ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಜನಸಂಖ್ಯೆ ಏರಿಕೆಯಿಂದಾಗಿಯೇ ಅಪರಾಧ ಹೆಚ್ಚಳ: ಬಿಜೆಪಿ ಸಂಸದ

|
Google Oneindia Kannada News

ಫೈಜಾಬಾದ್, ಜುಲೈ 27: ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೇ ಅತ್ಯಾಚಾರ ಮತ್ತು ಕೊಲೆಯಂತಹ ಹೀನ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ ಎಂಬ ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶ ಬಿಜೆಪಿಯ ಹಿರಿಯ ಸಂಸದ ಹರಿ ಓಂ ಪಾಂಡೆ ವಿವಾದ ಸೃಷ್ಟಿಸಿದ್ದಾರೆ.

ಅಂಬೇಡ್ಕರ್ ನಗರ ಕ್ಷೇತ್ರದ ಸಂಸದರಾದ ಹರಿ ಓಂ ಪಾಂಡೆ, ಭಾರತದಲ್ಲಿ ಇದೇ ರೀತಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯುವಲ್ಲಿ ಸರ್ಕಾರ ವಿಫಲರಾದರೆ, ಪಾಕಿಸ್ತಾನದಂತೆಯೇ ಭಾರತದಿಂದ ಬೇರ್ಪಡುವ ಮತ್ತೊಂದು ದೇಶ ಸೃಷ್ಟಿಯಾಗಲಿದೆ ಎಂದು ಸಹ ಅವರು ಹೇಳಿದ್ದಾರೆ.

ಉ.ಪ್ರ. ಸಿಎಂ ಆಗೋದು ಬಾಲಿವುಡ್ ಡ್ರೀಮ್ ಗರ್ಲ್ ಗೆ ನಿಮಿಷದ ಕೆಲಸ, ಆದರೆಉ.ಪ್ರ. ಸಿಎಂ ಆಗೋದು ಬಾಲಿವುಡ್ ಡ್ರೀಮ್ ಗರ್ಲ್ ಗೆ ನಿಮಿಷದ ಕೆಲಸ, ಆದರೆ

'ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯ ಕಾರಣದಿಂದಾಗಿಯೇ ಭಯೋತ್ಪಾದನೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ.

rising muslim population responsible for crimes: bjp mp hari om pandey

ನೀವು ಗಮನವಿಟ್ಟು ನೋಡಿದರೆ ಭಾರತದ ಸ್ವಾತಂತ್ರ್ಯಾನಂತರ ಮುಸ್ಲಿಮರ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವುದು ಗೊತ್ತಾಗುತ್ತದೆ ಎಂದು ಪಾಂಡೆ ಹೇಳಿದ್ದಾರೆ.

ಹೆಚ್ಚುತ್ತಿರುವ ಜನಸಂಖ್ಯೆಯು ನಿರುದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗುತ್ತದೆ. ಇದರಿಂದ ಭಾರತದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಮುಸ್ಲಿಮರು ಮೂರು-ನಾಲ್ಕು ಮದುವೆಗಳನ್ನಾಗುತ್ತಾರೆ. ಮತ್ತು 9-10 ಮಕ್ಕಳನ್ನು ಪಡೆಯುತ್ತಾರೆ. ಅವರಿಗೆ ಶಿಕ್ಷಣ ನೀಡುವುದಿಲ್ಲ. ಕೊನೆಗೆ ನಿರುದ್ಯೋಗ ಕಾಡುತ್ತದೆ. ಇದು ನಿಶ್ಚಿತವಾಗಿಯೂ ಅರಾಜಕತೆಗೆ ಎಡೆಮಾಡಿಕೊಡುತ್ತದೆ.

ಅವರ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈಗ ಅವರು ಷರಿಯಾ ಕಾನೂನಿಗೆ ಬೇಡಿಕೆ ಇರಿಸಿದ್ದಾರೆ. ಮುಂದೆ ಹೊಸ ಪಾಕಿಸ್ತಾನಕ್ಕೆ ಬೇಡಿಕೆ ಇರಿಸಲಿದ್ದಾರೆ ಎಂದು ಹರಿ ಓಂ ಪಾಂಡೆ ಹೇಳಿದ್ದಾರೆ.

ಭಾರತವನ್ನು ಮತ್ತೊಂದು ಘೋರ ವಿಭಜನೆಯಿಂದ ಉಳಿಸಲು ಜನಸಂಖ್ಯಾ ನಿಯಂತ್ರಣದ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಬೇಕು ಎಂದು ಬಯಸುವುದಾಗಿ ಹೇಳಿದ್ದಾರೆ.

ಪಾಂಡೆ ಅವರ ಹೇಳಿಕೆಗೆ ಅನೇಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಯನ್ನು ಬೆಂಬಲಿಸಿ ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

English summary
BJP Senior MP Hari Om Pandey from Uttar Pradesh's Ambedkar Nagar said, heinous crimes on rise due to incrasing population of muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X