Get Updates
Get notified of breaking news, exclusive insights, and must-see stories!

'ಸೀತೆ ವಿಷ್ಯದಲ್ಲಿ ರಾಮನಿಗಿಂತ ರಾವಣನೇ ಸಂಭಾವಿತ'

ರಾಮಾಯಣದಲ್ಲಿ ರಾಮ-ರಾವಣರ ನಡುವೆ ರಾವಣನೇ ಹೆಚ್ಚು ಸಂಭಾವಿತ, ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಕೂಡಾ ಸರಿಯಲ್ಲ ಎಂದು ಕೇರಳದ ಸಚಿವ ಜಿ ಸುಧಾಕರನ್ ಹೇಳಿದ್ದಾರೆ.

ಆಲಪ್ಪುಝ,ಜೂ. 6: ಮಹಿಳೆಯರ ಜತೆ ಉತ್ತಮವಾಗಿ ನಡೆದುಕೊಳ್ಳುವ ವಿಷ್ಯದಲ್ಲಿ ರಾಮನಿಗಿಂತ ರಾವಣ ಸಂಭಾವಿತ ವ್ಯಕ್ತಿಯಾಗಿದ್ದಾನೆ ಎಂದು ಕೇರಳ ಸಚಿವ ಜಿ.ಸುಧಾಕರನ್ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.

ಘೋರಕಾಡಿನಲ್ಲಿ ಸಹೋದರನ ಬಳಿ ಸೀತೆಯನ್ನು ನಿಲ್ಲಿಸಿ ಹೋದದ್ದು ಸರಿಯೇ? ಸೀತೆಯ ಮಾತನ್ನು ಅನುಸರಿಸಿ ಜಿಂಕೆಯನ್ನು ಹಿಡಿಯಲು ಲಕ್ಷ್ಮಣನು ಹೋದದ್ದು ಸರಿಯಲ್ಲ ಎಂದು ಸಚಿವ ಸುಧಾಕರನ್ ಹೇಳಿದ್ದಾರೆ.

ಆದರೆ, ಸೀತೆಯೊಂದಿಗೆ ರಾವಣ ಗೌರವದಿಂದ ನಡೆದು ಕೊಂಡಿದ್ದಾನೆ. ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಆತ ಅಪಹರಿಸಿ, ಲಂಕೆಯ ಅಶೋಕ ವನದಲ್ಲಿ ಇರಿಸಿದರೂ ಆಕೆಯನ್ನು ಮುಟ್ಟಲಿಲ್ಲ. ಈಗಿರುವ ಶ್ರೀರಾಮಂದಿರು ಇದನ್ನೆಲ್ಲ ತಿಳಿಯಬೇಕು ಎಂದಿದ್ದಾರೆ.

Ravana was more decent than Rama: Kerala Minister G Sudhakaran

ಸ್ವಾಮಿಯ ಲಿಂಗ ಕತ್ತರಿಸಿದ ಬಾಲಕಿಗೆ ಪ್ರಶಸ್ತಿ ನೀಡಬೇಕೆಂದು ಸಚಿವರು ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಧೈರ್ಯವಿದೆ ಎಂದು ಹೇಳಿ ತಿರುಗಾಡುವ ಮಹಿಳಾ ಸಂಘಟನೆಗಳು ಈ ವಿಷಯದತ್ತ ಗಮನ ಹರಿಸಬೇಕು. ಮಗಳ ವಿರುದ್ಧವೇ ಸಾಕ್ಷಿ ಹೇಳುವ ತಾಯಂದಿರು ಇರಬಾರದು. ತಿರುವನಂತಪುರದ ತಾಯಿ ವರ್ತನೆ ಸರಿಯಾದುದೇ? ಪ್ರಾಪ್ತವಯಸ್ಸಿನ ಮಗಳಿರುವಾಗ ಸನ್ಯಾಸಿಯನ್ನು ಮನೆಗೆ ಕರೆದು ಹಾಲು ಹಣ್ನು ಕೊಟ್ಟು ಮಲಗಿಸಿದರು. ಇದು ಸರಿಯೇ?

ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಮನೆಯ ಕೆಲಸ ಮಾಡಬೇಕು. ಮೊಣಕಾಲು ಬಗ್ಗಿಸಬೇಕು. ಕೃಷಿ ಕೆಲಸ ಮಾಡಬೇಕು. ಒಂದು ಕಾಲದಲ್ಲಿ ಹಸುವಿನ ಹಾಲು ಕರೆದು ಕಾಲೇಜಿಗೆ ಕಲಿಸಲು ಬರುತ್ತಿದ್ದ ಪ್ರೊಫೆಸರ್‌ಗಳಿದ್ದರು. ಕಠಿಣ ಪರಿಶ್ರಮದಿಂದ ಮನಸ್ಸು ಗಟ್ಟಿಯಾಗಿರುತ್ತದೆ. ಅವರು ಎಂದಿಗೂ ಕ್ರಿಮಿನಲ್‌ ಗಳ ಮೋಸದ ಬಲೆಯಲ್ಲಿ ಸಿಲುಕುವುದಿಲ್ಲ ಎಂದು ಸಚಿವ ಸುಧಾಕರನ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+