ಗುಜರಾತ್ ಚುನಾವಣೆ, ಇವಿಎಂ ಮೇಲೆ ಶಂಕೆ: ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ
Recommended Video

ಮೋದಿ Vs ರಾಹುಲ್ ಎಂದೇ ಬಿಂಬಿಸಲಾಗುತ್ತಿರುವ ಗುಜರಾತ್ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ 9) ಮುಕ್ತಾಯಗೊಂಡಿದೆ. 89ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯುತ್ತಮ ಎನ್ನಬಹುದಾದ ಶೇ. 68% ಮತದಾನ ನಡೆದಿದೆ.
ಇವಿಎಂ ನಿಷೇಧಿಸಿ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಈಗಾಗಲೇ, ಯುಪಿಎ ಮೈತ್ರಿಕೂಟದ ಸದಸ್ಯರು ನಡೆಸಿದ ಒಂದು ರೌಂಡಿನ ಸಭೆಗೆ ಪುಷ್ಟಿ ನೀಡುವಂತೆ, ಮೊದಲ ಹಂತದ ಚುನಾವಣೆಯಲ್ಲಿ ಇವಿಎಂಗೆ ಸಂಬಂಧ ಪಟ್ಟಂತೆ ಹಲವು ದೂರುಗಳು ದಾಖಲಾಗಿರುವುದರಿಂದ ಚುನಾವಣಾ ಆಯೋಗ ಇರಿಸುಮುರಿಸು ಎದುರಿಸುವಂತಾಗಿದೆ.
ಪೋರಬಂದರ್ ಮತ್ತು ಸೂರತ್ ನಗರಗಳಲ್ಲಿ ಮೊಬೈಲ್ ಬ್ಲೂಟೂತ್ ಮೂಲಕ ಇವಿಎಂ ಸಂಪರ್ಕಿಸಿ, ಫೋರ್ಜರಿ ಮತದಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸೂರತ್ ನಗರದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಇವಿಎಂ/ವಿವಿಪ್ಯಾಟ್ ಮಂತ್ರ ಕೈಕೊಟ್ಟಿದ್ದು ಮತಯಂತ್ರ ದುರ್ಬಳಕೆಯಾಗುತ್ತಿದೆ ಎನ್ನುವ ಗುಲ್ಲೆಬ್ಬಿದೆ.
ಸೂರತ್ ಗ್ರಾಮೀಣ ಭಾಗದ ಹದಿನಾರಕ್ಕೂ ಹೆಚ್ಚು ಬೂತ್ ಗಳಲ್ಲಿ ಮತಯಂತ್ರ ದುರ್ಬಳಕೆಯಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಆದರೆ, ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗ ಸಾರಸಗಾಟವಾಗಿ ತಳ್ಳಿಹಾಕಿದೆ.
ವಿರೋಧ ಪಕ್ಷಗಳು, ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಬೇಕೆಂದು ಆಯೋಗಕ್ಕೆ ಒತ್ತಾಯಿಸುವ ಬಗ್ಗೆ ಮಾತುಕತೆ ನಡೆದಿರುವ ಮಧ್ಯೆ, ಒಂದು ವೇಳೆ ಗುಜರಾತ್ ಚುನಾವಣೆ ಬಿಜೆಪಿ ಗೆದ್ದರೆ, ಬ್ಯಾಲೆಟ್ ಪೇಪರಿನಲ್ಲೇ ಮುಂದಿನ ಚುನಾವಣೆ ನಡೆಯಬೇಕು ಎನ್ನುವ ಹೋರಾಟ ಮತ್ತೆ ತೀವ್ರಗೊಳ್ಳುವುದು ನಿಶ್ಚಿತ.

ಇವಿಎಂ ಮತ್ತು ವಿವಿಪ್ಯಾಟ್ ಇಲೆಕ್ಟ್ರಾನಿಕ್ ಯಂತ್ರಗಳು
ಇವಿಎಂ ಮತ್ತು ವಿವಿಪ್ಯಾಟ್, ಇಲೆಕ್ಟ್ರಾನಿಕ್ ಯಂತ್ರಗಳು, ಹಾಗಾಗಿ ತಾಂತ್ರಿಕ ಸಮಸ್ಯೆ ಎದುರಾಗುವುದು ಸಹಜ. ಸಮಸ್ಯೆಯ ಎದುರಾದ ಮಾಹಿತಿ ಲಭ್ಯವಾದ ಕೂಡಲೇ ಒಂದೋ ಸರಿಪಡಿಸಲಾಗಿದೆ ಇಲ್ಲವೋ ಇವಿಎಂ ಬದಲಾಯಿಸಲಗಿದೆ. ತಾಂತ್ರಿಕ ಸಮಸ್ಯೆಯನ್ನು ಇವಿಎಂ ದೋಷಪೂರಿತವಾಗಿದೆ ಎಂದು ಹೇಳುವುದು ತಪ್ಪು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಭಾರೀ ಮುಂಜಾಗೃತಕ್ರಮ ಕ್ರಮ
ಇವಿಎಂ ಮೇಲೆ ವಿರೋಧ ಪಕ್ಷಗಳು ಶಂಕೆ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಆಯೋಗ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿತ್ತು. ಆಡಳಿತಾತ್ಮಕವಾಗಿ ಭದ್ರತೆ ಒದಗಿಸಿ, ಪ್ರತೀ ಬೂತಿನಲ್ಲಿ ವಿಶೇಷ ಅಧಿಕಾರಿಗಳನ್ನು ಆಯೋಗ ನೇಮಿಸಿತ್ತು. ಜೊತೆಗೆ, 24,600 ಹೆಚ್ಚುವರಿ ವಿವಿಪ್ಯಾಟ್ ಯಂತ್ರವನ್ನು ಹಾಕಿತ್ತು.
|
ಮತಯಂತ್ರವನ್ನು ದೂಷಿಸುವುದು, ಗೆದ್ದಾಗ ಮೌನವಾಗಿರುವುದು ಕಾಂಗ್ರೆಸ್ಸಿನ ರಾಜಕೀಯ
ಕಾಂಗ್ರೆಸ್ ಒಂದು ಪದ್ದತಿಯನ್ನು ಅನುಸರಿಸುತ್ತಿದೆ, ಚುನಾವಣೆಯಲ್ಲಿ ಸೋಲು ಅನುಭವಿಸಿದಾಗಲೆಲ್ಲಾ, ಮತಯಂತ್ರವನ್ನು ದೂಷಿಸುವುದು, ಗೆದ್ದಾಗ ಮೌನವಾಗಿರುವುದು ಕಾಂಗ್ರೆಸ್ಸಿನ ರಾಜಕೀಯ. ಪಂಜಾಬ್ ಚುನಾವಣೆಯಲ್ಲಿ ಇವಿಎಂ ಬಗ್ಗೆ ಇವರದ್ದು ಏನೂ ತಕರಾರಿರಲಿಲ್ಲ, ಯಾಕೆಂದರೆ ಅಲ್ಲಿ ಕಾಂಗ್ರೆಸ್ ಗೆದ್ದಿತ್ತು - ಕೇಂದ್ರ ಸಚಿವ ಜಿತೇಂದ್ರ ಸಿಂಗ್.

ಎಲ್ ಕೆ ಆಡ್ವಾಣಿ ಇದರ ಪ್ರಸ್ತಾಪ ಮೊದಲು ಮಾಡಿದ್ದು
ಇವಿಎಂ ಮೇಲೆ ಏನು ಇಂದು ಗೂಬೆ ಕೂರಿಸಲಾಗುತ್ತಿದೆಯೋ ಅದಕ್ಕೆ ಬಿಜೆಪಿಯೇ ಕಾರಣ. ಎಲ್ ಕೆ ಆಡ್ವಾಣಿ ಇದರ ಪ್ರಸ್ತಾಪ ಮೊದಲು ಮಾಡಿದ್ದು, ಬಿಜೆಪಿ ಮುಖಂಡ ಜಿವಿಎಲ್ ನರಸಿಂಹ ರಾವ್ ಈ ಸಂಬಂಧ ಪುಸ್ತಕವನ್ನೇ ಬರೆದಿದ್ದಾರೆ. ಉ.ಪ್ರದೇಶದಲ್ಲಿ ಇವಿಎಂ ಮತ್ತು ಬ್ಯಾಲೆಟ್ ಪೇಪರ್ ನಲ್ಲಿ ನಡೆದ ಚುನಾವಣೆಯ ಫಲಿತಾಂಶಗಳನ್ನು ಒಮ್ಮೆ ನೋಡಿ..

ಬ್ಲೂಟೂತ್ ಮತ್ತು ವೈಫೈ ಮೂಲಕವೂ ಇವಿಎಂನಲ್ಲಿ ಗೋಲ್ಮಾಲ್
ಇಎವಿಂ ದೋಷಪೂರಿತವಾಗಿದೆ ಎನ್ನುವ ಟ್ವೀಟುಗಳು. ಟ್ವಿಟ್ಟರ್ ಅಕೌಂಟಿನಿಂದ, ಆಧಾರ್ ನಂಬರ್ ಹಾಕಿ ವೋಟ್ ಮಾಡಿದರೆ, ಆದು ಬಿಜೆಪಿ ಪರವಾಗಿ ಹೋಗುತ್ತಿದೆ. ಬ್ಲೂಟೂತ್ ಮತ್ತು ವೈಫೈ ಮೂಲಕವೂ ಇವಿಎಂನಲ್ಲಿ ಗೋಲ್ಮಾಲ್ ನಡೆಸಲಾಗುತ್ತಿದೆ ಎನ್ನುವ ಟ್ವೀಟ್.












Click it and Unblock the Notifications