ಸಾಲ ಸೌಲಭ್ಯದಡಿಯಲ್ಲಿ ಕೇಂದ್ರದಿಂದ 44,000 ಕೋಟಿ ರೂ. ಬಿಡುಗಡೆ; ಕರ್ನಾಟಕಕ್ಕೆ ಅತ್ಯಧಿಕ ಸಾಲ
ನವದೆಹಲಿ, ಅಕ್ಟೋಬರ್ 29: ಜಿಎಸ್‌ಟಿ ಪರಿಹಾರದ ಬದಲಿಗೆ ಬ್ಯಾಕ್ ಟು ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 44,000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬದಲಾಗಿ ಬ್ಯಾಕ್ ಟು ಬ್ಯಾಕ್ ಸಾಲವಾಗಿ ಬಿಡುಗಡೆಯಾದ ಒಟ್ಟು ಮೊತ್ತ 1,59,000 ಕೋಟಿ ರೂ. ಆಗಿದೆ. ಇದು ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್‌ಟಿ ಪರಿಹಾರಕ್ಕೆ ಹೆಚ್ಚುವರಿಯಾಗಿದೆ.
ಕೇಂದ್ರ ಸರಕಾರವು 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ, ಸಂಪನ್ಮೂಲ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬ್ಯಾಕ್ ಟು ಬ್ಯಾಕ್ ಆಧಾರದ ಮೇಲೆ ಸಾಲ ಬಿಡುಗಡೆ ಮಾಡಲು ನಿರ್ಧರಿಸಿತು. ಕಳೆದ ಆರ್ಥಿಕ ವರ್ಷದಲ್ಲಿ ಇದೇ ರೀತಿಯ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ 1.10 ಲಕ್ಷ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿತ್ತು.

ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ 1.59 ಲಕ್ಷ ಕೋಟಿ ಮೊತ್ತವು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲು ಅಂದಾಜಿಸಲಾದ 1 ಲಕ್ಷ ಕೋಟಿ ರೂ. (ಸೆಸ್ ಸಂಗ್ರಹದ ಆಧಾರದ ಮೇಲೆ) ಪರಿಹಾರಕ್ಕಿಂತ ಹೆಚ್ಚಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವು ಒಟ್ಟು 2.59 ಲಕ್ಷ ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ.
ಈಗ ಬಿಡುಗಡೆ ಮಾಡಲಾಗಿರುವ 44,000 ಕೋಟಿಯನ್ನು ಭಾರತ ಸರಕಾರ ಹಣಕಾಸು ಸಚಿವಾಲಯವು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಡೆದ ಶೇ.5.69 ಬಡ್ಡಿ ದರದ 5 ವರ್ಷಗಳ ಭದ್ರತಾ ಪತ್ರ ಆಧಾರಿತ ಸಾಲದಿಂದ ಎತ್ತುವಳಿ ಮಾಡಲಾಗಿದೆ. ಈ ಬಿಡುಗಡೆಯ ಕಾರಣದಿಂದ ಕೇಂದ್ರ ಸರಕಾರವು ಯಾವುದೇ ಹೆಚ್ಚುವರಿ ಮಾರುಕಟ್ಟೆ ಸಾಲವನ್ನು ಪಡೆಯುವ ಅಗತ್ಯ ಇರುವುದಿಲ್ಲ.
ಈ ಹಣದ ಬಿಡುಗಡೆಯಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸಾರ್ವಜನಿಕ ವೆಚ್ಚವನ್ನು ಇತರ ವಿಷಯಗಳ ಜೊತೆಗೆ ಸುಧಾರಣೆ, ಆರೋಗ್ಯ ಮೂಲಸೌಕರ್ಯ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇಂದು ಬಿಡುಗಡೆಯಾದ ಮೊತ್ತದಲ್ಲಿ ದೊಡ್ಡ ಪಾಲವನ್ನು ಪಡೆದಿರುವುದು ಕರ್ನಾಟಕ ರಾಜ್ಯ. ಅತ್ಯಧಿಕ ಅಂದರೆ 5,010.9 ಕೋಟಿ ರೂ. ಕರ್ನಾಟಕ ರಾಜ್ಯಕ್ಕೆ ಸಿಗುತ್ತಿದೆ. ಗುಜರಾತ್ 3608.53 ಕೋಟಿ ರೂ., ಹರಿಯಾಣ 2045.79 ಕೋಟಿ ರೂ., ಕೇರಳ 2418.49 ಕೋಟಿ ರೂ., ಮಹಾರಾಷ್ಟ್ರ 3814 ಕೋಟಿ ರೂ., ಪಂಜಾಬ್ 3357.48 ಕೋಟಿ ರೂ., ಉತ್ತರ ಪ್ರದೇಶ 2252.37 ಕೋಟಿ ರೂ. ಸೇರಿದಂತೆ ಒಟ್ಟು 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ.
Recommended Video
-
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ











Click it and Unblock the Notifications