ಭಾರತ ವಿರೋಧಿ ಕೆಲಸ ಮಾಡುತ್ತಿದೆಯಾ ಅಮೆರಿಕ?
ಭಾರತದ ವಿಚಾರದಲ್ಲಿ ಅಮೆರಿಕ ಇತ್ತೀಚೆಗೆ ಪದೇ ಪದೇ ಕಾಲು ಕೆರೆದುಕೊಂಡು, ಕಿರಿಕಿರಿ ಕಿರಿಕ್ ಮಾಡುತ್ತಿದೆ ಅನ್ನೋ ಆರೋಪ ಇದೆ. ಈ ಪೈಕಿ 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಅಮೆರಿಕ ಈ ರೀತಿ ಕುತಂತ್ರ ಹೆಚ್ಚು ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ ರಷ್ಯಾ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಕಿಚ್ಚು ಹೊತ್ತಿಕೊಂಡಿದೆ. ಅಸಲಿಗೆ ರಷ್ಯಾ ಈಗ ಅಮೆರಿಕ ವಿರುದ್ಧ ಮತ್ತು ಭಾರತದ ಪರ ನೀಡಿರುವ ಹೇಳಿಕೆಯಾದ್ರು ಏನು? ಬನ್ನಿ ತಿಳಿಯೋಣ.
ರಷ್ಯಾ & ಅಮೆರಿಕ ನಡುವೆ ಭರ್ಜರಿ ತಿಕ್ಕಾಟ ನಡೆಯುತ್ತಿದೆ ಕೆಲ ರಾಷ್ಟ್ರಗಳು ರಷ್ಯಾ ಹಿಂದೆ ನಿಂತರೆ, ಇನ್ನೂ ಕೆಲ ದೇಶಗಳು ಅಮೆರಿಕದ ಬೆನ್ನಿಗೆ ನಿಂತಿವೆ. ಈ ಮೂಲಕ ಜಗತ್ತು ಈಗ ಎರಡು ಓಳಾಗಿ ಹೋಗುತ್ತಿದೆ. ಇದೇ ಸಮಯದಲ್ಲಿ ಭಾರತ ಮತ್ತು ಅಮೆರಿಕ ನಡುವೆಯೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ನಡುವೆ ಕೂಡ, ಎರಡೂ ದೇಶಗಳ ಸಂಬಂಧ ಉತ್ತಮವಾಗಿ ಇದೆ. ಇಷ್ಟಾದರೂ ಅಮೆರಿಕ ಬೇಕು ಅಂತಾ ಭಾರತದ ಆಂತರಿಕ ವಿಚಾರದಲ್ಲಿ ಕೈಹಾಕುತ್ತಿದೆ ಎಂದು ರಷ್ಯಾ ಈಗ ಗಂಭೀರ ಆರೋಪ ಮಾಡುತ್ತಿದೆ.

ಅಮೆರಿಕಗೆ ಪೆಟ್ಟು ಕೊಟ್ಟ ರಷ್ಯಾ?
ಶ್ವೇತಭವನ ಅಂದ್ರೆ ಅಮೆರಿಕ ಅಧ್ಯಕ್ಷರ ಅಧಿಕೃತ ಗೃಹ ಕಚೇರಿ ಭಾರತದಲ್ಲಿ ನಡೆಯುತ್ತಿರುವ 2024ರ ಲೋಕಸಭೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯ ಸಂಕೀರ್ಣಗೊಳಿಸಲು ಪ್ರಯತ್ನ ಮಾಡುತ್ತಿದೆ. ಈ ಮೂಲಕ ಅಮೆರಿಕ ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯನ್ನ ಅಲುಗಾಡಿಸಲು ಯತ್ನಿಸುತ್ತಿದೆ. ಈ ಮೂಲಕ ಅಮೆರಿಕ ಭಾರತದ ಆಂತರಿಕ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡಿದಂತೆ ಆಗಿದೆ ಎಂದು ರಷ್ಯಾ ಇದೀಗ ಆರೋಪ ಮಾಡಿದೆ. ಹೀಗಾಗಿ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇದರ ಜೊತೆಗೆ ಖಲಿಸ್ತಾನಿಗಳ ವಿಚಾರ ಕೂಡ ಪ್ರಸ್ತಾಪ ಮಾಡಿದೆ ರಷ್ಯಾ.
ಭಾರತದ ವಿರುದ್ದ ಅಮೆರಿಕ ಕುತಂತ್ರ?
ಇನ್ನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನದ ಸಂಚಲ್ಲಿ, ಭಾರತ ಮೂಲದವರು ಭಾಗಿ ಆಗಿದ್ದಾರೆ ಎಂಬುದಕ್ಕೆ ಅಮೆರಿಕ ಯಾವುದೇ ಪುರಾವೆ ನೀಡಿಲ್ಲ. ಆದರೂ ಭಾರತದ ವಿರುದ್ಧ ಈ ರೀತಿಯಾಗಿ ತಲೆ & ಬುಡ ಇಲ್ಲದ ಆರೋಪ ಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ, ಅಮೆರಿಕದ ಈ ನಡೆ ಖಂಡನಾರ್ಹ ಎಂದಿದೆ ರಷ್ಯಾ.

ಮತ್ತೊಂದು ಕಡೆ ರಷ್ಯಾ & ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ. ಉಕ್ರೇನ್ & ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಭಾರತ ಇದೀಗ ರಷ್ಯಾ ಪರವಾಗಿದೆ. ನೇರವಾಗಿ ರಷ್ಯಾ ಪರವಾಗಿದ್ದೇವೆ ಎಂಬ ವಿಚಾರವನ್ನು ಭಾರತ ಸಮರ್ಥನೆ ಮಾಡಿಕೊಳ್ಳದೆ ಇದ್ದರೂ, ಪರೋಕ್ಷವಾಗಿ ಅಮೆರಿಕಗೆ ಈ ಬಗ್ಗೆ ಸೂಚನೆ ನೀಡುತ್ತಿದೆ ಭಾರತ. ಇತಿಹಾಸದ ಪುಟಗಳ ತೆರೆದು ನೋಡಿದರೆ ರಷ್ಯಾ ಜೊತೆಗಿನ ಭಾರತದ ಸಂಬಂಧ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಗಟ್ಟಿಯಾಗುತ್ತಿದೆ.












Click it and Unblock the Notifications