Get Updates
Get notified of breaking news, exclusive insights, and must-see stories!

73ನೇ ಗಣರಾಜ್ಯೋತ್ಸವ: 939 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ

ನವದೆಹಲಿ, ಜನವರಿ 25: ಭಾರತದ 73ನೇ ಗಣರಾಜ್ಯೋತ್ಸವ ದಿನದಂದು 939 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಅಥವಾ ಸೇವೆ ಪದಕವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾದ 939 ಪ್ರಶಸ್ತಿಗಳಲ್ಲಿ 189 ಸಿಬ್ಬಂದಿ ಶೌರ್ಯಕ್ಕಾಗಿ ಪೊಲೀಸ್ ಪದಕವನ್ನು ಪಡೆಯಲಿದ್ದಾರೆ. 88 ಜನರು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆಯಲಿದ್ದು, 662 ಮಂದಿ ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ ಪಡೆಯಲಿದ್ದಾರೆ.

ದೇಶದಲ್ಲಿ ಒಟ್ಟು 189 ಭದ್ರತಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಪೈಕಿ ಜಮ್ಮು ಕಾಶ್ಮೀರದಲ್ಲಿ ಸಲ್ಲಿಸಿದ ದಿಟ್ಟ ಸೇವೆಗಾಗಿ 134 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶದಲ್ಲಿ ಸೇವೆ ಸಲ್ಲಿಸಿದ 47 ಸಿಬ್ಬಂದಿ ಮತ್ತು ಈಶಾನ್ಯ ಪ್ರದೇಶದಲ್ಲಿ ತಮ್ಮ ಶೌರ್ಯ ಪ್ರದರ್ಶಿಸಿದ ಒಬ್ಬ ಯೋಧನಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ.

Republic Day 2022 Awards and Medals List : 939 police medals including 189 for gallantry Announced

ಶೌರ್ಯ ಪ್ರಶಸ್ತಿ ಪಡೆದ ಸಿಬ್ಬಂದಿ:

ಭಾರತದಲ್ಲಿ ಶೌರ್ಯ ಪ್ರಶಸ್ತಿ ಪಡೆದ ಒಟ್ಟು ಸಿಬ್ಬಂದಿ ಪೈಕಿ ಜಮ್ಮು ಕಾಶ್ಮೀರದ 115 ಪೊಲೀಸರು ಸೇರಿದ್ದು, 30 ಸಿಆರ್‌ಪಿಎಫ್, 3 ಐಟಿಬಿಪಿ, 2 ಬಿಎಸ್‌ಎಫ್, 3 ಸಶಸ್ತ್ರ ಸೀಮಾ ಬಲ, 10 ಛತ್ತೀಸ್‌ಗಢ ಪೊಲೀಸ್, 9 ಒಡಿಶಾ ಪೊಲೀಸ್, ಮತ್ತು 7 ಮಹಾರಾಷ್ಟ್ರ ಪೊಲೀಸರು ಸಹ ಇದ್ದಾರೆ. ಉಳಿದವರು ಇತರೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಭದ್ರತಾ ಸಿಬ್ಬಂದಿ ಆಗಿದ್ದಾರೆ.

42 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕ:

2022 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 42 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗುತ್ತದೆ. ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು 1 ಸಿಬ್ಬಂದಿಗೆ ನೀಡಲಾಗುತ್ತದೆ. ಇದರ ಜೊತೆ ಅಗ್ನಿಶಾಮಕ ಸೇವಾ ಪದಕವನ್ನು 2 ಸಿಬ್ಬಂದಿಗೆ ನೀಡಿ ಗೌರವಿಸಲಾಗುತ್ತದೆ. ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು 9 ಸಿಬ್ಬಂದಿಗೆ ಮತ್ತು 30 ಸಿಬ್ಬಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗುತ್ತದೆ. 2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 25 ಸಿಬ್ಬಂದಿ ಅಥವಾ ಸ್ವಯಂಸೇವಕರಿಗೆ ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ಸಹ ನೀಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+