ದೇಶದ ಜನತೆಗೆ ಮೋದಿ ಗುಡ್ ನ್ಯೂಸ್ : ತೆರಿಗೆ ಭಾರೀ ಇಳಿಕೆ, ವಿಕಸಿತ ಭಾರತ್ ರೋಜ್ ಗಾರ್ ಯೋಜನೆ ಜಾರಿ
ನವದೆವಲಿ, ಆಗಸ್ಟ್ 15: ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಉಡುಗೊರೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಈ ವರ್ಷ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಭಾರತೀಯರಿಗೆ ದೊಡ್ಡ ಗಿಫ್ಟ್ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ದೇಶದ ಯುವಜನತೆಗೆ ಪ್ರಧಾನಿ ಮೋದಿ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದಲೇ ವಿಕಸಿತ ಭಾರತ ರೋಜ್ ಗಾರ್ ಯೋಜನೆ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.
ಇಂದು(ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಗೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ನಾವು 1 ಲಕ್ಷ ಕೋಟಿ ರೂ.ಗಳ ಯೋಜನೆಯನ್ನು ತರುತ್ತಿದ್ದೇವೆ ಎಂದು ಮೋದಿ ಹೇಳಿದರು. ಇದರೊಂದಿಗೆ, ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಮೊದಲ ಉದ್ಯೋಗ ಪಡೆದಾಗ 15,000 ರೂ.ಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟವು ಈ ಹಿಂದೆ ಅನುಮೋದಿಸಿದ ಈ ಯೋಜನೆಯು ಆಗಸ್ಟ್ 1, 2025 ರಂದು ಪ್ರಾರಂಭವಾಯಿತು. ಇದು ಹಿಂದಿನ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು ಬದಲಾಯಿಸುತ್ತದೆ ಮತ್ತು ದೇಶಾದ್ಯಂತ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ.
99,446 ಕೋಟಿ ರೂಪಾಯಿಗಳ ಬಜೆಟ್ ನೊಂದಿಗೆ, ಎರಡು ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುವ ಗುರಿಯನ್ನು ಇದು ಹೊಂದಿದೆ. ಇವುಗಳಲ್ಲಿ ಸುಮಾರು 1.92 ಕೋಟಿ ಉದ್ಯೋಗಗಳು ಮೊದಲ ಬಾರಿಗೆ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಜನರಿಗೆ ಲಭ್ಯವಿರುತ್ತವೆ. ಈ ಪ್ರಯೋಜನಗಳು 1 ಆಗಸ್ಟ್ 2025 ಮತ್ತು 31 ಜುಲೈ 2027 ರ ನಡುವೆ ರಚಿಸಲಾದ ಉದ್ಯೋಗಗಳಿಗೆ ಅನ್ವಯಿಸುತ್ತವೆ.
ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಉಡುಗೊರೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ವರ್ಷ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದು, ತೆರಿಗೆ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಅಗತ್ಯ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ. ಈ ದೀಪಾವಳಿಯ ಹೊತ್ತಿಗೆ, ನೀವು ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಹೊಸ, ಸರಳೀಕೃತ ಜಿಎಸ್ಟಿ ರಚನೆಯನ್ನು ನೀವು ಕಾಣುತ್ತೀರಿ ಈ ಬದಲಾವಣೆಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇನ್ನೂ ಕಳೆದ ಎಂಟು ವರ್ಷಗಳಲ್ಲಿ ನಾವು ಜಿಎಸ್ಟಿ ಮೂಲಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಎಂಟು ವರ್ಷಗಳ ನಂತರ, ನಾವು ಅದನ್ನು ಪರಿಶೀಲಿಸುವುದು ಈ ಸಮಯದ ಅಗತ್ಯವಾಗಿದೆ. ನಾವು ಅದನ್ನು ಪರಿಶೀಲಿಸಿದ್ದೇವೆ. ರಾಜ್ಯಗಳೊಂದಿಗೆ ಮಾತನಾಡಿದ್ದೇವೆ. ನಮ್ಮ ಕೈಗಾರಿಕೆಗಳು ದೊಡ್ಡ ಲಾಭವನ್ನು ಪಡೆಯುತ್ತವೆ. ದೈನಂದಿನ ವಸ್ತುಗಳು ಅಗ್ಗವಾಗುತ್ತವೆ, ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.












Click it and Unblock the Notifications