ಮತ್ತೆ ಶಬರಿಮಲೆ ಸುದ್ದಿ, ಮಹಿಳೆ ಪ್ರವೇಶ ಅರ್ಜಿ ಸಾಂವಿಧಾನಿಕ ಪೀಠಕ್ಕೆ

Posted By:
Subscribe to Oneindia Kannada

ಶಬರಿಮಲೆ ದೇಗುಲದ ಪದ್ಧತಿಯೊಂದು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಒಂದಷ್ಟು ಅರ್ಜಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದು, ಹತ್ತರಿಂದ ಐವತ್ತು ವರ್ಷದೊಳಗಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲದೊಳಗೆ ಪ್ರವೇಶ ಇಲ್ಲ ಎಂಬ ನಿಯಮದ ವಿರುದ್ಧ ಒಂದಷ್ಟು ಅರ್ಜಿಗಳನ್ನು ಸುಪ್ರೀಂ ಅಂಗಳದಲ್ಲಿತ್ತು.

ಸುಪ್ರೀಂ ಕೋರ್ಟ್ ಈ ಅರ್ಜಿ ವಿಚಾರಣೆಯನ್ನು ಶುಕ್ರವಾರ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ದೇಶ- ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇಗುಲಕ್ಕೆ ಹತ್ತರಿಂದ ಐವತ್ತು ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಪದ್ಧತಿ ಬಹಳ ಹಿಂದಿನಿಂದಲೂ ಇದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರು: ತನಿಖೆಗೆ ಆದೇಶ

ದೇಗುಲದ ಪ್ರವೇಶ ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಧಾರ್ಮಿಕ ಹಕ್ಕು ಹೌದೋ ಅಲ್ಲವೋ ಎಂಬುದನ್ನು ಸಾಂವಿಧಾನಿಕ ಪೀಠ ನಿರ್ಧರಿಸಲಿದೆ. ಮಹಿಳೆಯರ ಹಕ್ಕನ್ನು ದೇವಾಲಯದ ಆಡಳಿತ ಮಂಡಳಿ ನಿರಾಕರಿಸಲು ಸಾಧ್ಯವೇ ಎಂಬುದು ಚರ್ಚೆಯ ವಿಷಯವಾಗಿದೆ. ಅಲ್ಲಿನ ರಾಜ್ಯ ಸರಕಾರ ರೂಪಿಸಿರುವ ತಿರುವಾಂಕೂರ್ ದೇವಸ್ವಂ ಮಂಡಳಿ ಈ ನಿಯಮವನ್ನು ರೂಪಿಸಿದೆ.

ಮೂಲಭೂತ ಹಕ್ಕು ನಿರಾಕರಿಸುವಂತಿಲ್ಲ

ಮೂಲಭೂತ ಹಕ್ಕು ನಿರಾಕರಿಸುವಂತಿಲ್ಲ

ಆದರೆ, ಯಾವುದು ಕಾನೂನು ಭಾರತೀಯ ಸಂವಿಧಾನದಲ್ಲಿ ನೀಡಿದಂಥ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಂತಿಲ್ಲ. ದೇವಾಲಯದ ಅಧಿಕಾರಿಗಳು ಮಹಿಳೆಯರಿಗೆ ಪ್ರವೇಶ ನಿಷೇಧ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದು, ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದು ಹೇಳಿದ್ದಾರೆ.

ಲಿಂಗ ತಾರತಮ್ಯವೇ?

ಲಿಂಗ ತಾರತಮ್ಯವೇ?

ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ವೇಳೆ ನ್ಯಾಯಮೂರ್ತಿಗಳು, ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದು ಲಿಂಗ ತಾರತಮ್ಯವೇ, ಸಮಾನತೆ ಹಾಗೂ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯೇ ಎಂಬುದನ್ನು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಯ್ಯಪ್ಪ ಭಕ್ತರ ದೃಷ್ಟಿಯಲ್ಲಿಟ್ಟುಕೊಂಡು ಪರಾಮರ್ಶೆ

ಅಯ್ಯಪ್ಪ ಭಕ್ತರ ದೃಷ್ಟಿಯಲ್ಲಿಟ್ಟುಕೊಂಡು ಪರಾಮರ್ಶೆ

ಇನ್ನೊಂದು ಕಡೆ ಆರ್ಟಿಕಲ್ ಇಪ್ಪತ್ತೈದರ ಪ್ರಕಾರ (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು) ಅಯ್ಯಪ್ಪ ಭಕ್ತರ ದೃಷ್ಟಿಯಿಂದಲೂ ಈ ಪ್ರಕರಣವನ್ನು ಸಾಂವಿಧಾನಿಕ ಪೀಠ ಪರಾಮರ್ಶೆ ಮಾಡಲಿದೆ. ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವುದು ಹಿಂದೂ ಧಾರ್ಮಿಕ ಆಚರಣೆಯ ಮುಖ್ಯ ಭಾಗವೇ ಎಂಬುದನ್ನು ಕೂಡ ಗಮನಿಸಲಿದೆ.

ಶಬರಿಮಲೆ ಬೆಟ್ಟ ಹತ್ತುವುದಕ್ಕೂ ನಿಷೇಧ

ಶಬರಿಮಲೆ ಬೆಟ್ಟ ಹತ್ತುವುದಕ್ಕೂ ನಿಷೇಧ

ಒಂದು ಪಕ್ಷ ಹೌದು ಎಂದಾದಲ್ಲಿ, ಅದು ಸುಪ್ರೀಂ ಕೋರ್ಟ್ ನ ವ್ಯಾಪ್ತಿಯನ್ನು ಮೀರಿದಂತಾಗುತ್ತದೆ. ಇನ್ನು ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ಮಂಡಳಿಯು ಈ ನಿಯಮವನ್ನು ನೈತಿಕ ನೆಲೆಗಟ್ಟಿನಲ್ಲಿ ತಂದಿದೆಯೇ ಎಂಬುದನ್ನು ಕೂಡ ನಿರ್ಧಾರ ಮಾಡಲಿದೆ. ಸದ್ಯಕ್ಕೆ ಇರುವ ನಿಯಮದ ಪ್ರಕಾರ ಹತ್ತರಿಂದ ಐವತ್ತು ವರ್ಷದ ಸ್ತ್ರೀಗೆ ಶಬರಿಮಲೆ ಬೆಟ್ಟ ಹತ್ತುವುದಕ್ಕೂ ನಿಷೇಧವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Friday referred to a five-judge Constitution Bench, a bunch of petitions challenging the age-old practice in Kerala's famed Sabarimala temple of not allowing women aged between 10 and 50 to enter the temple.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ