ಧರ್ಮ ವೈಯಕ್ತಿಕ ವಿಷ್ಯ, ನಾನೊಬ್ಬ ಶಿವಭಕ್ತ: ರಾಹುಲ್ ಗಾಂಧಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 01 : ಗುಜರಾತಿನ ವಿಧಾನಸಭೆ ಚುನಾವಣೆ ಪ್ರಚಾರ ನಿರತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರ ಕುಟುಂಬದ ಮೂಲದ ಬಗ್ಗೆ ಭಾರಿ ಚರ್ಚೆ ನಡೆದಿದೆ. ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಪೂರ್ಣವಿರಾಮ ಹಾಕುವಂಥ ಹೇಳಿಕೆಯನ್ನು ರಾಹುಲ್ ನೀಡಿದ್ದಾರೆ.

'ನಾನೊಬ್ಬ ಶಿವಭಕ್ತ, ಧರ್ಮಪಾಲನೆ ವೈಯಕ್ತಿಕ ವಿಷಯ, ನನ್ನ ಧರ್ಮದ ಬಗ್ಗೆ ಬೇರೊಬ್ಬರಿಂದ ಪ್ರಮಾಣಪತ್ರ ಬೇಕಾಗಿಲ್ಲ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಹೇಳೀದ್ದಾರೆ. ರಾಹುಲ್ ಹೇಳಿಕೆ ಇರುವ ವಿಡಿಯೋವನ್ನು ಕಾಂಗ್ರೆಸ್ ಮುಖಂಡರು ಹೊರಹಾಕಿದ್ದಾರೆ.

Religion is personal, I am a Shiv Bhakt: Rahul Gandhi

ಸೋಮನಾಥ ದೇಗುಲದ ಸಂದರ್ಶಕದ ಪುಸ್ತಕದಲ್ಲಿ ರಾಹುಲ್ ಗಾಂಧಿ ಅವರ ಹೆಸರು ಹಿಂದೂಯೇತರ ವಿಭಾಗದಲ್ಲಿ ನಮೂದಿಸಿರುವ ಬಗ್ಗೆ ಭಾರಿ ಚರ್ಚೆ ನಡೆದಿರುವ ಸಂದರ್ಭದಲ್ಲಿ ರಾಹುಲ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

' ನನ್ನ ಅಜ್ಜಿ ಹಾಗೂ ನನ್ನ ಕುಟುಂಬವೆಲ್ಲ ಶಿವನ ಆರಾಧಕರು, ಧರ್ಮ ಎಂಬುದು ಖಾಸಗಿ ವಿಷಯವಾಗಿದ್ದು, ನಮ್ಮ ನಂಬಿಕೆ, ಧರ್ಮವನ್ನು ವೈಯಕ್ತಿಕ ಜೀವನಕ್ಕೆ ಮೀಸಲಾಗಿಟ್ಟುಕೊಂಡಿದ್ದೇವೆ, ನಮ್ಮ ಧರ್ಮ, ಆಚರಣೆ ಬಗ್ಗೆ ಯಾರೊಬ್ಬರಿಂದಲೂ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ' ಎಂದು ರಾಹುಲ್ ಅವರು ಹೇಳಿದ್ದೆ.

ಅಮ್ರೇಲಿಯಲ್ಲಿ ನಡೆದ ಸಭೆಯೊಂದರಲ್ಲಿ ರಾಹುಲ್ ಗಾಂಧಿ ಅವರು ಧರ್ಮ, ಆಚರಣೆ ಬಗ್ಗೆ ಮಾತನಾಡಿದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I am a Shiv Bhakt and do not need a certificate from anyone, Congress vice president Rahul Gandhi said. A video of the Congress leader surfaced in which he states the above.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ