ಭವಿಷ್ಯನಿಧಿ (ಪಿಎಫ್) ಕಚೇರಿಯಿಂದ ಮಹತ್ವದ ಸರ್ಕ್ಯೂಲರ್

Posted By:
Subscribe to Oneindia Kannada
   ಭವಿಷ್ಯನಿಧಿ (ಪಿಎಫ್) ಕಚೇರಿಯಿಂದ ಮಹತ್ವದ ಸರ್ಕ್ಯೂಲರ್ | Oneindia Kannada

   ಪಿಎಫ್ ಚಂದಾದಾರರು ತಮ್ಮ ಭವಿಷ್ಯನಿಧಿ ಹಣವನ್ನು ಒಂದು ಅಕೌಂಟಿನಿಂದ ಇನ್ನೊಂದು ಅಕೌಂಟಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಿ ಭವಿಷ್ಯನಿಧಿ ಕಚೇರಿ ಸುತ್ತೋಲೆ ಹೊರಡಿಸಿದೆ.

   ಇತ್ತೀಚಿನ ದಿನಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿರುವ ಪಿಎಫ್ ಕಚೇರಿ, ವಿದ್ ಡ್ರಾವಲ್ ಸೇರಿ ಹಲವು ವ್ಯವಸ್ಥೆಗಳನ್ನು ಆನ್ಲೈನ್ ಪದ್ದತಿಯಡಿ ತಂದಿತ್ತು. ಈ ಹಿಂದೆ, ಅರ್ಜಿ ತುಂಬಿ, ಅದಕ್ಕೆ ತಾನು ಕೆಲಸ ಮಾಡುತ್ತಿದ್ದ ಹಳೆಯ ಸಂಸ್ಥೆಯ ಮಾನವ ಸಂಪನ್ಮೂಲ ಖಾತೆಯ ಅಧಿಕಾರಿಗಳಿಂದ ಸಹಿತೆಗೆದುಕೊಂಡು ಪಿಎಫ್ ಕಚೇರಿಗೆ ಸಲ್ಲಿಸಬೇಕಾಗಿತ್ತು.

   ಹಳೆ ಕಂಪನಿಯಲ್ಲಿನ EPF ಖಾತೆ ವರ್ಗಾವಣೆ ಇನ್ನು ಸರಳ

   ಈ ತಕ್ಷಣದಿಂದಲೇ ಜಾರಿಗೆ ಬರುವಂತೆ, ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ನೌಕರ ಸೇರಿಕೊಂಡಾಗ ಮತ್ತು ಆತ ಅದನ್ನು ವಿದ್ ಡ್ರಾವಲ್ ಮಾಡದೇ, ಹೊಸ ಕಂಪೆನಿಯ ಅಕೌಂಟಿಗೆ ವರ್ಗಾವಣೆ ಮಾಡಲು ಬಯಸಿದರೆ,
   ಯುಎಎನ್ (Universal Account Number) ಮೂಲಕ ಹೊಸ ಅಕೌಂಟಿಗೆ ಹಿಂದಿನ ಪಿಎಫ್ ಹಣ ಜಮೆಯಾಗುತ್ತದೆ.

   ಮಿಸ್ ಕಾಲ್ ಕೊಟ್ಟು ತಮ್ಮ ಅಕೌಂಟಿನಲ್ಲಿ ಪಿಎಫ್ ಹಣ ಎಷ್ಟಿದೆ ಎಂದು ತಿಳಿದುಕೊಳ್ಳುವ ಪದ್ದತಿಯನ್ನು ಕಳೆದ ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಭವಿಷ್ಯನಿಧಿ ಕಚೇರಿ ಜಾರಿಗೆ ತಂದಿತ್ತು. ಜೊತೆಗೆ, ಗ್ರಾಹಕರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಮಂಡಳಿ ಹೊಸ ವೆಬ್‌ಸೈಟ್ ಆರಂಭಿಸಿತ್ತು. (ಕೊಟ್ಟಿರುವ ಲಿಂಕ್, ಪಿಎಫ್ ಅಕೌಂಟ್ ಪಾಸ್ಬುಕ್ ಚೆಕ್ ಮಾಡಲು)

   ಹೊಸಖಾತೆಗೆ ಪಿಎಫ್ ಹಣವರ್ಗಾಯಿಸುವ ಪ್ರಕ್ರಿಯೆ ಸರಳೀಕರಿಸುವುದಾಗಿ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ಭವಿಷ್ಯನಿಧಿ ಕಚೇರಿ ಪ್ರಕಟಣೆ ಹೊರಡಿಸಿತ್ತು. ಅದು ಈಗ ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಕಾರ್ಯರೂಪಕ್ಕೆ ಬಂದಿದೆ.

   ಮಿಸ್ ಕಾಲ್ ಕೊಟ್ಟು ತಮ್ಮ ಅಕೌಂಟಿನಲ್ಲಿ ಪಿಎಫ್ ಹಣ ಎಷ್ಟಿದೆ ತಿಳಿದುಕೊಳ್ಳುವುದು ಹೇಗೆ, ಹೊಸ ಖಾತೆಗೆ ಪಿಎಫ್ ಹಣ ವರ್ಗಾಯಿಸುವುದು ಹೇಗೆ, ಮುಂದೆ ಓದಿ..

   ಯುಎಎನ್ ನಂಬರ್, ಆಧಾರ್ ಲಿಂಕ್ ಮಾಡುವುದು ಕಡ್ಡಾಯ

   ಯುಎಎನ್ ನಂಬರ್, ಆಧಾರ್ ಲಿಂಕ್ ಮಾಡುವುದು ಕಡ್ಡಾಯ

   ತಾವು ಕೆಲಸ ಮಾಡುತ್ತಿರುವ ಕಂಪೆನಿ, ಪ್ರತೀ ಪಿಎಫ್ ಚಂದಾದಾರರಿಗೆ ಯುಎಎನ್ ನಂಬರ್ ಅನ್ನು ನೀಡಿರುತ್ತದೆ. ಅದನ್ನು, ಚಂದಾದಾರರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ನಂಬರ್ ಅನ್ನು ತನ್ನ ಪಿಎಫ್ ಅಕೌಂಟಿಗೆ ಲಿಂಕ್ ಮಾಡಿದರೆ ಮಾತ್ರ, ಭವಿಷ್ಯನಿಧಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳು ಸುಸೂತ್ರವಾಗಿ ಆಗಲು ಸಾಧ್ಯ. ಇಲ್ಲಾಂದ್ರೆ, ಅದೇ ಹಳೇಕಾಲದ ಪದ್ದತಿ... ಅರ್ಜಿ ತುಂಬು.. ಕ್ಯೂನಲ್ಲಿ ನಿಂತ್ಕೋ..

    011-22901406 ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ ಮಾಹಿತಿ ಲಭ್ಯ

   011-22901406 ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ ಮಾಹಿತಿ ಲಭ್ಯ

   ಚಂದಾದಾರ ತನ್ನ ಮೊಬೈಲ್ ಸಂಖ್ಯೆ, ಯುಎಎನ್ ಮತ್ತು ಆಧಾರ್ ನಂಬರ್ ಅನ್ನು ಲಿಂಕ್ ಮಾಡಿದ ನಂತರ, ತಾನು ರಿಜಿಸ್ಟರ್ಡ್ ಮಾಡಿರುವ ಮೊಬೈಲ್ ನಂಬರಿನಿಂದ 011-22901406 ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ, ಒಂದು ನಿಮಿಷದೊಳಗೆ ನಿಮ್ಮ ಮೊಬೈಲಿಗೆ text ಮೆಸೇಜ್ ಮೂಲಕ ಪಿಎಫ್ ಖಾತೆಯಲ್ಲಿ ಎಷ್ಟು ಹಣಯಿದೆ ಎನ್ನುವ ಮಾಹಿತಿ ಲಭ್ಯವಾಗುತ್ತದೆ.

   ಯುಎಎನ್ ಮಾಹಿತಿಯನ್ನು ಹೊಸ ಸಂಸ್ಥೆಗೆ ನೀಡಬೇಕು

   ಯುಎಎನ್ ಮಾಹಿತಿಯನ್ನು ಹೊಸ ಸಂಸ್ಥೆಗೆ ನೀಡಬೇಕು

   ಇದುವರೆಗೆ, ಹೊಸ ಸಂಸ್ಥೆಗೆ ಹೋಗುವ ನೌಕರ ಫಾರ್ಮ್ ಸಂಖ್ಯೆ 13 ತುಂಬುವ ಮೂಲಕ ತನ್ನ ಹಳೆಯ ಸಂಸ್ಥೆಯಲ್ಲಿದ್ದ ಪಿಎಫ್ ಖಾತೆಯನ್ನು ತನ್ನ ಹೊಸ ಸಂಸ್ಥೆಯೊಂದಿಗೆ ಜೋಡಿಸಿಕೊಳ್ಳಬೇಕಾಗಿತ್ತು. ಈಗ ಹೊಸಸಂಸ್ಥೆಗೆ ಸೇರಿಕೊಂಡಾಗ, ತನ್ನ ಯುಎಎನ್ ಮಾಹಿತಿಯನ್ನು ಹೊಸ ಸಂಸ್ಥೆಗೆ ನೀಡಿದರೆ, ಹೊಸ ಸಂಸ್ಥೆಯ ಪಿಎಫ್ ಅಕೌಂಟ್ ಅನ್ನು ಅದಕ್ಕೆ ಲಿಂಕ್ ಮಾಡಲಾಗುತ್ತದೆ. ಆಗ, ಹಳೆಯ ಸಂಸ್ಥೆಯ ದುಡ್ಡು ಹೊಸ ಖಾತೆಗೆ ಜಮೆಯಾಗಲಿದೆ.

   transfer ಬದಲು ವಿದ್ ಡ್ರಾ ಬಯಸಿದರೆ, 'stop Auto-Transfer request

   transfer ಬದಲು ವಿದ್ ಡ್ರಾ ಬಯಸಿದರೆ, 'stop Auto-Transfer request

   ಹೊಸ ಖಾತೆಗೆ ಜೋಡಣೆಯಾದ ಕೂಡಲೇ ಚಂದಾದಾರನಿಗೆ ಮೊಬೈಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ, ಚಂದಾದಾರ ತನ್ನ ಹಳೆಯ ಸಂಸ್ಥೆಯ ಪಿಎಫ್ ಮೊತ್ತವನ್ನು transfer ಬದಲು ವಿದ್ ಡ್ರಾ ಮಾಡಲು ಬಯಸಿದರೆ, 'stop Auto-Transfer request' ಎಂದು ಟೈಪ್ ಮಾಡುವ ಮೂಲಕ ಇದನ್ನು ತಡೆಹಿಡಿಯಬಹುದು. ಆದರೆ, ಮೆಸೇಜ್ ಬಂದ ಹತ್ತುದಿನದೊಳಗೆ ಚಂದಾದಾರ ಕಾರ್ಯಪ್ರವೃತ್ತನಾಗಬೇಕು. ಇಲ್ಲದಿದ್ದರೆ, ಹಳೆಯ ಪಿಎಫ್ ಹಣ, ಹೊಸ ಕಂಪೆನಿಯ ಅಕೌಂಟಿಗೆ ವರ್ಗಾವಣೆಯಾಗಿರುತ್ತದೆ.

   ಆನ್ಲೈಲ್ ಆಧಾರ್ ಲಿಂಕ್, ಆನ್ಲೈನ್ ಮೂಲಕ ಇಪಿಎಫ್ ವರ್ಗಾವಣೆ

   ಆನ್ಲೈಲ್ ಆಧಾರ್ ಲಿಂಕ್, ಆನ್ಲೈನ್ ಮೂಲಕ ಇಪಿಎಫ್ ವರ್ಗಾವಣೆ

   ಐದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಭವಿಷ್ಯನಿಧಿ ಕಚೇರಿ, ಹೊಸ ಹೊಸ ಪದ್ದತಿಗಳನ್ನು ಇತ್ತೀಚಿನ ದಿನಗಳಲ್ಲಿ ಅಳವಡಿಸಿಕೊಂಡು ಬರುತ್ತಿದೆ. ಆನ್ಲೈಲ್ ಆಧಾರ್ ಲಿಂಕ್, ಆನ್ಲೈನ್ ಮೂಲಕ ಇಪಿಎಫ್ ವರ್ಗಾವಣೆ, ಮೆಡಿಕಲ್ ಅಡ್ವಾನ್ಸ್ ಮುಂತಾದ ಪದ್ದತಿಯನ್ನು ಜಾರಿಗೆ ತಂದಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   RPFO (Regional Provident Fund Office) has introduced automated PF transfer system from old account to new account. If employee resigned and joined new company, through UAN (Universal Account Number), his/her old PF amount will transfer to his/her's new companies PF account.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ