Government Employees: ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ?

ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಇನ್ನೂ ಡಿಎ ಹೆಚ್ಚಳದ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಸರ್ಕಾರ ಮುಂದಾಗಿದ್ದು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆಗೆ ಚಿಂತನೆ ನಡೆಸಿದೆ.

ಇನ್ನೂ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಿಸ್ತರಿಸುವ ನಿರ್ಧಾರವು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ಇದು ವಿವಿಧ ವಲಯಗಳಿಗೆ ತಮ್ಮ ಪರಿಣತಿಯನ್ನು ನೀಡುವುದನ್ನು ಮುಂದುವರಿಸಬಹುದಾದ ಅನುಭವಿ, ಜ್ಞಾನವುಳ್ಳ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಸರ್ಕಾರದ ಮಟ್ಟದಲ್ಲಿನ ಕೆಲಸಗಳಿಗೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ. ಇನ್ನೂ ವಯಸ್ಸಾದ ಜನಸಂಖ್ಯೆ ಮತ್ತು ಕುಗ್ಗುತ್ತಿರುವ ಕಾರ್ಯಪಡೆಯಿಂದಾಗಿ ಪಿಂಚಣಿ ಯೋಜನೆಗಳ ಮೇಲಿನ ಆರ್ಥಿಕ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

Retirement Age Limit For Government employees increased

ಸಾರ್ವಜನಿಕ ವಲಯದಲ್ಲಿ ನಿವೃತ್ತಿ ವಯಸ್ಸಿನಲ್ಲಿ ಸಂಭವನೀಯ ಬದಲಾವಣೆಗಳ ಬಗ್ಗೆ ಚರ್ಚೆಗಳ ನಡೆಯುತ್ತಿರುವ ಮಧ್ಯೆ ಇದೀಗ ಸರ್ಕಾರದ ಕಡೆಯಿಂದ ಸ್ಪಷ್ಟ ಮಾಹಿತಿ ಹೊರ ಬಂದಿದೆ. ಹೆಚ್ಚಿನ ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು 60 ವರ್ಷಗಳು. ಈ ನಿವೃತ್ತಿ ವಯಸ್ಸಿನ ಮಿತಿ ಏರಿಕೆ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇನ್ನೂ ಬೋಧನೆ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ಕೆಲವು ಕ್ಷೇತ್ರಗಳಲ್ಲಿ, ಇದು 65 ವರ್ಷಗಳವರೆಗೆ ಮುಂದುವರೆದಿದೆ. ಇನ್ನೂ ರಾಜ್ಯ ಸರ್ಕಾರಗಳು ತಮ್ಮದೇ ಆದ ನಿವೃತ್ತಿ ನೀತಿಗಳನ್ನು ನಿಗದಿಪಡಿಸುತ್ತವೆ ಎಂದು ಹೇಳಲಾಗಿದೆ.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಬದಲಾವಣೆಯ ಪರಿಣಾಮವನ್ನು ಸರ್ಕಾರಿ ನೌಕರರು ನೇರವಾಗಿ ಅನುಭವಿಸುತ್ತಾರೆ. ಏಕೆಂದರೆ ಸರ್ಕಾರಿ ನೌಕರರಿಗೆ ನಿವೃತ್ತಿ ಯೋಜನೆಗಾಗಿ ಈಗ ಹೆಚ್ಚುವರಿ ಐದು ವರ್ಷಗಳಿವೆ. ಕೆಲವರು ನಿವೃತ್ತಿ ಅವಧಿ ವಿಸ್ತರಣೆಯನ್ನು ಸ್ವಾಗತಿಸಿದರೆ ಇನ್ನು ಕೆಲವರು ವಯಸ್ಸಾದ ಸಂದರ್ಭದಲ್ಲಿ ಹೊರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 65 ವರ್ಷ ವಯಸ್ಸಿನವರೆಗೆ ಕೆಲಸ ಮಾಡುವುದನ್ನು ಮುಂದುವರಿಸುವುದರಿಂದ ಅವರು ತಮ್ಮ ನಿವೃತ್ತಿ ಉಳಿತಾಯವನ್ನು ಹೆಚ್ಚಿಸಲು ಮತ್ತು ನಿವೃತ್ತಿಯ ನಂತರ ಹೆಚ್ಚು ಆರಾಮದಾಯಕ ಜೀವನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಏರಿಕೆ ಕುರಿತು ಮಾತನಾಡಿರುವ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಿವೃತ್ತ ನೌಕರರಿಂದ ಸೃಷ್ಟಿಯಾದ ಖಾಲಿ ಹುದ್ದೆಗಳನ್ನು ರದ್ದುಗೊಳಿಸುವ ನೀತಿಯನ್ನು ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+