ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ತೊರೆಯುವ ಹಾದಿಯಲ್ಲಿ ಜಯಂತಿ ಬರೆದ ಪತ್ರ...

By Mahesh
|
Google Oneindia Kannada News

ನವದೆಹಲಿ, ಜ.30: ಕಾಂಗ್ರೆಸ್ ಆಘಾತಕಾರಿ ಬೆಳವಣಿಗೆಯೊಂದನ್ನು ಎದುರಿಸುತ್ತಿದೆ. ಪಕ್ಷದ ಹಿರಿಯ ನಾಯಕಿ ಜಯಂತಿ ನಟರಾಜನ್ ಅವರು ಪಕ್ಷ ತೊರೆಯುವ ಹೊಸ್ತಿಲಿನಲ್ಲಿ ನಿಂತುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವೊಂದನ್ನು 'ಶೂಟ್' ಮಾಡಿದ್ದಾರೆ.

ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರ ನಿರ್ಣಯಗಳಿಂದ ಪಕ್ಷದ 'ಇಮೇಜ್' ಹಾಳಾಗಲಿದೆ ಎಂಬ ಕಾರಣ ಜಯಂತಿ ಅವರು ನೀಡಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಜಯಂತಿ ನಟರಾಜನ್ ಹರಿಹಾಯ್ದಿದ್ದು, ಮುಂದೇನಾಗುವುದೋ ಕಾದು ನೋಡಬೇಕಿದೆ. ಸೋನಿಯಾಗೆ ಬರೆದ ಪತ್ರವನ್ನು ಮೊದಲಿಗೆ ದಿ ಹಿಂದೂ ಪ್ರಕಟಿಸಿದೆ.

ನವೆಂಬರ್ 4, 2014ರಂದು ಸೋನಿಯಾಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಜಯಂತಿ ಅವರು ತಮ್ಮ ಕರ್ತವ್ಯ ನಿಷ್ಠೆ, ಪಕ್ಷದ ಹಿತಾಸಕ್ತಿ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ವಕ್ತಾರಳಾಗಿ ನಾನು ಯಾವುದೇ ತಪ್ಪು ಮಾಡಿಲ್ಲ ಅದು ನಿಮಗೂ, ಮನಮೋಹನ್ ಸಿಂಗ್ ಜೀ ಅವರಿಗೂ ಗೊತ್ತಿದೆ.ಆದರೆ, ನನ್ನನ್ನು ಕಡೆಗಣಿಸಕಾಗಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. [ಜಯಂತಿ ನಟರಾಜನ್ ಯಾರು?]

Read full text: Jayanthi Natarajan's letter to Sonia Gandhi

ನಾನು ಸಚಿವೆಯಾಗಿದ್ದ ಕಾಲದಲ್ಲೂ ಅಜಯ್ ಮಾಕೇನ್ ಅವರು ದೆಹಲಿ ಬಂದು ವಕ್ತಾರಳಂತೆ ಸುದ್ದಿಗೋಷ್ಠಿ ನಡೆಸಲು ಹೇಳಿದರು. ಅದರೆ, ನಾನು ಅದನ್ನು ನಿರಾಕರಿಸಿದೆ.

ಒಡಿಶಾದಲ್ಲಿ ವೇದಾಂತ ಸಂಸ್ಥೆ ಗಣಿಗಾರಿಕೆ ವಿಷಯದಲ್ಲಿ ರಾಹುಲ್ ಗಾಂಧಿ ಅವರು ಮೂಗು ತೂರಿಸಿದರು. ಸುಮಾರು 30,000 ಕೋಟಿ ರು ಪ್ರಾಜೆಕ್ಟ್ ಕೈತಪ್ಪುತ್ತಿದೆ ಎಂದು ನನ್ನ ಸಹದ್ಯೋಗಿಗಳು ಒತ್ತಡ ಹೇರಿದರು.

ಅದರೆ, ನಾನು ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿರಲಿಲ್ಲ. ನಾನು ಮಾಡಿದ್ದು ಸರಿ ಎಂದು ಸುಪ್ರೀಂಕೋರ್ಟ್ ಕೂಡಾ ತೀರ್ಪು ನೀಡಿತು. ಈ ಮೂಲಕ ಪಕ್ಷಕ್ಕೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸಿದೆ. ಅದರೆ, ವಿನಾಕರಣ ನನ್ನನ್ನು ರಾಹುಲ್ ವಿರುದ್ಧ ಎತ್ತಿ ಕಟ್ಟಲಾಯಿತು ಎಂದು ಜಯಂತಿ ಬೇಸರ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರದ ಕಾಲದಲ್ಲಿ ಪರಿಸರ ಖಾತೆ ಸಚಿವೆಯಾಗಿದ್ದ ಜಯಂತಿ ನಟರಾಜನ್ ಅವರು ಬರೆದಿರುವ ಪತ್ರದ ಪೂರ್ಣ ಸಾರಂಶ ಇಲ್ಲಿ ಓದಿ. ಜಯಂತಿ ನಟರಾಜನ್ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡಸಿ ತಮ್ಮ ನಿರ್ಧಾರವನ್ನು ತಿಳಿಸುವ ಸಾಧ್ಯತೆಯಿದೆ.

English summary
In a shocking letter to Congress President Sonia Gandhi, senior leader Jayanthi Natarajan made some startling claims that could hurt the party's image in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X