Makara Jyothi 2026: ಶಬರಿಮಲೆ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ, ಸಾರಿಗೆ ವ್ಯವಸ್ಥೆ, ಸೂಕ್ತ ಬಿಗಿ ಭದ್ರತೆ
ಪಟ್ಟಣಂತಿಟ್ಟ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಪ್ರಸಿದ್ಧ ಶಬರಿಮಲೆ 'ಅಯ್ಯಪ್ಪ ಸ್ವಾಮಿ ದೇವರ' ದರ್ಶನಕ್ಕೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು, (ಮಾಲಾಧಾರಿಗಳು) ಆಗಮಿಸುತ್ತಾರೆ. ಮಕರ ಸಂಕ್ರಾಂತಿ ದಿನದಂದು ಕಾಣುವ 'ಜ್ಯೋತಿ' ದರ್ಶನ ಪಡೆದು ಪುನೀತರಾಗಲಿದ್ದಾರೆ. ಈ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಕರ ಜ್ಯೋತಿ (ಮಕರವಿಳಕ್ಕು) ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಸಂಬಂಧ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ಶಬರಿಮಲೆಯಲ್ಲಿ ಜ್ಯೋತಿ ದರ್ಶನದಂದು (ಜನವರಿ 14) ರಂದು ಅತ್ಯಧಿಕ ಜನದಟ್ಟಣೆ ಉಂಟಾಗಲಿದೆ. ಈ ಸಂಬಂಧ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರಿಗೆ ವಿಶೇಷವಾಗಿ 1000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ವಾರ್ಷಿಕ ಮಕರವಿಳಕ್ಕು ಹಬ್ಬದ ದಟ್ಟಣೆ ಗಮನಿಸಿ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಬುಧವಾರ ಹಬ್ಬದ ದಿನ ಸುಮಾರು 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದೆ.

ಹೈಕೋರ್ಟ್ ಆದೇಶದಂತೆ, ಮಕರವಿಳಕ್ಕು ದಿನದಂದು ಸನ್ನಿಧಾನಂ (ದೇವಾಲಯ ಸಂಕೀರ್ಣ) ಪ್ರವೇಶವನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ 30,000 ಯಾತ್ರಾರ್ಥಿಗಳಿಗೆ ಮತ್ತು ಸ್ಪಾಟ್ ಬುಕಿಂಗ್ ಮೂಲಕ 5,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಮಂಡಳಿ ಸದಸ್ಯರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜನಸಂದಣಿ ನಿಯಂತ್ರಣಕ್ಕಾಗಿ ವರ್ಚುವಲ್ ಕ್ಯೂ ವ್ಯವಸ್ಥೆ ಮಾಡಲಾಗಿದೆ. ಪಂಪಾ, ನಿಲಕ್ಕಲ್ ಭಾಗಗಳಲ್ಲಿ ಶಾಂತಿಯುವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇರಳ ಹೈಕೋರ್ಟ್ ಆದೇಶದ ಮೇರೆಗೆ ಒಂದಷ್ಟು ನಿರ್ಬಂಧಗಳು, ಕ್ಯೂವ್ಯವಸ್ಥೆಯಲ್ಲಿ ನಿಯಮ ಜಾರಿಗೆ ತರಲಾಗಿದೆ. ಡಿಸೆಂಬರ್ ತಿಂಗಳಲ್ಲಿನಲ್ಲಿ ಮಂಡಲ ಪೂಜೆಗೆ ಮಾಲಾಧಾರಿಗಳು ಶಬರಿಮಲೆ ಬರುತ್ತಾರೆ. ಬಹುತೇಕ ಭಕ್ತರು ಈ ದಿವ್ಯ ಜ್ಯೋತಿ ದರ್ಶನಕ್ಕಾಗಿ ಮಕರ ಸಂಕ್ರಾಂತಿಯಂದು ಆಗಮಿಸುತ್ತಾರೆ.
ಅಯ್ಯಪ್ಪನ ಉಪವಾಸವು ಈ ಮಕರ ಸಂಕ್ರಾಂತಿಯಂದು ಅಂತ್ಯಗೊಳ್ಳುತ್ತದೆ. ಅಯ್ಯಪ್ಪ ಸ್ವತಃ ಆಗಸದಲ್ಲಿ ಸಂಜೆ ನಂತರ ಜ್ಯೋತಿ ಕಾಣುತ್ತದೆ. ಜ್ಯೋತಿ ರೂಪದಲ್ಲಿ ಬಂದ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಅಷ್ಟೊಂದು ಭಕ್ತರು ಇಲ್ಲಿ ಸೇರಿರುತ್ತಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಕೇರಳ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಮಹತ್ವ ಕ್ರಮ ಕೈಗೊಂಡಿದ್ದಾರೆ.
30 ಸಾವಿರ ಮಂದಿಗೆ ಜ್ಯೋತಿ ದರ್ಶನ
ಶಬರಿಮಲೆಯಲ್ಲಿ ಸೇರುವ ಜನಸಾಗರ ನೋಡಿಕೊಂಡು ಈ ಬಾರಿ ಜನವರಿ 14ರಂದು ಮಕರ ಜ್ಯೋತಿ ದರ್ಶನವನ್ನು 30,000 ಜನರಿಗೆ ಸಿಮೀತಗೊಳಿಸಲಾಗಿದೆ. ಜನವರಿ 13ರಂದು ಮಂಗಳವಾರ ಕ್ಯೂ ಮೂಲಕ 35 ಸಾವಿರ ಜನರು ಹಾಗೂ ಸ್ಮಾರ್ಟ್ ಬುಕ್ಕಿಂಗ್ ಮೂಲಕ 5,000 ಜನರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿದೆ.
ನಂತರ ಜನವರಿ 15ರಿಂದ 18ರವರೆಗೆ ವರ್ಚುವಲ್ ಮೂಲಕ 5000 ಜನರಿಗೆ ಸ್ಪಾಟ್ ಬುಕಿಂಗ್ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುವುದು. ಜನವರಿ 19ಕ್ಕೆ ಭಕ್ತರ ಸಂಖ್ಯೆ 30 ಸಾವಿರಕ್ಕೆ ತಗ್ಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಬುಧವಾರ (ಜ.14) ಪಂಪಾ-ನಿಲಕ್ಕಲ್ ಮಾರ್ಗದಲ್ಲಿ ಭಕ್ತರ ಸಂಚಾರ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಅಲ್ಲಿಂದ ನಡೆದುಕೊಂಡೆ ಹೋಗಬೇಕಿದೆ. ಜೊತೆಗೆ ಆ ಸ್ಥಳದಲ್ಲಿ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗಾಗಿ ಒಂದು ಸಾವಿರ ಕೆಎಸ್‌ಆರ್‌ಟಿಸಿ ಬಸ್ ಬಿಡಲಾಗಿದೆ. ಅಗತ್ಯ ನಿಯಮಗಳನ್ನು ಪಾಲಿಸುವ ಮೂಲಕ ಇಲ್ಲಿನ ಸೌಲಭ್ಯ ಪಾಲಿಸುವಂತೆ ಕೋರಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications