ಸಿಬಿಎಸ್ ಇ ಹತ್ತನೇ ತರಗತಿ ಫಲಿತಾಂಶ ಜೂನ್ 3ರ ಮಧ್ಯಾಹ್ನ ಪ್ರಕಟ
ನವದೆಹಲಿ, ಜೂನ್ 2: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಅಂದರೆ ಸಿಬಿಎಸ್ ಇ ಪಠ್ಯಕ್ರಮದ ಹತ್ತನೇ ತರಗತಿಯ ಫಲಿತಾಂಶವು ಜೂನ್ ಮೂರರಂದು ಪ್ರಕಟವಾಗಲಿದೆ. ಶನಿವಾರ ಮಧ್ಯಾಹ್ನ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಬಿಎಸ್ ಇ ಅಧಿಕೃತ ವೆಬ್ ಸೈಟ್ cbse.nic.in ಹಾಗೂ cbseresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಮಾಹಿತಿ ಪಡೆಯಬಹುದು. ಈ ವರ್ಷ ಒಟ್ಟು ಹದಿನಾರು ಲಕ್ಷದ ಅರವತ್ತೇಳು ಸಾವಿರ ವಿದ್ಯಾರ್ಥಿಗಳು ದೇಶದಾದ್ಯಂತ ಪರೀಕ್ಷೆ ಬರೆದಿದ್ದರು. ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಒನ್ ಇಂಡಿಯಾ ಪರವಾಗಿ ಬೆಸ್ಟ್ ಆಫ್ ಲಕ್.[ಸಿಬಿಎಸ್ಇ ಫಲಿತಾಂಶ ಪ್ರಕಟ: ನೋಯ್ಡಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ]

ಈ ಬಾರಿ ಸಿಇಎಸ್ ಇ ಪಠ್ಯಕ್ರಮದ ಹನ್ನೆರಡನೇ ತರಗತಿಯ ಸರಾಸರಿ ಫಲಿತಾಂಶ ಶೇಕಡಾ 82ರಷ್ಟು ದಾಖಲಾಗಿತ್ತು. ಕಳೆದ ವರ್ಷ ಶೇ 83ರಷ್ಟು ಫಲಿತಾಂಶ ದಾಖಲಾಗಿತ್ತು. ಇದಕ್ಕೆ ಹೋಲಿಸಿದಲ್ಲಿ ಈ ಬಾರಿ ಫಲಿತಾಂಶದಲ್ಲಿ ಅಲ್ಪ ಕುಸಿತವಾಗಿತ್ತು.[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]
ನೋಯ್ಡಾದ ಮೂಲದ ಅಮಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ರಕ್ಷಾ ಗೋಪಾಲ್ ಶೇಕಡಾ 99.6 ಅಂಕಗಳನ್ನು ಪಡೆದು ದೇಶಕ್ಕೆ ಮೊದಲ ಸ್ಥಾನ, ಶೇ 99.4 ಅಂಕಗಳೊಂದಿಗೆ ಭೂಮಿ ಸಾವಂತ್ ಎರಡನೇ ಹಾಗೂ ಶೇಕಡಾ 99.2 ಅಂಕಗಳೊಂದಿದೆ ಆದಿತ್ಯ ಜೈನ್ ಮತ್ತು ಮನ್ನತ್ ಲೂತ್ರ ಮೂರನೇ ಸ್ಥಾನ ಪಡೆದಿದ್ದರು. ಮೂರೂ ಜನ ಚಂಡೀಗಢದವರು.












Click it and Unblock the Notifications