ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ

ನವದೆಹಲಿ, ಜೂನ್ 25 : ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ರೈಲ್ವೆ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆಗಸ್ಟ್ 12ರ ತನಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

Recommended Video

      ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

      ಗುರುವಾರ ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ಚರ್ಚೆ ನಡೆದಿದೆ. ಸಾಮಾನ್ಯ ವೇಳಾಪಟ್ಟಿಯ ಪ್ಯಾಸೆಂಜರ್/ಮೇಲ್/ಎಕ್ಸ್‌ಪ್ರೆಸ್/ಸಬ್ ಅರ್ಬನ್ ರೈಲುಗಳ ಸಂಚಾರವನ್ನು ರದ್ದುಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

      Regular Time Tabled Passenger Train Cancelled Till August 12

      ಸಾಮಾನ್ಯ ವೇಳಾಪಟ್ಟಿಯ ರೈಲುಗಳಿಗೆ 1/7/2020 ರಿಂದ 12/8/2020ರ ತನಕ ಬುಕ್ ಮಾಡಿದ ಎಲ್ಲಾ ಟಿಕೆಟ್‌ಗಳ ಹಣವನ್ನು ವಾಪಸ್ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಆಗಸ್ಟ್ 12ರ ತನಕ ರೈಲುಗಳು ಸಂಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

      12/5/2020 ಮತ್ತು 1/6/2020ರಂದು ಆರಂಭವಾದ ವಿಶೇಷ ರಾಜಧಾನಿ/ ವಿಶೇಷ ಮೇಲ್/ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಎಂದಿನಂತೆ ಇರುತ್ತದೆ ಎಂದು ರೈಲ್ವೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

      1/7/2020 ರಿಂದ 12/8/2020ರ ತನಕ ಸಾಮಾನ್ಯ ವೇಳಾಪಟ್ಟಿಯ ರೈಲುಗಳಿಗೆ ಬುಕ್ ಮಾಡಲಾಗಿದ್ದ ಟಿಕೆಟ್‌ನ ಪೂರ್ಣ ಹಣವನ್ನು ವಾಪಸ್ ಮಾಡಬೇಕು ಎಂದು ರೈಲ್ವೆ ಇಲಾಖೆ ಸೂಚನೆ ಕೊಟ್ಟಿದೆ.

      ಈಗಾಗಲೇ ಸಂಚಾರ ನಡೆಸುತ್ತಿರುವ 230 ವಿಶೇಷ ರೈಲುಗಳು, ಗೂಡ್ಸ್ ರೈಲು, ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಇಲಾಖೆ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+