ಗೋವಾಕ್ಕೆ ದಾಖಲೆಯ ಪ್ರವಾಸಿಗರ ಭೇಟಿ; ಚೀನಾದ ಸುಳ್ಳು ಪ್ರಚಾರ ತೆರೆದಿಟ್ಟ ಅಂಕಿ ಅಂಶಗಳು
ಕೆಲವು ವಾರಗಳಿಂದ ಗೋವಾ ಪ್ರವಾಸೋದ್ಯಮ ಕ್ಷೇತ್ರದ ಕುರಿತು ದಾರಿತಪ್ಪಿಸುವ ನಿರೂಪಣೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ, ಹಬ್ಬದ ಸಂದರ್ಭದಲ್ಲಿಯೇ ಪ್ರವಾಸಿಗರ ಸಂಖ್ಯೆ ಭಾರೀ ಕಡಿಮೆಯಾಗಿದೆ ಎಂದು ಈ ನಿರೂಪಣೆಗಳು ಹೇಳುತ್ತಿವೆ. ಆದಾಗ್ಯೂ ವಾಸ್ತವದ ಚಿತ್ರವೇ ಬೇರೆ, ಇದು ಆಶಾವಾದ ಮೂಡಿಸುವ ಚಿತ್ರವಣನ್ನು ಕಟ್ಟಿಕೊಟ್ಟಿದೆ. ಗೋವಾ ಅಂತರಾಷ್ಟ್ರೀಯ ಮತ್ತು ದೇಶಿಯ ಪ್ರವಾಸಿಗರ ನೆಚ್ಚಿನ ತಾಣವಾಗಿದೆ, ಪ್ರವಾಸೋದ್ಯಮ ಅತಿ ವೇಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಹೇಳಿದೆ. ಆಧಾರ ರಹಿತವಲ್ಲದ ವರದಿಗಳಿಗೆ ಇಲ್ಲಿದೆ ಅಂಕಿ ಸಂಖ್ಯೆಗಳ ಲೆಕ್ಕ.
ದಾಖಲೆ ಮುರಿದ ಪ್ರವಾಸಿಗರ ಭೇಟಿ
ಗೋವಾಕ್ಕೆ ದಾಖಲೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ, ಹೋಟೆಲ್‌ಗಳು ಸಂಪೂರ್ಣ ಭರ್ತಿಯಾಗಿದ್ದವು ಮತ್ತು ಬೀಚ್‌ಗಳಲ್ಲಿ ಹಲವಾರು ಚಟುವಟಿಕೆಗಳು ನಡೆದಿವೆ. ನೈಟ್‌ಲೈಫ್, ಸಾಂಸ್ಕೃತಿಕ ಉತ್ಸವ ಮತ್ತು ಪ್ರಸಿದ್ಧ ಬೀಚ್‌ಗಳು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ನಿರ್ಜನ ಪ್ರದೇಶಗಳತ್ತ ಪ್ರವಾಸಿಗರು ಹೆಚ್ಚು ತೆರಳಿದ್ದಾರೆ. ಈಗ ಪ್ರವಾಸಿಗರು ಉತ್ತರದ ಕೇರಿ, ದಕ್ಷಿಣದ ಕಾನಕೋನಗೆ ಭೇಟಿ ನೀಡುತ್ತಿದ್ದಾರೆ. ಪ್ರಾಚೀನ ಮತ್ತು ಪ್ರಸಿದ್ಧಿಯಾದ ಅಂಜುನಾ, ಕಲಂಗುಟ್ ಹೊರತುಪಡಿಸಿ ಬೇರೆ ಕಡೆ ತೆರಳುತ್ತಿದ್ದಾರೆ.

ಸಾಮಾಜಿಕ ಜಾಲತಾಣ ತಪ್ಪು ಮಾಹಿತಿ
ಗೋವಾ ಪ್ರವಾಸಿಗರ ಭೇಟಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ಸಂಶಯಾಸ್ಪದವಾಗಿವೆ. ಚೀನಾ ಎಕಾನಾಮಿಕ್ ಇನ್‌ಫರ್‌ಮೇಶನ್ ಸೆಂಟರ್ ಹೆಸರಿನ ಸಮೀಕ್ಷೆ ಸಾಮಾಜಿಕ ಜಾಲತಾಣದದ ಮೇಲೆ ಪ್ರಭಾವ ಬೀರಿದೆ, ಈ ಪ್ರಭಾವಿಗಳು ಕೇವಲ ಲೈಕ್, ವೀವ್ಸ್‌ಗಳಿಗೆ ಸೀಮಿತವಾಗಿದ್ದಾರೆ. ವಿರೋಧಾತ್ಮಕ ಮಾಹಿತಿಗಳನ್ನು ಹಂಚಿಕೆ ಮಾಡಿದ್ದಾರೆ. ಒಂದು ಕಡೆ ವಿಮಾನಯಾನದ ದರಗಳು ಮತ್ತು ಹೋಟೆಲ್ ವೆಚ್ಚ ಅಧಿಕ ಎಂದು, ಮತ್ತೊಂದು ಕಡೆ ಅವರು ಗೋವಾದ ರಸ್ತೆಗಳು, ಬೀಚ್‌ಗಳು ಖಾಲಿಯಾಗಿವೆ ಎಂದು ದೂರುತ್ತಿದ್ದಾರೆ. ಈ ಎರಡೂ ಘೋಷಣೆಗಳು ತಪ್ಪು ಮಾಹಿತಿಯಾಗಿವೆ ಮತ್ತು ಯಾವುದೇ ಅಂಕಿ ಅಂಶಗಳ ಬೆಂಬಲವನ್ನು ಹೊಂದಿಲ್ಲ.
ಅಂಕಿ ಅಂಶಗಳು ಧನಾತ್ಮಕವಾಗಿವೆ
ಗೋವಾದ ಪ್ರವಾಸೋದ್ಯಮ ಕ್ಷೇತ್ರ ಪ್ರವರ್ಧಮಾನಕ್ಕೆ ಬರುತ್ತಿದೆ, ಆಶಾದಾಯಕ ಅಂಕಿ-ಅಂಶಗಳು ಆದಾಯದ ಹೆಚ್ಚಳವನ್ನು ಹೇಳುತ್ತಿವೆ. 2023ರ ಡಿಸೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ 2024ರ ಡಿಸೆಂಬರ್ ತಿಂಗಳು ಒಂದರಲ್ಲಿಯೇ ರಾಜ್ಯಕ್ಕೆ 75.51 ಕೋಟಿ ರೂ. ಆದಾಯ ಬಂದಿದೆ. 2024ರ ಏಪ್ರಿಲ್‌ನಿಂದ ಡಿಸೆಂಬರ್ ತನಕ 4614.77 ಕೋಟಿ ಆದಾಯ ಬಂದಿದೆ. ಕಳೆದ ವರ್ಷದ ಇದೇ ಸಮಯ 365.43 ಕೋಟಿ ಆದಾಯ ಬಂದಿತ್ತು. ಶೇ 9.62ರಷ್ಟು ಜಿಎಸ್‌ಟಿ ಆದಾಯ ಮತ್ತು ಶೇ 6.41ರಷ್ಟು ವ್ಯಾಟ್ ಸಂಗ್ರಹದಲ್ಲಿ ಏರಿಕೆ ಕಂಡಿದೆ. ಪ್ರವಾಸೋದ್ಯಮ ಹೇಗೆ ಆರ್ಥಿಕ ಚಟುವಟಿಕೆಗೆ ಬೆಂಬಲವಾಗಿದೆ ಎಂದು ಇದು ಹೇಳಿದೆ.

ದೇಶಿಯ ಮತ್ತು ವಿದೇಶಿಯರ ಭೇಟಿ
ವಿದೇಶಿಗರು ಮತ್ತು ಭಾರತದ ಪ್ರವಾಸಿಗರಿಗೆ ಗೋವಾ ನೆಚ್ಚನ ತಾಣವಾಗಿದೆ. ದೇಶಿಯ ಪ್ರವಾಸಿಗರಿಗೆ ಬೀಚ್, ಪುರಾತನ ಸ್ಥಳಗಳು, ಮಾರುಕಟ್ಟೆಗಳು ಇಲ್ಲಿಗೆ ಭೇಟಿ ನೀಡುವಂತೆ ಸೆಳೆಯುತ್ತವೆ. ವಿದೇಶಿಗರು ಗೋವಾದ ವರ್ಚಸ್ಸು, ಪ್ರಶಾಂತ ಪರಿಸರ, ಶ್ರೀಮಂತಿಕೆಯ ಸಾಂಸ್ಕೃತಿಕ ಅನುಭವಕ್ಕಾಗಿ ಆಗಮಿಸುತ್ತಾರೆ. ಆದ್ದರಿಂದ ಗೋವಾ ಭಾರತದ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಜೊತೆಗೆ, ರಾಜ್ಯದ ವೈವಿಧ್ಯಮಯ ಆಕರ್ಷಣೆಗಳು ಸಾಹಸ ಕ್ರೀಡೆಗಳು, ಶುಶ್ರೂಷಾ ಶಿಬಿರಗಳ ತನಕ ಗೋವಾ ಪ್ರತಿಯೊಬ್ಬ ಪ್ರವಾಸಿಗನನ್ನೂ ಆಕರ್ಷಿಸುತ್ತದೆ. ಇದರಿಂದಾಗಿ ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಅಪಪ್ರಚಾರ ಏಕೆ ನೋವು ತರುತ್ತದೆ
ತಪ್ಪು ಮಾಹಿತಿಗಳ ಮೂಲಕ ಅಪಪ್ರಚಾರ ನಡೆಸುವುದು ಪ್ರವಾಸೋದ್ಯಮ ಮತ್ತು ಅದರ ಭಾಗೀದಾರರು ಪ್ರವಾಸೋದ್ಯಮ ಉತ್ತೇಜಿಸಲು ಕೈಗೊಳ್ಳುವ ಶ್ರಮ ಮತ್ತು ಕೆಲಸಗಳನ್ನು ದುರ್ಬಲಗೊಳಿಸುತ್ತದೆ. ಅಸಮರ್ಥವಾದ ಆರೋಪಗಳ ಆಧಾರದ ಮೇಲೆ ನಕಾರಾತ್ಮಕ ಚಿತ್ರಣಗಳನ್ನು ಕಟ್ಟಿಕೊಡುವುದು ಗೋವಾ ಚಿತ್ರಣವನ್ನು ಹಾಳು ಮಾಡಬಹುದು ಮತ್ತು ಪ್ರವಾಸಿಗರಲ್ಲಿ ಅನಗತ್ಯ ಅನುಮಾನಗಳನ್ನು ಹುಟ್ಟುಹಾಕಬಹುದು.
ಅಂತಿಮ ಷರಾ
ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಕೇವಲ ಒಂದು ಸುಳ್ಳು ಮಾಹಿತಿ. ದಾಖಲೆಗಳನ್ನು ಮುರಿಯುವ ಆದಾಯ, ಜನಸಂದಣಿಯಿಂದ ತುಂಬಿ ತುಳುಕುತ್ತಿರುವ ಪ್ರವಾಸಿ ತಾಣಗಳು ಮತ್ತು ನಿರ್ಜನ ಸ್ಥಳಗಳತ್ತ ಹೆಚ್ಚುತ್ತಿರುವ ಆಸಕ್ತಿ ಇವೆಲ್ಲವೂ ಗೋವಾದ ಪ್ರವಾಸೋದ್ಯಮ ಕ್ಷೇತ್ರ ಬೆಳೆಯುತ್ತಿದೆ ಮಾತ್ರವಲ್ಲ ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಎಂಬುದನ್ನೂ ತೋರಿಸುತ್ತಿದೆ. ಪ್ರವಾಸಿಗರು ಈ ಕರಾವಳಿ ತಾಣದ ವೈವಿಧ್ಯಮಯ ಅನುಭವಗಳನ್ನು ಅನ್ವೇಷಣೆ ಮಾಡಲು ಮತ್ತು ಆನಂದಿಸಲು ಆಗಮಿಸಬಹುದು. ಗೋವಾ ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ಪ್ರಸಿದ್ಧ ತಾಣ. ಅಸಂಬದ್ಧ ಹೇಳಿಕೆಗಳು, ವರದಿಗಳು ಅದರ ನಿಜವಾದ ಆಕರ್ಷಣೆ ಮತ್ತು ಯಶಸ್ಸನ್ನು ಮಂಕಾಗಿಸಲು ಸಾಧ್ಯವಿಲ್ಲ ಎಂದು ಸಾಬೀತಾಗಿದೆ.












Click it and Unblock the Notifications