ಪತ್ರಿಕೋದ್ಯಮದ ಜಿ ಸಂತಾ ಪ್ರಶಸ್ತಿಗೆ ರೇಖಾ ಸತೀಶ್ ಆಯ್ಕೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ. 17: ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ಜಿ ಸಂತಾ ಟೀಚರ್ ಮೇಮೊರಿಯಲ್ ಪ್ರಶಸ್ತಿಗೆ ಕೊಚ್ಚಿಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಮುಖ್ಯ ಉಪಸಂಪಾದಕಿ ರೇಖಾ ಸತೀಶ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ Inspired Indian Foundation (IIF) ಈ ಪ್ರಶಸ್ತಿಯನ್ನು ಕೊಡಮಾಡಲಿದೆ. ಪತ್ರಿಕೊದ್ಯಮ ಕ್ಷೇತ್ರದ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.[ಪದ್ಮಶ್ರೀ ಬಗ್ಗೆ ರಾಜಮೌಳಿ ಟ್ವಿಟ್ಟರ್ ನಲ್ಲಿ ಬರೆದಿದ್ದೇನು?]

journalism

ಪಪ್ರಶಸ್ತಿಯೂ ಹತ್ತು ಸಾವಿರ ರು. ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿರುತ್ತದೆ. 2016 ರ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು.

ಈ ಬಗ್ಗೆ ಮಾಹಿತಿ ನೀಡಿದ ಐಐಎಫ್ ನ ಸಿಂಧು, ಬರಹಗಾರರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಪಾದಕರು, ವರದಿಗಾರರು ಮತ್ತು ಕಾಪಿ ಎಡಿಟರ್ ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ್ ಜಿ ಸಂತಾ ಟೀಚರ್ ಮೆಮೊರಿಯಲ್ ಪ್ರಶಸ್ತಿಯನ್ನು ಫೆಬ್ರವರಿ 17 ರಂದು ಪ್ರಕಟ ಮಾಡಲಾಗುತ್ತದೆ. ಈ ಬಾರಿ ಪ್ರಶಸ್ತಿಗೆ ರೇಖಾ ಸತೀಶ್ ಆಯ್ಕೆಯಾಗಿದ್ದಾರೆ.[ಈ ಬಾರಿ ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ]

journalism

1997 ರಿಂದ ರೇಖಾ ಸತೀಶ್ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿಯೂ ಕೆಲಸ ಮಾಡಿದ್ದರು. ರಾಜ್ಯ ಮತ್ತು ದೇಶದ ವಿಭಾಗಗಳನ್ನು ನೋಡಿಕೊಳ್ಳುವ ಅವರು ಪುರವಣಿಯಲ್ಲೂ ಕೆಲಸ ಮಾಡುತ್ತಿದ್ದಾರೆ.

ಅವರ ನಿಷ್ಪಕ್ಷಪಾತ ಎಡಿಟಿಂಗ್, ಸಹೋದ್ಯೋಗಿಗಳೊಂದಿಗಿನ ಸೌಹಾರ್ದ ಸಂಬಂಧ ಮತ್ತು ಇತರೇ ಅಂಶಗಳನ್ನು ಮನಗಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿಂಧು ತಿಳಿಸಿದರು.

ಏನಿದು ಪ್ರಶಸ್ತಿ
ಕೇರಳದಲ್ಲಿ ಹೆಸರು ಮಾಡಿದ್ದ ಶಿಕ್ಷಕ, ಇಂಗ್ಲಿಷ್ ಸಾಹಿತ್ಯದಲ್ಲಿ ಹೆಸರು ಮಾಡಿದ್ದ ಜಿ ಸಂತಾ ಅವರ ನೆನಪಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜಿ ಸಂತಾ ತಮ್ಮ 65 ನೇ ವಯಸ್ಸಿನಲ್ಲಿ (2007) ನಿಧನರಾದರು. ನಂತರ ವಿಜ್ಞಾನಿ ಅಬ್ದುಲ್ ಕಲಾಂ ಅವರ ಆಶೀರ್ವಾದೊಂದಿಗೆ ಪ್ರಶಸ್ತಿಯನ್ನು ಆರಂಭ ಮಾಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rekha Satheesh, a Senior Chief Sub-Editor with The New Indian Express, Kochi, Kerala, has been chosen for the first G. Santha Teacher Memorial Journalism Award. The award has been instituted by Inspired Indian Foundation (IIF), Bengaluru, a platform for unsung heroes. Announcing the details of the initiative in Bengaluru today, Sindhu A., National Coordinator for IIF said that the award has been instituted to recognise unsung heroes in Journalism, to begin with.
Please Wait while comments are loading...