ಗಣಿ ಮೇಲ್ಛಾವಣಿ ಕುಸಿತ, ಅನೇಕರ ದುರ್ಮರಣ
ಧನ್ ಬಾದ್(ಜಾರ್ಖಂಡ್), ನ.11: ಸರ್ಕಾರಿ ಸ್ವಾಮ್ಯದ ಭಾರತ್ ಕುಕ್ಕಿಂಗ್ ಕೋಲ್ ಲಿ. ಸಂಸ್ಥೆಗೆ ಸೇರಿದ ಕಲ್ಲಿದ್ದಲು ಗಣಿಯ ಮೇಲ್ಛಾವಣಿ ಕುಸಿತಗೊಂಡಿದ್ದು ಪ್ರಾಥಮಿಕ ವರದಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ.
ಜಾರ್ಖಂಡ್ ರಾಜ್ಯದ ಧನ್ ಬಾದ್ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಕುಕ್ಕಿಂಗ್ ಕೋಲ್ ಲಿ. ಸಂಸ್ಥೆಗೆ ಸೇರಿದ ಬಸಂತಿಮಠ ಕಲ್ಲಿದ್ದಲು ಗಣಿಯಲ್ಲಿ ಈ ದುರಂತ ಜರುಗಿದೆ.
ಪ್ರಾಥಮಿಕ ವರದಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುಮಾರು ನೂರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗಣಿಯೊಳಗೆ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.













Click it and Unblock the Notifications