ವೈದ್ಯನ ಕೋಣೆಯಲ್ಲಿ ರೂ. 10 ಲಕ್ಷ ಮೌಲ್ಯದ ರೂ. 2 ಸಾವಿರ ನೋಟು

Posted By:
Subscribe to Oneindia Kannada

ಕೊಲ್ಕತ್ತಾ, ಡಿಸೆಂಬರ್, 1: ಕೇಂದ್ರ ಸರ್ಕಾರ ಹೊಸದಾಗಿ ಚಲಾವಣೆಗೆ ತಂದಿರುವ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಇನ್ನೂ ದೇಶದ ಹಲವು ಮಂದಿ ಕೈಗೆ ಸೇರಿಲ್ಲ. ಹಲವರು ನೋಡಿಯೂ ಇಲ್ಲ.

ಆದರೆ, ಕೊಲ್ಕತ್ತಾದ ಸ್ಟಾಕ್ ಲೇಕ್ ನಲ್ಲಿರುವ ಒಬ್ಬ ವೈದ್ಯನ ಕಚೇರಿಯಲ್ಲಿ ರೂ. 10ಲಕ್ಷ ಮೌಲ್ಯದ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಎನ್ ಫೋರ್ಸ್ ಮೆಂಟ್ ಡೈರಕ್ಟರೇಟ್ (ಇಡಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.[ಬೆಂಗಳೂರು: ಇಬ್ಬರ ಬಳಿ 4 ಕೋಟಿ ರು ಹೊಸ ನೋಟು ಪತ್ತೆ]

Rs. 10 lakh in new notes found in doctor's chamber during ED raid

ಹೊಸ ನೋಟುಗಳ ಜತೆ ವಿದೇಶಿ ಕರೆನ್ಸಿಯನ್ನೂ ಸಹ ಪೊಲೀಸರು ಪತ್ತೆ ಮಾಡಿದ್ದಾರೆ. ಇನ್ನು ಸ್ವಾಧೀನ ಪಡಿಸಿಕೊಂಡಿರುವ ಹಣಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ನಗದು ಕೊರತೆ ಸಮಸ್ಯೆ ಹೆಚ್ಚಾಗಿರುವುದರಿಂದ ದೇಶದಾದ್ಯಂತ 40 ಪ್ರದೇಶಗಳಲ್ಲಿ ದಾಳಿ ಮಾಡಿದ್ದರು. ಕೊಲ್ಕತ್ತಾದಲ್ಲಿ ಆರು, ಪಾರಾದೀಪ್ ಅಲ್ಲೆ ಎರಡು ಗುವಾಹಟಿಯಲ್ಲಿ ಎರಡು ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವೈದ್ಯನ ವಿರುದ್ಧ ಪಿಎಂಎಲ್ ಎ, ಫೆಮಾ ಕಾಯ್ದೆಯಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Enforcement Directorate officials raided the chamber of a well-known doctor in Salt Lake on Wednesday and recovered bundles of new notes. Their value had already cros sed Rs 10 lakh by late evening and counting was still on.
Please Wait while comments are loading...