ಚೇತನ್ ಭಗತ್ 'ಗರ್ಲ್ ಫ್ರೆಂಡ್' ವಿರುದ್ಧ 'ರಾಯಲ್' ಮೊಕದ್ದಮೆ
ನವದೆಹಲಿ, ಏ.22: ಜನಪ್ರಿಯ ಕಾದಂಬರಿಕಾರ ಚೇತನ್ ಭಗತ್ ವಿರುದ್ಧ ಬಿಹಾರದ ರಾಜ ಮನೆತನವೊಂದು ಒಂದು ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಿದೆ. ಚೇತನ್ ಅವರ ಇತ್ತೀಚಿನ 'ಹಾಫ್ ಗರ್ಲ್ ಫ್ರೆಂಡ್' ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ಬಿಹಾರದ ದುಮ್ರಾವೋ ಅರಸು ಮನೆತನದ ಬಗ್ಗೆ ಹಾಫ್ ಗರ್ಲ್ ಫ್ರೆಂಡ್ ಕಾದಂಬರಿಯಲ್ಲಿ ಚೇತನ್ ಅವರು ಕೆಟ್ಟದಾಗಿ ಬರೆದಿದ್ದಾರೆ. ಇದರಿಂದ ರಾಜ ಮನೆತನದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ದುಮ್ರಾವೋ ಅರಸು ವಂಶಸ್ಥ 67 ವರ್ಷ ವಯಸ್ಸಿನ ಯುವರಾಜ್ ಚಂದ್ರ ವಿಜಯ್ ಸಿಂಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. [ಕೃತಿ ಚೌರ್ಯ ಆರೋಪ ಅಲ್ಲಗಳೆದ ಚೇತನ್ ಭಗತ್]

ಹಾಫ್ ಗರ್ಲ್ ಫ್ರೆಂಡ್ ಕಾದಂಬರಿಯಲ್ಲಿ ದುಮ್ರಾವೋ ರಾಜ ಮನೆತನದವರನ್ನು ಕುಡುಕರು ಮತ್ತು ಗ್ಯಾಂಬ್ಲಿರ್ ಗಳೆಂದು ಚಿತ್ರೀಕರಿಸಿರುವುದು ಸಂಪೂರ್ಣ ರಾಜ ಕುಟುಂಬಕ್ಕೆ ಅವಮಾನಕಾರಿಯಾಗಿದೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ.
ಮಹಾರಾಜ ಬಹದ್ದೂರ್ ಕಮಲ್ ಸಿಂಗ್ ಅವರ ಹಿರಿಯ ಪುತ್ರ ಚಂದ್ರ ವಿಜಯ್ ಸಿಂಗ್ ಅವರ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. [ಚೇತನ್ ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]

ಅರ್ಜಿ ಸ್ವೀಕರಿಸಿದ ದೆಹಲಿ ಹೈಕೋರ್ಟ್ ಲೇಖಕ ಚೇತನ್ ಭಗತ್, ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಪ್ರಕಟಿಸಿದ ರೂಪಾ ಪಬ್ಲಿಕೇಷನ್ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿ ಮೇ.1ರೊಳಗೆ ಉತ್ತರಿಸುವಂತೆ ಸೂಚಿಸಿದೆ.
Meanwhile, have to write letter to the family in Dumraon explaining the meaning of fiction and imaginary stories. Will do so privately.
— Chetan Bhagat (@chetan_bhagat) November 24, 2014 ನವೆಂಬರ್ 2014ರಿಂದ ಈ ಕಾದಂಬರಿ ಕುರಿತಂತೆ ರಾಜ ಮನೆತನದ ಜೊತೆ ಚೇತನ್ ಭಗತ್ ಕಿತ್ತಾಟ ನಡೆಸಿದ್ದಾರೆ.ಆದರೆ, ರಾಜ ಪರಿವಾರದ ಮನವಿಗೆ ಚೇತನ್ ಪುರಸ್ಕರಿಸದ ಕಾರಣ ಮಾನನಷ್ಟ ಮೊಕದ್ದಮೆ ಹೂಡಬೇಕಾಯಿತು ಎಂದು ದುಮ್ರಾವೋ ಅರಸರ ಪರ ವಕೀಲರು ಹೇಳಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications