ತೆಂಡೂಲ್ಕರ್ ಫುಟ್ಬಾಲ್ ತಂಡ ಹೆಸರು ಅನಾವರಣ

ಬೆಂಗಳೂರು, ಮೇ.27: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್ ) ಪುಟ್ಬಾಲ್ ಟೂರ್ನಮೆಂಟ್‌ನಲ್ಲಿ ಆಡಲಿರುವ ಕೊಚ್ಚಿ ಟೀಂನ ಸಹ ಮಾಲೀಕರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ಎಂದು ಹೆಸರಿಟ್ಟಿದ್ದಾರೆ. ಮಂಗಳವಾರ ಕೇರಳ ಸಿಎಂ ಊಮ್ಮನ್ ಚಾಂಡಿ ಅವರನ್ನು ಭೇಟಿ ಮಾಡಿದ ನಂತರ ತಮ್ಮ ತಂಡದ ಹೊಸ ಅನಾವರಣಗೊಳಿಸಿದರು.

ಇದೇ ವೇಳೆ ಜನವರಿ-ಫೆಬ್ರವರಿ 2015ರಲ್ಲಿ ಕೇರಳದಲ್ಲಿ ನಡೆಯಲಿರುವ ದೇಶೀಯ ಕ್ರೀಡಾಕೂಟದ ಗುಡ್ ವಿಲ್ ಅಂಬಾಸಿಡರ್ ಆಗಲು ಚಾಂಡಿ ಸಚಿನ್‌ರಲ್ಲಿ ಮನವಿ ಮಾಡಿದ್ದು, ಸಚಿನ್ ಇದಕ್ಕೆ ಒಪ್ಪಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಚಿನ್ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸಚಿನ್ ರನ್ನು ಸ್ವಾಗತಿಸಿದರು.

Sachin Tendulkar's football team - Kerala Blasters

ಮುಖ್ಯಮಂತ್ರಿ ಚಾಂಡಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಸಚಿನ್ ಕೇರಳಿಗರ ಪ್ರೀತಿ ಮತ್ತು ವಾತ್ಸಲ್ಯದಿಂದ ನನಗೆ ಅತೀವ ಸಂತೋಷವಾಗಿದ್ದು, ನಾನು ಮೂಕವಿಸ್ಮಿತ, ಮುಂಬರುವ ರಾಷ್ಟೀಯ ಕ್ರೀಡಾಕೂಟದಲ್ಲಿ ರಾಯಭಾರಿಯಾಗಿ ನಾನು ನಿಮ್ಮ ಬೆಂಬಲಕ್ಕೆ ಇರುತ್ತೇನೆ. ನನ್ನನ್ನು ಜನರು ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯುತ್ತಿದ್ದಾರೆ, ಆದ್ದರಿಂದಲೇ ತನ್ನ ತಂಡಕ್ಕೆ ಈ ರೀತಿ ಹೆಸರಿಟ್ಟಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.

ನಾನು ಕ್ರಿಕೆಟ್ ಆಡುತ್ತಾ ಬೆಳೆದವನು. ಆದರೆ ನನಗೆ ಹಾಕಿ, ಫುಟ್ಬಾಲ್ , ಬ್ಯಾಡ್ಮಿಂಟನ್ ಆಟಗಳಲ್ಲಿಯೂ ಆಸಕ್ತಿ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಹೇಳಿದ ಸಚಿನ್ ಇಂಡಿಯನ್ ಸೂಪರ್ ಲೀಗ್ ದೇಶದಲ್ಲಿ ಫುಟ್ಬಾಲ್ ಆಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಲಿದೆ ಎಂದು ನುಡಿದಿದ್ದಾರೆ.

ತೆಂಡೂಲ್ಕರ್ ಅವರು ಸುಮಾರು 1,25,000 ಶಾಲಾ ಮಕ್ಕಳಿಗೆ ತರಬೇತಿ ನೀಡಲು ಕ್ಲಬ್ ಬಳಸಿಕೊಳ್ಳುತ್ತಿದ್ದಾರೆ ಇದು ಅದ್ಭುತವಾದ ಕಾರ್ಯ ಎಂದು ಚಾಂಡಿ ಆವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+