ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿತ್ ವೇಮುಲಾ ದಲಿತ ಅಲ್ಲ: ಆಂಧ್ರಪ್ರದೇಶ ಸರ್ಕಾರ ಘೋಷಣೆ

ರೋಹಿತ್ ವೇಮುಲಾ ಎಂಬಾತ ದಲಿತ ವಿದ್ಯಾರ್ಥಿ ಎಂಬ ಕಾರಣಕ್ಕೇ ಆತನ ಆತ್ಮಹತ್ಯೆ ದೇಶಾದ್ಯಂತ ದಲಿತರ ಮೇಲಿನ ದಬ್ಬಾಳಿಕೆ ಎಂಬರ್ಥದಲ್ಲಿ ಸುದ್ದಿಯಾಗಿತ್ತು.

|
Google Oneindia Kannada News

ಹೈದರಾಬಾದ್, ಫೆಬ್ರವರಿ 14: ಕಳೆದ ವರ್ಷ ದೇಶದಾದ್ಯಂತ ಕೋಲಾಹಲವೆಬ್ಬಿಸಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ.[ಸ್ಮೃತಿ ಸಮರ್ಥನೆ ನಂತರವೂ 10 ಪ್ರೊಫೆಸರ್ ಗಳು ರಿಸೈನ್]

ರೋಹಿತ್ ವೇಮುಲ ದಲಿತ ವಿದ್ಯಾರ್ಥಿಯಲ್ಲ ಎಂದು ಹೇಳಿರುವ ಆಂಧ್ರಪ್ರದೇಶ ಸರ್ಕಾರ, ಆತ 'ಇತರೆ ಹಿಂದುಳಿದ ಜಾತಿ'ಗೆ ಸೇರುತ್ತಾನೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ವೇಮುಲಾ ದಲಿತ ವಿದ್ಯಾರ್ಥಿಯೆಂದು ಹೇಳಿ, ಅದಕ್ಕೆ ಪೂರಕವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದ ಆತ ತಾಯಿಗೆ ಗುಂಟೂರು ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.[ದಲಿತ ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ]

Rohit Vemula not a Dalit says Andrapradesh Government

ವೇಮುಲ ಆತ್ಮಹತ್ಯೆ ಪ್ರಕರಣ ಆತ ದಲಿತ ವಿದ್ಯಾರ್ಥಿ ಎನ್ನುವ ಕಾರಣಕ್ಕಾಗಿಯೇ ಹೆಚ್ಚು ಸುದ್ದಿ ಮಾಡಿತ್ತು. ಆದರೆ, ಅದರ ಬೆನ್ನಲ್ಲೇ ಆತ ದಲಿತನಲ್ಲ ಎಂಬ ಕೂಗೂ ಕೇಳಿಬಂದಿತ್ತು. ಆದರೆ, ಆತನ ತಾಯಿ ರಾಧಿಕಾ ತಾವು ದಲಿತರು ಎಂದು ವಾದಿಸಿದ್ದರಲ್ಲದೆ ರೋಹಿತ್ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನು ಬಿಡುಗಡೆಗೊಳಿಸಿದ್ದರು.[ರೋಹಿತ್ ವೇಮುಲ ಪರ ಪ್ರಗತಿಪರ ಸಂಘಟನೆ ರಾಷ್ಟ್ರಪತಿಗೆ ಬರೆದ ಪತ್ರ]

ಇದೀಗ, ಪರಿಶಿಷ್ಠಿ ಜಾತಿ ಪ್ರಮಾಣಪತ್ರವೇ ಸುಳ್ಳು ಎಂದಿರುವ ಆಂಧ್ರಪ್ರದೇಶ ಸರ್ಕಾರ, ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಂಡೆ ಮೂಲಕ ನೋಟಿಸ್ ಜಾರಿಗೊಳಿಸಿದೆ.[ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ]

English summary
The Andhra Pradesh government said that the Rohit Vemula who's suicide crated nation wide stir as Dalit oppression, belongs to 'Other Backward Casts', but not Dalit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X