ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RBI Withdraw ₹2,000 Notes: ರೂ. 500 ಮತ್ತು 1000 ರೂ. ನೋಟಿನ ಮಹತ್ವದ ಮಾಹಿತಿ ನೀಡಿದ ದಾಸ್

|
Google Oneindia Kannada News

ಬೆಂಗಳೂರು, ಜೂನ್ 08: ಇತ್ತೀಚೆಗಷ್ಟೇ 2000 ರೂಪಾಯಿ ಮುಖಬೆಲೆ ನೋಟನ್ನು ಹಿಂಪಡೆದ ನಂತರ ಸಂಗ್ರಹವಾದ ನೋಟುಗಳಲ್ಲಿ ಬಹುತೇಕ ಕರೆನ್ಸಿಗಳು ಠೇವಣಿ ರೂಪದಲ್ಲಿಯೇ ಬಂದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಜೊತೆಗೆ ಅವರು 500 ರೂ. ಮತ್ತು 1000 ರೂ. ನೋಟಿನ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಗುರುವಾರ ನಡೆದ ಸೆಂಟ್ರಲ್ ಬ್ಯಾಂಕಿನ ಎರಡನೇ ಹಣಕಾಸು ನೀತಿ ಸಭೆಯ ಬಳಿಕ ಮಾತನಾಡಿದರು. ಈ ವೇಳೆ 2000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆಯುವ ಬಗ್ಗೆ ಘೋಷಿಸಲಾಗಿದೆ. ಅದರೆ ಯಾವ ಕಾರಣಕ್ಕೂ ಹಾಲಿ ಇರುವ ₹500 ನೋಟುಗಳನ್ನು ತೆಗೆದುಹಾಕುವ ಅಥವಾ ₹1,000 ಮುಖಬೆಲೆಯ ನೋಟುಗಳನ್ನು ಹೊಸದಾಗಿ ಮತ್ತೆ ಮರುಪರಿಚಯಿಸುವ ಉದ್ದೇಶವಿಲ್ಲ ಬ್ಯಾಂಕ್ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

RBI Not Decided To Withdraw ₹500 Notes And Reintroduce To ₹1000 Notes, Shakikant Das

ಸದ್ಯ ಹಿಂಪಡೆಯಲಾಗಿರುವ ₹2000 ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಆದೇಶದ ನಂತರವೇ ಆರ್‌ಬಿಐ ಕೇಂದ್ರೀಯ ಬ್ಯಾಂಕ್ ಇತ್ತೀಚೆಗೆ ಹೊಂದಿರುವವರು ತಮ್ಮ ₹500 ನೋಟುಗಳನ್ನು ಹಿಂತೆಗೆದುಕೊಳ್ಳುತ್ತದೆ ಮತ್ತು ₹1,000 ಮುಖಬೆಲೆಯ ನೋಟು ಮರುಪರಿಚಯ ಎಂಬ ವಿಚಾರಗಳೆಲ್ಲವು ಊಹಾಪೋಹ ಎಂದು ಹೇಳಿದರು.

 500 ರೂಪಾಯಿಗೆ ಅಡುಗೆ ಅನಿಲ, 100 ಯೂನಿಟ್‌ ಉಚಿತ ವಿದ್ಯುತ್‌: ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ಬಂಪರ್‌ ಕೊಡುಗೆ 500 ರೂಪಾಯಿಗೆ ಅಡುಗೆ ಅನಿಲ, 100 ಯೂನಿಟ್‌ ಉಚಿತ ವಿದ್ಯುತ್‌: ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಿಂದ ಜನರಿಗೆ ಬಂಪರ್‌ ಕೊಡುಗೆ

ಇದೇ ವೇಳೆ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಆರ್‌ಬಿಐ ಗವರ್ನರ್, 2000₹ ನೋಟು ವಾಪಾಸ್ ಆದೇಶ ಬಳಿಕ ₹1.80 ಲಕ್ಷ ಕೋಟಿ ₹2,000 ನೋಟುಗಳು ವಾಪಸಾಗಿವೆ ಎಂದು ಮಾಹಿತಿ ನೀಡಿದರು. ಇನ್ನೂ ಸರಿ ಸುಮಾರು ಅರ್ಧದಷ್ಟು ದೊಡ್ಡ ನೋಟುಗಳು ಹಿಂಪಡೆಯಲಾಗಿದ್ದು, ಇನ್ನೂ ಅರ್ಧದಷ್ಟು ನೋಟುಗಳು ಬರಬೇಕಿದೆ.

ಕೊನೆ ಕ್ಷಣದವರೆಗೆ ಕಾಯಬೇಡಿ ಎಂದು ಗವರ್ನರ್ ಮನವಿ

ದೇಶದ ಜನರು ಸೆಪ್ಟಂಬರ್ 30ವರೆಗೆ ಕೊನೆಯ ಕ್ಷಣದವರೆಗೂ ನೋಟುಗಳನ್ನು ಜಮಾ ಮಾಡಲು ಆತುರಪಡಬೇಡಿ. ಪ್ರತಿ ನಿತ್ಯ ದೊಡ್ಡ ನೋಟುಗಳನ್ನು (20,000 ರೂ.) ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಶಾಖೆಗಳಿಗೆ ಹೋಗಬೇಕು. ಸೆಪ್ಟೆಂಬರ್ ಕೊನೆಯ 10-15 ದಿನಗಳಲ್ಲಿ ಹಣ ವಿನಿಮಯಕ್ಕೆ ಮುಂದಾಗಿ ತೊಂದರೆ ಪಡಬೇಡಿ ಎಂದು ಹೇಳಿದ್ದಾರೆ.

RBI Not Decided To Withdraw ₹500 Notes And Reintroduce To ₹1000 Notes, Shakikant Das

ವಾಪಸ್‌ ಪಡೆಯಲಾಗುತ್ತಿರುವ ₹2,000 ನೋಟುಗಳಲ್ಲಿ ಸರಿಸುಮಾರು ಶೇ.85 ರಷ್ಟು ಪ್ರಮಾಣ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ನೋಟಗಳಾಗಿವೆ.

ಇತ್ತೀಚಿನ MPC ಸಭೆಯಲ್ಲಿ, RBI ರೆಪೊ ದರವನ್ನು 6.5% ನಲ್ಲಿ ಯಥಾಸ್ಥಿತಿಯಲ್ಲಿ ಇರಿಸಲು ಘೋಷಣೆ ಮಾಡಲಾಗಿದೆ. ಹಣಕಾಸಿನ ನೀತಿ ನಿಲುವಿನ ಸೌಕರ್ಯಗಳನ್ನು ಹಿಂತೆಗೆದುಕೊಳ್ಳುವುದರ ಮೇಲೆ ಈ ದರ ಕೇಂದ್ರೀಕರಿಸಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

ಚಿಲ್ಲರೆ ಹಣದುಬ್ಬರ ಮುನ್ನೋಟವನ್ನು ಹಿಂದಿನ 5.2% ರಿಂದ 5.1% ಕ್ಕೆ ಇಳಿಸಲಾಗಿದೆ. ಹಣದುಬ್ಬರವು ಶೇಕಡಾ 4ರಷ್ಟು ಗುರಿಯ ಮೇಲೆ ಉಳಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
RBI Withdraw ₹2,000 Notes: RBI not decided to withdraw ₹500 notes and reintroduce to ₹1000 notes, says Shakikant Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X