ಡಿಸೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಭಾರತ ಭೇಟಿ
ನವದೆಹಲಿ, ನವೆಂಬರ್ 12; ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕೋವಿಡ್ ಪರಿಸ್ಥಿತಿಯ ಬಳಿಕ 2ನೇ ಬಾರಿ ಪುಟಿನ್ ವಿದೇಶ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ವಾರ್ಷಿಕ ಶೃಂಗಸಭೆಗಾಗಿ ವ್ಲಾದಿಮಿರ್ ಪುಟಿನ್ ಡಿಸೆಂಬರ್ 6 ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಒಂದು ದಿನದ ಭೇಟಿಯಲ್ಲಿ ಅವರು ನವದೆಹಲಿಯಲ್ಲಿ ಇರಲಿದ್ದು, ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಫ್ಘಾನಿಸ್ತಾನ ಕುರಿತು ಮಾತುಕತೆಗಾಗಿ ರಷ್ಯಾ ನೀಡಿದ ಆಹ್ವಾನ ತಿರಸ್ಕರಿಸಿದ ಅಮೆರಿಕ
ಒಂದು ದಿನದ ಭೇಟಿಯ ವೇಳೆ ವ್ಲಾದಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 2018ರಲ್ಲಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದರು. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಶೃಂಗ ಸಭೆ ಮುಂದೂಡಲಾಗಿತ್ತು.
ರಷ್ಯಾ ಸಂಸತ್ ಚುನಾವಣೆ: ಪುಟಿನ್ ಪಕ್ಷಕ್ಕೆ ಭಾರಿ ಬಹುಮತ
ಈ ವರ್ಷ ರಷ್ಯಾ ಅಧ್ಯಕ್ಷರ 2ನೇ ವಿದೇಶದ ಭೇಟಿ ಇದಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಜೊತೆಗಿನ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ವ್ಲಾದಿಮಿರ್ ಪುಟಿನ್ ಈ ವರ್ಷ ಮೊದಲ ಪ್ರವಾಸವನ್ನು ಜಿನೀವಾಕ್ಕೆ ಕೈಗೊಂಡಿದ್ದರು.
ಅಫ್ಘಾನಿಸ್ತಾನ ಬೆಳವಣಿಗೆ ಬಗ್ಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಉಲ್ಲೇಖ
ಭಾರತ ರಷ್ಯಾ ಮತ್ತು ಜಪಾನ್ ನಡುವೆ ಇಂತಹ ವಾರ್ಷಿಕ ಶೃಂಗ ಸಭೆಗಳನ್ನು ನಡೆಸುತ್ತಿದೆ. ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಕಾರಣ ಎರಡೂ ಶೃಂಗ ಸಭೆಗಳನ್ನು ಮುಂದೂಡಲಾಗಿತ್ತು. 2109ರಲ್ಲಿ ರಷ್ಯಾದಲ್ಲಿ ನಡೆದ ಶೃಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದರು.
2018ರಲ್ಲಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದಾಗ ಉಭಯ ದೇಶಗಳ ನಡುವೆ ಎಸ್ 400 ವಾಯು ರಕ್ಷಣಾ ವ್ಯವಸ್ಥೆಗಳ ಒಪ್ಪಂದ ನಡೆದಿತ್ತು. ಇದರ ಮೊದಲ ಬ್ಯಾಚ್ ಈ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ಆಗಮಿಸಲಿದ್ದು, ಇದೇ ಸಮಯದಲ್ಲಿ ವಾರ್ಷಿಕ ಶೃಂಗ ನಡೆಯುತ್ತಿದೆ.
ಇದುವರೆಗೂ ಭಾರತ ಮತ್ತು ರಷ್ಯಾದಲ್ಲಿ 20 ಪರ್ಯಾಯ ವಾರ್ಷಿಕ ಶೃಂಗ ಸಭೆಗಳು ನಡೆದಿವೆ. ಕೋವಿಡ್ ಪರಿಸ್ಥಿತಿಯಲ್ಲಿ ನಡೆಯುವ ಶೃಂಗ ಸಭೆಯಲ್ಲಿ ಕೊರೊನಾ ವಿಚಾರದ ಕುರಿತು ಚರ್ಚೆಗಳು ನಡೆಯುತ್ತವೆ.
ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ. ಭಾರತದಲ್ಲಿಯೇ ಈ ಲಸಿಕೆ ಉತ್ಪಾದನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ರಷ್ಯಾ ಭಾರತಕ್ಕೆ ಮಾನವೀಯ ನೆಲೆಯಲ್ಲಿ ವೈದ್ಯಕೀಯ ಸಹಕಾರವನ್ನು ನೀಡಿತ್ತು.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೋಲಾಯ್ ಪಿ. ಎರಡು ಬಾರಿ ನವದೆಹಲಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಕುರಿತು ಚರ್ಚೆಯನ್ನು ನಡೆಸಿದ್ದರು.
ಭಾರತ ರಷ್ಯಾದ ಜೊತೆ ರಕ್ಷಣಾ ವಲಯದಲ್ಲಿ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳ ಕುರಿತು ಈ ಬಾರಿಯ ವಾರ್ಷಿಕ ಶೃಂಗ ಸಭೆಯಲ್ಲಿ ಮಾತುಕತೆಗಳು ನಡೆಯುವ ನಿರೀಕ್ಷೆ ಇದೆ.
ಭಾರತ ಮತ್ತು ರಷ್ಯಾ ಪ್ರಮುಖ ಒಪ್ಪಂದಗಳು
* ಭಾರತ-ರಷ್ಯಾ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಳಕ್ಕೆ ಜಂಟಿ ವ್ಯೂಹ
* ಸೇನಾ ಸಲಕರಣೆಗಳ ಬಿಡಿ ಭಾಗಗಳ ಉತ್ಪಾದನೆಯಲ್ಲಿ ಸಹಕಾರ ಒಪ್ಪಂದ
* ಭಾರತ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ರಷ್ಯನ್ ಒಕ್ಕೂಟದ ಸಾರಿಗೆ ಸಚಿವಾಲಯದ ನಡುವೆ ರಸ್ತೆ ಸಾರಿಗೆ ಹಾಗೂ ರಸ್ತೆ ಉದ್ಯಮದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳುವಳಿಕೆ ಒಡಂಬಡಿಕೆ
* ಭಾರತ ಮತ್ತು ರಷ್ಯಾ ನಡುವೆ ಚೆನ್ನೈ ಬಂದರು ಮತ್ತು ರಷ್ಯನ್ ಒಕ್ಕೂಟದ ವ್ಲಾದಿವೋಸ್ಟೋಕ್ ಬಂದರು ನಡುವೆ ನಾವಿಕ ಸಂಪರ್ಕ ಅಭಿವೃದ್ದಿಗೆ ಒಡಂಬಡಿಕೆ.
* ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ನಡುವೆ ಸಾರಿಗೆಗಾಗಿ ನೈಸರ್ಗಿಕ ಅನಿಲ ಬಳಕೆಗಾಗಿ ತಿಳುವಳಿಕಾ ಒಡಂಬಡಿಕೆ
* ರಷ್ಯಾದ ಪೂರ್ವದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಫಾರ್ ಈಸ್ಟ್ ಇನ್ವೆಸ್ಟ್ಮೆಂಟ್ ಹಾಗು ರಫ್ತು ಏಜೆನ್ಸಿ ನಡುವೆ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳ ಅನುಷ್ಟಾನದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.