ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರ್ಮೆಹರ್ ಕೌರ್, ಪಾಕಿಸ್ತಾನ ಎಷ್ಟು ಭಾರತೀಯರನ್ನು ಕೊಂದಿದೆ ಗೊತ್ತಾ?

ಭಾರತ ಇಲ್ಲಿಯವರೆಗೆ ಪಾಕಿಸ್ತಾನದ ಜತೆ 3 ಯುದ್ಧಗಳನ್ನು ಮಾಡಿದೆ. ವಿಶೇಷ ಎಂದರೆ ಮುರೂ ಯುದ್ಧಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಂಡೆತ್ತಿ ಹೋಗಿದ್ದಲ್ಲ. ಬದಲಿಗೆ ಪಾಕಿಸ್ತಾನವೇ ಭಾರತದ ಆಕ್ರಮಣಕ್ಕೆ ಪ್ರೇರೇಪಣೆ ನೀಡಿತ್ತು.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 27: 'ಎಬಿವಿಪಿಯಿಂದ ನಾನು ಭಯಗೊಂಡಿಲ್ಲ' ಎನ್ನುವ ಆಂದೋಲನದೊಂದಿಗೆ ಗುರ್ಮೆಹರ್ ಕೌರ್ ಇದೀಗ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ.

ಅಂದಹಾಗೆ ಗುರ್ಮೆಹರ್ ಕೌರ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮಂದೀಪ್ ಸಿಂಗ್ ಪುತ್ರಿ. ಈ ಹಿಂದೆ "ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿದಲ್ಲ, ಯುದ್ದ ಆತನನ್ನ ಬಲಿ ಪಡೆಯಿತು," ಎನ್ನುವ ಸಂದೇಶದೊಂದಿಗೆ ರಾತೋ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಗುರ್ಮೆಹರ್ ಕೌರ್ ಜನಪ್ರಿಯರಾಗಿದ್ದರು.

ಆಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಬೆಂಬಲಿಸಲಾಗಿದೆ, ನಿಂದಿಸಲಾಗಿದೆ, ವಿಡಂಬನೆಗೂ ಆಕೆ ಗುರಿಯಾಗಿದ್ದಾರೆ. ಎಲ್ಲಿವರೆಗೆ ಅಂದರೆ ಸ್ವತಃ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹವಾಗ್ ಕೂಡಾ "ನಾಣು ಎರಡು ತ್ರಿ ಶತಕ ಹೊಡೆದಿಲ್ಲ, ನನ್ನ ಬ್ಯಾಟ್ ಜೊಡೆದಿದೆ," ಎಂದು ಚಟಾಕಿ ಹಾರಿಸಿದ್ದರು.[ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ!]

ಕಾಲುಕೆರೆದು ಜಗಳಕ್ಕಿಳಿಯುವ ಪಾಕಿಸ್ತಾನ

ಕಾಲುಕೆರೆದು ಜಗಳಕ್ಕಿಳಿಯುವ ಪಾಕಿಸ್ತಾನ

ಸದ್ಯ ಈ ತಮಾಷೆ, ವಿಡಂಬನೆಗಳನ್ನು ಪಕ್ಕಕ್ಕೆ ಎತ್ತಿಡೋಣ. ಭಾರತ ಇಲ್ಲಿಯವರೆಗೆ ಪಾಕಿಸ್ತಾನದ ಜತೆ ಮೂರು ಯುದ್ಧಗಳನ್ನು ಮಾಡಿದೆ. ವಿಶೇಷ ಎಂದರೆ ಮುರೂ ಯುದ್ಧಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಂಡೆತ್ತಿ ಹೋಗಿದ್ದಲ್ಲ. ಮೂರೂ ಯುದ್ಧಗಳಲ್ಲಿ ಪಾಕಿಸ್ತಾನವೇ ಭಾರತದ ಆಕ್ರಮಣಕ್ಕೆ ಪ್ರೇರೇಪಣೆ ನೀಡಿತ್ತು ಎನ್ನುವುದು ಗಮನಾರ್ಹ ಸಂಗತಿ.[ಕಾರ್ಗಿಲ್ ಹುತಾತ್ಮ ಕುಟುಂಬಗಳಿಗೆ ಕರ್ನಾಟಕ ಕೊಡುಗೆ]

ಪರೋಕ್ಷ ಯುದ್ಧ

ಪರೋಕ್ಷ ಯುದ್ಧ

ಹಲವು ಸಂದರ್ಭಗಳಲ್ಲಿ ಭಾರತದ ಮೇಲೆ ಪರೋಕ್ಷ ಯುದ್ಧ ಸಾರಲು ಪಾಕಿಸ್ತಾನ ಭಯೋತ್ಪಾದನೆ ಸಂಘಟನೆಗಳನ್ನು ಪೋಷಿಸುತ್ತಾ, ಅವುಗಳಿಗೆ ರಕ್ಷಣೆ ನೀಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿದ್ದೇ. ಅದರಲ್ಲೂ ಲಷ್ಕರ್ ಇ ತಯ್ಯಬಾ, ಜೈಷ್ ಎ ಮೊಹಮ್ಮದ್ ಮೊದಲಾದ ಸಂಘಟನೆಗಳಿಗೆ ಭಾರತದಲ್ಲಿ ದಾಳಿಗಳನ್ನು ನಡೆಸಲು ಬೆಂಬಲದ ಜತೆ ಹಣವನ್ನೂ ನೀಡಲಾಯಿತು.[ಪಾಕ್ ಕಾರ್ಗಿಲ್ ವೀರರ ಹೆಸರು ವೆಬ್ ಸೈಟ್ ನಲ್ಲಿ]

530 ಭಾರತೀಯರ ಬಲಿದಾನ

530 ಭಾರತೀಯರ ಬಲಿದಾನ

ಸಿಮಿ ಇಂಡಿಯನ್ ಮುಜಾಹಿದ್ದೀನ್ ನಂತಹ ಭಾರತೀಯ ಉಗ್ರ ಸಂಘಟನೆಗಳಿಗೂ ಇದೇ ಪಾಕಿಸ್ತಾನ ಬೆಂಬಲ ನೀಡಿದ್ದನ್ನು ಮರೆಯುವಂತಿಲ್ಲ. ಇದೇ ಗುರ್ಮೆಹರ್ ಕೌರ್ ಮಾತನಾಡುತ್ತಿರುವ ಕಾರ್ಗಿಲ್ ಯುದ್ಧವನ್ನೇ ನೋಡಿದರೂ ಭಾರತದ ಗಡಿ ರಕ್ಷಣೆ ಮಾಡಲು 530 ಭಾರತೀಯ ಸೈನಿಕರು ಇದರಲ್ಲಿ ಜೀವ ಕಳೆದುಕೊಳ್ಳಬೇಕಾಯಿತು.[ದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಎಬಿವಿಪಿ-ಎಐಎಸ್ಎ ನಡುವೆ ಭಾರೀ ಸಂಘರ್ಷ]

14,743 ನಾಗರಿಕರು, 6,276 ಸೈನಿಕರ ಬಲಿದಾನ

14,743 ನಾಗರಿಕರು, 6,276 ಸೈನಿಕರ ಬಲಿದಾನ

ಕಾರ್ಗಿಲ್ ಕತೆ ಹೀಗಾದರೆ, 1998ರಿಂದ 2017ರ ವರಗೆ ಕಳೆದ 19 ವರ್ಷಗಳಲ್ಲಿ ಭಾರತದಲ್ಲಿ 47,234 ಉಗ್ರ ದಾಳಿಗಳು ನಡೆದಿವೆ. ಇದರಲ್ಲಿ 14,743 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರರ ವಿರುದ್ದದ ಹೋರಾಟದಲ್ಲಿ 6,276 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ.

ಸೈನಿಕರನ್ನು ಕೊಂದಿದ್ದು ಪಾಕಿಸ್ತಾನ

ಸೈನಿಕರನ್ನು ಕೊಂದಿದ್ದು ಪಾಕಿಸ್ತಾನ

ಗುರ್ಮೆಹರ್ ಮತ್ತು ಆಕೆಯ ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕಿರುವುದು ಏನೆಂದರೆ ಭಾರತದ ಯಾವ ಸೈನಿಕರಿಗೂ ಯುದ್ಧ ಬೇಕಾಗಿಲ್ಲ. ಆದರೆ ಪಾಕಿಸ್ತಾನ ಪರೋಕ್ಷ ಯುದ್ಧ ಮತ್ತು ಯುದ್ಧವನ್ನು ತನ್ನ ಪಾಲಿಸಿಯಾಗಿ ಅಳವಡಿಸಿಕೊಂಡಿದೆ. ಭಾರತವನ್ನು ಹೇಗಾದರೂ ಮಾಡಿ ಮಟ್ಟಹಾಕುವುದು ಪಾಕಿಸ್ತಾಣದ ಒನ್ ಲೈನ್ ಅಜೆಂಡಾ.

ಒಟ್ಟಾರೆ ವಿಷಯ ಏನೆಂದರೆ ಯುದ್ಧಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಭಾರತೀಯ ಸೈನಿಕರನ್ನು ಕೊಂದಿದೆ ಅಷ್ಟೆ.

English summary
Gurmehar Kaur is the talk of the town after she launched a campaign, " I am not scared of ABVP." Gurmehar who is the daughter of Kargil martyr Captain Mandeep Singh had in one of her earlier videos had posted a message, " Pakistan did not kill my dad, war killed him."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X