ಶಶಿಕಲಾಗೆ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳು ಹೇಳಿದ್ದೇನು?

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 14: ''ರಾಜಕೀಯ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಕಳವಳಕಾರಿಯಾಗಿದೆ. ಜನಪ್ರತಿನಿಧಿಗಳು ಭ್ರಷ್ಟಾಚಾರಗಳಲ್ಲಿ ತೊಡಗುವುದು ತಪ್ಪು. ಹಾಗಾಗಿ, ಶಶಿಕಲಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವು''

- ಎಐಡಿಎಂಕೆ ಮುಖ್ಯಸ್ಥೆ ಶಶಿಕಲಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಅಮಿತಾವ್ ರಾವ್ ಅವರ ಅನಿಸಿಕೆಯಿದು. ಇದರ ಜತೆಯಲ್ಲೇ 2014ರಲ್ಲಿ ಇದೇ ಪ್ರಕರಣದಲ್ಲಿ ಜಯಲಲಿತಾ ಹಾಗೂ ಇತರ ನಾಲ್ವರ ವಿರುದ್ಧ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಕುನ್ಹಾ ಅವರ ತೀರ್ಪನ್ನೂ ನ್ಯಾ. ರಾವ್ ಹೊಗಳಿದರು.

LIVE: ಅಂತಿಮವಾಗಿ ಧರ್ಮಕ್ಕೆ ಗೆಲುವಾಗಲಿದೆ: ಶಶಿಕಲಾ

ಕುನ್ಹಾ ನೀಡಿದ್ದ ದಿಟ್ಟ ತೀರ್ಪನ್ನು ಹಾಡಿ ಹೊಗಳಿದ ಸುಪ್ರೀಂಕೋರ್ಟ್

ಕಾನೂನಿನ ಕಣ್ಣಿನಿಂದ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ-ಬಿವಿ ಆಚಾರ್ಯ

Representatives of People indulging in Corruption is Major Concern says Supreme Court Judge

ಜಯಲಲಿತಾ ಆಪ್ತೆ ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ರಾವ್ ಈ ರೀತಿ ತಿಳಿಸಿದರು.

ಅಕ್ರಮ ಆಸ್ತಿ: ಶಶಿಕಲಾಗೆ ಜೈಲು, ಸುಪ್ರೀಂ ಕೋರ್ಟ್ ಆದೇಶ

ಸಂವಿಧಾನದ ದೃಷ್ಟಿಯಲ್ಲಿ ದೇಶದ ಹಿತವೇ ಮುಖ್ಯ ಎಂದು ಅವರು ಇದೇ ವೇಳೆ ತಿಳಿಸಿದರಲ್ಲದೆ, ದ್ವಿಸದಸ್ಯ ನ್ಯಾಯಪೀಠದಲ್ಲಿ ತೀರ್ಪಿನ ಬಗ್ಗೆ ಒಮ್ಮತದ ಅಭಿಪ್ರಾಯವಿದೆ ಎಂದೂ ನ್ಯಾ. ರಾವ್ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Representatives of people indulging in corruption is a major concern says Supreme court judge Justice Amitaav Rao, one among the two member bench which gave final verdict against Sasikala in illigal asset case.
Please Wait while comments are loading...