ಶಶಿಕಲಾರಿಂದ ಸುಪ್ರೀಂ ತೀರ್ಪು ಮರುಪರಿಶೀಲನಾ ಅರ್ಜಿ?

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 14: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಮ್ಮ ವಿರುದ್ಧ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಎಐಡಿಎಂಕೆ ನಾಯಕಿ ಶಶಿಕಲಾ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಶಶಿಕಲಾ ಹಾಗೂ ಈ ಪ್ರಕರಣದ ಸಹ ಆರೋಪಿಗಳಾದ ಇಳವರಸಿ ಹಾಗೂ ಸುಧಾಕರನ್ ಅವರಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.[LIVE: ಅಂತಿಮವಾಗಿ ಧರ್ಮಕ್ಕೆ ಗೆಲುವಾಗಲಿದೆ: ಶಶಿಕಲಾ]

Review petition by Sasikala in Supreme Court?

ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಚೆನ್ನೈನ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ಶಶಿಕಲಾ, ''ತೀರ್ಪು ಆಘಾತ ತಂದಿಲ್ಲ. ಸತ್ಯಕ್ಕೆ ಎಂದಿಗೂ ಜಯ ಇದ್ದೇ ಇರುತ್ತದೆ. ಈ ಹಿಂದೆಯೂ ಇಂಥ ಹಲವಾರು ಕಷ್ಟಗಳನ್ನು ಎದುರಿಸಿದ್ದೇನೆ. ಮುಂದೆಯೂ ಎದುರಿಸುತ್ತೇನೆ'' ಎಂದು ತಿಳಿಸಿದ್ದಾರೆ.[ಶಶಿಕಲಾಗೆ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳು ಹೇಳಿದ್ದೇನು?]

ಇದು, ಮುಂದಿನ ದಿನಗಳಲ್ಲಿ ಅವರು ಸುಪ್ರೀಂ ಕೋರ್ಟ್ ಗೆ ತೀರ್ಪು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಸೂಚನೆಯನ್ನು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIDMK leader Sasikala may file review petition in Supreme Court against the verdict of Supreme Court in illigal asset case against her on Tuesday.
Please Wait while comments are loading...