ದೆಹಲಿಯ ಇತಿಹಾಸದಲ್ಲಿ ಅತಿ ಹೆಚ್ಚು ಮಾಸಿಕ ಮಳೆ: ಯಾವಾಗ? ಎಷ್ಟು?

ನವದೆಹಲಿ ಅಕ್ಟೋಬರ್ 12: ಈ ತಿಂಗಳು ದೆಹಲಿಯಲ್ಲಿ ಇದುವರೆಗೆ 128.2 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇದು 1956 ರಿಂದ ಅಕ್ಟೋಬರ್‌ನಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ. IMD ಪ್ರಕಾರ, ಅಕ್ಟೋಬರ್ 1956 ರಲ್ಲಿ ನಗರವು 236.2 ಮಿಮೀ ಮಳೆಯನ್ನು ಪಡೆಯಿತು. ದೆಹಲಿಯ ಇತಿಹಾಸದಲ್ಲಿ ಅತಿ ಹೆಚ್ಚು ಮಾಸಿಕ ಮಳೆ 238.2 ಮಿಮೀ, ಇದು 1954 ರಲ್ಲಿ ದಾಖಲಾಗಿದೆ.

ಮಂಗಳವಾರ ಬೆಳಿಗ್ಗೆ 8:30 ರ ವರೆಗೆ 128.2 ಮಿಮೀ ಮಳೆಯು ನಗರ ಅಕ್ಟೋಬರ್‌ನಲ್ಲಿ ಕಂಡ ನಾಲ್ಕನೇ ಅತಿ ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಈ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ 122.5 ಮಿಮೀ ಮಳೆಯಾಗಿತ್ತು. ಅಕ್ಟೋಬರ್ 2020, 2018 ಮತ್ತು 2017 ರಲ್ಲಿ ನಗರದಲ್ಲಿ ಯಾವುದೇ ಮಳೆಯಾಗಲಿಲ್ಲ, ಆದರೆ ಅಕ್ಟೋಬರ್ 2019 ರಲ್ಲಿ 47.3 ಮಿಮೀ ಮಳೆಯಾಗಿದೆ.

ಬುಧವಾರದಂದು ಮೋಡ ಕವಿದ ವಾತಾವರಣ ಮತ್ತು ಲಘು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಮೂರು ವಾರಗಳಲ್ಲಿ, ದೆಹಲಿಯು ಹೆಚ್ಚು ಮಳೆ ದಾಖಲಿಸಿದೆ. 21 ರಿಂದ 24 ಸೆಪ್ಟೆಂಬರ್ ವರೆಗೆ, ಚಂಡಮಾರುತದ ಪರಿಚಲನೆ ಮತ್ತು ಕಡಿಮೆ ಒತ್ತಡದ ವ್ಯವಸ್ಥೆಯ ಪರಸ್ಪರ ಕ್ರಿಯೆಯಿಂದಾಗಿ ರಾಜಧಾನಿ ತಡವಾಗಿ ಮಾನ್ಸೂನ್ ಮಳೆಯನ್ನು ಅನುಭವಿಸಿತು.

Record rainfall in Delhi: 128.2 mm rainfall so far

ಆದಾಗ್ಯೂ, ಪ್ರಸ್ತುತ ಮಳೆಯು ಮಾನ್ಸೂನ್ ಮಳೆಯಲ್ಲ, ಇದು ಸೆಪ್ಟೆಂಬರ್ 29 ರಂದು ನಗರದಿಂದ ಹಿಮ್ಮೆಟ್ಟಿದೆ ಎಂದು ಐಎಂಡಿ ತಿಳಿಸಿದೆ. ಪೂರ್ವ ದಿಕ್ಕಿನ ಗಾಳಿ ಮತ್ತು ಪಶ್ಚಿಮದ ಅಡಚಣೆಯ ಪರಸ್ಪರ ಕ್ರಿಯೆಯಿಂದ ಉಂಟಾದ ಧಾರಾಕಾರ ಮಳೆಯು ವರ್ಷಕ್ಕೆ ಅಗತ್ಯವಾದ ಪ್ರಮಾಣದ ಮಳೆ(774.4 ಮಿಮೀ) ಪ್ರಮಾಣವನ್ನು ತಲುಪಲು ಸಹಾಯ ಮಾಡಿತು ಈ ವರ್ಷ ಇಲ್ಲಿಯವರೆಗೆ ದೆಹಲಿಯಲ್ಲಿ 790 ಮಿಮೀ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.

Record rainfall in Delhi: 128.2 mm rainfall so far

ಇಂದು ಮುಂಜಾನೆ ರಾಷ್ಟ್ರ ರಾಜಧಾನಿ ದೆಹಲಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ ನಗರದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿತ್ತು. ರಾಜಧಾನಿ ಸೆಪ್ಟೆಂಬರ್‌ನಲ್ಲಿ 31% ಹೆಚ್ಚುವರಿ ಮಳೆಯನ್ನು ದಾಖಲಿಸಿದೆ. ಸಾಮಾನ್ಯ 125.1 ಮಿಮೀಯಾಗಿದ್ದು 164.5 ಮಿಮೀ ಮಳೆ ಸೆಪ್ಟೆಂಬರ್‌ನಲ್ಲಿ ಆಗಿದೆ. ಜುಲೈನಲ್ಲಿ 37% ಸರಾಸರಿಗಿಂತ ಹೆಚ್ಚಿನ 286.3 ಮಿಮೀ ಮಳೆ ದಾಖಲಾಗಿದೆ, ಆದರೆ ಜೂನ್‌ನಲ್ಲಿ 74.1 ಮಿಮೀ ಸರಾಸರಿಗೆ ಹೋಲಿಸಿದರೆ ಕೇವಲ 24.5 ಮಿಮೀ ಮಳೆ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+