ಸಿಂಗೂರು ಭೂಸ್ವಾಧೀನ ರದ್ದು, ರೈತರ ಪಾಲಿಗೆ ಸಂತಸದ ದಿನ

ನವದೆಹಲಿ, ಆಗಸ್ಟ್ 31: ಟಾಟಾ ಮೋಟಾರ್ಸ್ ಕಂಪನಿಯ ಕಡಿಮೆ ವೆಚ್ಚದ ಕಾರು ನ್ಯಾನೋ ಉತ್ಪಾದ
ನಾ ಘಟಕ ಸ್ಥಾಪನೆಗಾಗಿ ಪಶ್ಚಿಮ ಬಂಗಾಲ ಸರ್ಕಾರ ಸ್ವಾದೀನ ಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ಹಿಂತಿರುಗಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

2006ರಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಸಿಂಗೂರಿನಲ್ಲಿ ರೈತರಿಂದ ಭೂಸ್ವಾಧೀನ ಪಡೆಸಿಕೊಂಡಿದ್ದನ್ನು ಇನ್ನು 12 ವಾರಗಳಲ್ಲಿ ರೈತರಿಗೆ ಹಿಂತಿರುಗಿಸುವಂತೆ ಸುಪ್ರೀಂಕೋರ್ಟ್ ಬುಧವಾರ ತನ್ನ ಅದೇಶದಲ್ಲಿ ಹೇಳಿದೆ.

Return land in Singur to farmers in 12 weeks SC says

ಸುಮಾರು 1,000 ಎಕರೆಗಳಷ್ಟು ಭೂಮಿಯನ್ನು ಪಶ್ಚಿಮ ಬಂಗಾಲ ಸರ್ಕಾರ ವಶಕ್ಕೆ ತೆಗೆದುಕೊಂಡಿತ್ತು. ಆದರೆ, ಎರಡು ವರ್ಷಗಳ ಕಾಲ ವಿವಾದ ಮುಂದುವರೆದಿದ್ದರಿಂದ ಬೇಸತ್ತ ಟಾಟಾಸಂಸ್ಥೆ ನಂತರ ಗುಜರಾತಿಗೆ ತನ್ನ ಘಟಕವನ್ನು
ವರ್ಗಾಯಿಸಿತ್ತು.

ಪಶ್ಚಿಮ ಬಂಗಾಲದಲ್ಲಿ ಎಡರಂಗ ಆಡಳಿತ ಕಾಲದಲ್ಲಿದ್ದಲ್ಲಿ ಟಾಟಾ ಕಂಪನಿಗಾಗಿ ಭೂ ಸ್ವಾಧೀನ ಮಾಡಲಾಗಿತ್ತು. ಆಗ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆಗಳು ನಡೆಸಲಾಗಿತ್ತು. ಅಕ್ರಮವಾಗಿ ರೈತರ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಘಟಕ ಸ್ಥಾಪನೆಯಾಗದಿದ್ದ ಮೇಲೆ ಭೂಮಿಯನ್ನು ಏಕೆ ಹಿಂತಿರುಗಿಸಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಲ ಸರ್ಕಾರದ ಪರ ತೀರ್ಪು ನೀಡಿತ್ತು. ಆದರೆ, ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. ಇದರ ತೀರ್ಪು ಬುಧವಾರ ಹೊರಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+