ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರ್ ಜೆಡಿ ಶಾಸಕ ಅಮಾನತು

Posted By:
Subscribe to Oneindia Kannada

ಪಾಟ್ನ, ಫೆ. 14: ಅಪ್ರಾಪ್ತ ಬಾಲಕಿಗೆ ಮದ್ಯಪಾನ ಮಾಡಿಸಿ ಅಮಲಿನಲ್ಲಿರುವಾಗ ಅತ್ಯಾಚಾರ ಎಸಗಿದ ಆರೋಪ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಶಾಸಕ ರಾಜ್ ಬಲ್ಲಭ್ ಯಾದವ್ ಅವರ ಮೇಲೆ ಹೊರೆಸಲಾಗಿದೆ. ಘಟನೆ ಬಗ್ಗೆ ವರದಿಗಳು ಬರುತ್ತಿದ್ದಂತೆ ತಕ್ಷಣವೇ ಶಾಸಕ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ರಾಮ್ ಚಂದ್ರ ಪುರ್ಬೆ ಭಾನುವಾರ ಹೇಳಿದ್ದಾರೆ.

ಘಟನೆ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಶಾಸಕ ರಾಜ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, 15 ವರ್ಷ ವಯಸ್ಸಿನ ಬಾಲಕಿ ನಲಂದಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಡಿಐಜಿ ಪೊಲೀಸ್ ಶಾಲಿನ್ ಅವರು ಶಾಸಕ ರಾಜ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದ್ದಾರೆ. [ಬಿಹಾರ ಸಚಿವ ಸಂಪುಟ : ಸ್ಕೂಲು ಬಿಟ್ಟವರ ಹೈಸ್ಕೂಲು!]

RJD suspends its MLA Raj Ballabh Yadav from party on rape charges

ಫೆಬ್ರವರಿ 6ರಂದು ಮನೆಯಿಂದ ಹೊರಕ್ಕೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯನ್ನು ಅಪಹರಿಸಿ ಶಾಸಕರ ಬಳಿಗೆ ಕರೆದುಕೊಂಡು ಬರಲಾಗಿದೆ. ಬಾಲಕಿಗೆ ಮದ್ಯಪಾನ ಮಾಡಿಸಿ ಶಾಸಕರು ಅತ್ಯಾಚಾರ ಮಾಡಿದ್ದಾರೆ.

ಘಟನೆಯಿಂದ ಆಘಾತಕ್ಕೊಳಗಾಗಿದ್ದ ಬಾಲಕಿ ಚೇತರಿಸಿಕೊಂಡು ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಫೆಬ್ರವರಿ 09ರಂದು ನಲಂದಾ ಪೊಲೀಸರು ಐಪಿಸಿ ಸೆಕ್ಷನ್ 164ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ನಾಪತ್ತೆಯಾಗಿರುವ ಶಾಸಕರಿಗಾಗಿ ಹುಡುಕಾಟ ಜಾರಿಯಲ್ಲಿದೆ. ನವಾಡ ಕ್ಷೇತ್ರದ ಶಾಸಕ ರಾಜ್ ಅವರು ಈ ಹಿಂದೆ ಆರ್ ಜೆಡಿ ಸರ್ಕಾರದಲ್ಲಿ ಸಚಿವರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು.


(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Taking a serious note of rape charges levelled against its MLA, Rashtriya Janata Dal (RJD) on Sunday suspended Raj Ballabh Yadav from the party with immediate effect."The party has taken a serious note of the rape charges levelled against MLA Raj Ballabh Yadav. We have suspended him from the party with immediate effect," RJD state president Ram Chandra Purbe told PTI.
Please Wait while comments are loading...