ಆರ್ಬಿಐನಿಂದ 5,000 ರು ಡೆಪಾಸಿಟ್ ಮಿತಿ ಆದೇಶ ವಾಪಸ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 21 : ಶ್ರೀಸಾಮಾನ್ಯರ ಅನುಕೂಲಕ್ಕೋಸ್ಕರ ಮತ್ತು ಗ್ರಾಹಕರ ಒತ್ತಾಯದ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಬದಲಾವಣೆಯನ್ನು ಮಾಡಿದೆ. ಅದೇನೆಂದರೆ, ಡೆಪಾಸಿಟ್ ಮಾಡಲು 5000 ರುಪಾಯಿ ಮಿತಿಯ ಆದೇಶವನ್ನು ಹಿಂಪಡೆದಿರುವುದು.

5000 ರುಪಾಯಿಗಿಂತ ಹೆಚ್ಚು ಹಳೆಯ 500 ಮತ್ತು 1000 ರುಪಾಯಿಗಳನ್ನು ಡಿಸೆಂಬರ್ 30, 2016ರವರೆಗೆ ಒಂದು ಬಾರಿ ಮಾತ್ರ ಡೆಪಾಸಿಟ್ ಮಾಡಬಹುದು ಎಂಬ ನಿರ್ಬಂಧ ಹೇರಿ ಡಿಸೆಂಬರ್ 19ರಂದು ಆರ್ಬಿಐ ಪ್ರಕಟಣೆ ಹೊರಡಿಸಿತ್ತು. ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಈ ನಿರ್ಬಂಧವನ್ನು ಭಾಗಶಃ ಹಿಂಪಡೆದಿದೆ.

ಈ ನಿರ್ಬಂಧದ ಹಿಂತೆಗೆತ ಎಲ್ಲರಿಗೂ ಅನ್ವಯವಾಗುವುದಿಲ್ಲ. ಅಂದರೆ, KYC ನಿಯಮಗಳನ್ನು ಪಾಲನೆ ಮಾಡಿದವರಿಗೆ ಮಾತ್ರ ಈ ನಿಯಮ ಸಡಿಲಿಕೆಯಾಗಿರುತ್ತದೆ. KYC ನಿಯಮಗಳನ್ನು ಪಾಲನೆ ಮಾಡಿದವರು ಮಾತ್ರ ಎಷ್ಟು ಬಾರಿಯಾದರೂ 5000 ರುಪಾಯಿಗಿಂತ ಹೆಚ್ಚು ಹಣವನ್ನು ಡೆಪಾಸಿಟ್ ಮಾಡಬಹುದು.[ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐ ಎಷ್ಟು ಖರ್ಚು ಮಾಡ್ತಿದೆ?]

RBI withdraws Rs 5000 deposit restriction for KYC compliant

KYC (Know Your Customer) ನಿಯಮ ಪಾಲಿಸದವರಿಗೆ ಡಿಸೆಂಬರ್ 30ರವರೆಗೆ 5000 ರುಪಾಯಿಗಿಂತ ಹೆಚ್ಚು ಹಣ ಒಂದು ಬಾರಿ ಮಾತ್ರ ಡೆಪಾಸಿಟ್ ಮಾಡಬಹುದೆಂಬ ನಿರ್ಬಂಧನೆ ಮುಂದುವರಿಯುತ್ತದೆ. [ಹೊಸ ಸುತ್ತೋಲೆ ಇಲ್ಲಿದೆ]

ಈ ಮೊದಲು, KYC ನಿಯಮ ಪಾಲಿಸಿದ್ದರೂ ಹಲವಾರು ನಿಬಂಧನೆಗಳನ್ನು ಆರ್ಬಿಐ ಹೇರಿತ್ತು. 5000 ರು.ಗಿಂತ ಹೆಚ್ಚು ಹಣ ಡೆಪಾಸಿಟ್ ಮಾಡುವಾಗ ಇಬ್ಬರು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ, ಹಿಂದೆ ಏಕೆ ಇಷ್ಟು ಮೊತ್ತ ಡೆಪಾಸಿಟ್ ಮಾಡಿರಲಿಲ್ಲ ಎಂಬ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಬೇಕಿತ್ತು. [ಪ್ಯಾನ್ ಕಾರ್ಡ್ ಇಲ್ಲದೆ ಹಣ ಜಮಾ ಮಾಡಿದವರಿಗೆ ಕಷ್ಟಕಾಲ!]

ಒಂದಕ್ಕಿಂತ ಹೆಚ್ಚು ಬಾರಿ ಡೆಪಾಸಿಟ್ ಮಾಡಿವಾಗ 5000 ರುಪಾಯಿಗಿಂತ ಹೆಚ್ಚು ಮೊತ್ತವಾದರೂ ನಿರ್ಬಂಧನೆ ಹೇರಲಾಗಿತ್ತು. ಈಗ ಈ ನಿಬಂಧನೆಯನ್ನೂ ಹಿಂದಕ್ಕೆ ಪಡೆಯಲಾಗಿದೆ. ಆದರೆ, KYC ನಿಯಮ ಪಾಲಿಸದವರು 50,000 ರುಪಾಯಿಗಿಂತ ಹೆಚ್ಚು ಹಣವನ್ನು ಡೆಪಾಸಿಟ್ ಮಾಡುವಂತಿಲ್ಲ. [ವೇತನ ಪಾವತಿಗೆ ಆನ್ ಲೈನ್, ಚೆಕ್: ಕೇಂದ್ರದಿಂದ ಸುಗ್ರೀವಾಜ್ಞೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reserve Bank of India has issued notification, withdraws Rs.5000 deposit restriction for KYC compliant accounts. Earlier RBI has restricted deposit of old notes (500 and 1000) more than Rs. 5000 only once till December 30, 2016.
Please Wait while comments are loading...