದುಬೈನಿಂದ ಪ್ರಸಾರವಾಗುತ್ತದೆ ಎಂದು ತಿಳಿದು ಬಂದಿರುವ ಈ ಟಿವಿ ಚಾನಲ್ ಭಾರತದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಮನೆಮನೆಗೂ ತಲುಪುತ್ತಿದೆ. ಈಗಾಗಲೇ ಜಾಕಿರ್ ನಾಯಕ್​ನ ಭಾಷಣಗಳ ಮೇಲೆ ನಿಗಾವಹಿಸಲು ರಾಷ್ಟ್ರಿಯ ತನಿಖಾ ಸಂಸ್ಥೆ ನಿರ್ಧರಿಸಿದೆ. ಆದರೆ, ಮುಂಬೈಗೆ ಬರಬೇಕಿದ್ದ ಝಾಕೀರ್ ನಾಯ್ಕ್ ಸದ್ಯ ಆಫ್ರಿಕಾ ಪ್ರವಾಸದಲ್ಲಿದ್ದು, ಆತನ ಮೇಲೆ ಯಾವುದೇ ಸಾಕ್ಷಿ ಇಲ್ಲದ ಕಾರಣ ಬಂಧನ ಭೀತಿಯಿಂದ ಬಚಾವಾಗಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pro-Hindutva leader Sadhvi Prachi Wednesday announced a reward of Rs 50 lakh to any person “who will behead” Islamic preacher and televangelist Zakir Naik.
Please Wait while comments are loading...