Jimmy Tata: ಯಾರಿಗೂ ಗೊತ್ತಿರದ ರತನ್ ಟಾಟಾ ಸಹೋದರನ ಸರಳ ಜೀವನ: ಮೊಬೈಲ್ ಫೋನ್ ಇಲ್ಲ, ಚಿಕ್ಕ ಮನೆಯಲ್ಲಿ ವಾಸ
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಖ್ಯಾತ ಉದ್ಯಮಿ ರತನ್ ಟಾಟಾ (86) ಅಕ್ಟೋಬರ್ 9ರಂದು ನಿಧನರಾದರು. ತಮ್ಮ ಪರಿಶ್ರಮದಿಂದಲೇ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ಟಾಟಾ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ ರತನ್ ಟಾಟಾ 3800 ಕೋಟಿ ಆಸ್ತಿಯ ಒಡೆಯ. ಆದರೆ ಅವರ ಸಹೋದರ ಮಾತ್ರ ತುಂಬಾ ಸರಳ ಜೀವಿ. 2ಬಿಹೆಚ್‌ಕೆ ಮನೆಯಲ್ಲಿ ವಾಸ ಮಾಡುವ ಅವರ ಸಹೋದರ ಮೊಬೈಲ್ ಫೋನ್ ಸಹ ಬಳಸುವುದಿಲ್ಲ.
ಹೌದು... ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಅವರು ಯಾವಾಗಲೂ ಸರಳ ಜೀವನ ನಡೆಸಲು ಇಷ್ಟಪಡುತ್ತಾರೆ. ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಅವರ ನಿವ್ವಳ ಮೌಲ್ಯ 3800 ಕೋಟಿ ರೂ.ಗಿಂತ ಹೆಚ್ಚಿದ್ದರೂ, ಜಿಮ್ಮಿ ನೇವಲ್ ಟಾಟಾ ಮಾತ್ರ ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ರತನ್ ಟಾಟಾ ಪ್ರಸಿದ್ಧ ಉದ್ಯಮಿ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯವಾಗಿ ಪ್ರಚಾರದಲ್ಲಿರುವ ವ್ಯಕ್ತಿ. ಆದರೆ ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕರ ಕಣ್ಣಿನಿಂದ ಮರೆಮಾಡಿದ್ದಾರೆ.
ಜಿಮ್ಮಿ ಟಾಟಾ ಅವರು ಪ್ರಚಾರ ಮತ್ತು ಮಾಧ್ಯಮದಿಂದ ತುಂಬಾನೇ ದೂರ. ಜಿಮ್ಮಿ ಟಾಟಾ, ಕೋಟಿ ಒಡೆಯ ಸಹೋದರನನ್ನು ಹೊಂದಿದ್ದರು ತಮ್ಮನ್ನು ತಾವು ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟಿಲ್ಲ. ಅವರು ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ. ಸಾವಿರಾರು ಕೋಟಿ ಆಸ್ತಿ ಒಡೆಯ ಕೂಡ ಹೌದು. ಆದರೂ ಕೂಡ ಯಾವಾಗಲೂ ಸರಳ ಜೀವನವನ್ನು ನಡೆಸುತ್ತಾರೆ ಮತ್ತು ವ್ಯವಹಾರದಲ್ಲಿ ಕಡಿಮೆ ಆಸಕ್ತಿಯನ್ನು ತೋರಿಸುತ್ತಾರೆ ಜಿಮ್ಮಿ ಟಾಟಾ.

ಜಿಮ್ಮಿ ನೇವಲ್ ಟಾಟಾ ಮನೆಯಿಂದ ಹೊರಹೋಗುವುದು ಅಪರೂಪ
ಜಿಮ್ಮಿ ಟಾಟಾ ಅವರು ನೇವಲ್ ಟಾಟಾ ಅವರ ಮೊದಲ ಪತ್ನಿ ಸುನಿ ಕಮಿಷನರ್ ಅವರ ಎರಡನೇ ಮಗು. 2023 ರಲ್ಲಿ ರತನ್ 1945 ರ ತನ್ನ ಮತ್ತು ಜಿಮ್ಮಿಯ ಫ್ಲ್ಯಾಷ್‌ಬ್ಯಾಕ್ ಫೋಟೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದರು. ಅದು ಸಂತೋಷದ ದಿನಗಳು ಎಂದು ಅವರ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.
ಜಿಮ್ಮಿ ಟಾಟಾ ಅವರ ಬಳಿ ಮೊಬೈಲ್ ಫೋನ್ ಕೂಡ ಇಲ್ಲ, ಹೆಚ್ಚು ಪ್ರಯಾಣಿಸುವುದಿಲ್ಲ. ಅಂತರರಾಷ್ಟ್ರೀಯ ಘಟನೆಗಳ ಬಗ್ಗೆ ನವೀಕೃತವಾಗಿರಲು ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಲು ಆದ್ಯತೆ ನೀಡುತ್ತಾರೆ. ಅಲ್ಲದೆ ಜಿಮ್ಮಿ ನೇವಲ್ ಟಾಟಾ ಮನೆಯಿಂದ ಹೊರಹೋಗುವುದು ಅಪರೂಪ.
ಅವರು ವಾಸವಾಗಿರುವ ಅಪಾರ್ಟ್‌ಮೆಂಟ್ ಕೊಲಾಬಾದ ಹ್ಯಾಂಪ್ಟನ್ ಕೋರ್ಟ್‌ನ ಆರನೇ ಮಹಡಿಯಲ್ಲಿದೆ. ಬಿಲಿಯನೇರ್ ಜಿಮ್ಮಿ ಟಾಟಾ ಅವರು ಸಾಧಾರಣ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅಲ್ಲದೆ ಜಿಮ್ಮಿ ಟಾಟಾ ಅವರು ಉತ್ತಮ ಸ್ಕ್ವಾಷ್ ಆಟಗಾರರಾಗಿದ್ದಾರೆ. ಹೀಗೆ ಸಾವಿರಾರು ಕೋಟಿ ಒಡೆಯನಾಗಿದ್ದರೂ ಜಿಮ್ಮಿ ಟಾಟಾ ಅವರದ್ದು ಮಾತ್ರ ಅತ್ಯಂತ ಸರಳ ಜೀವನ ಅಂದರೆ ಇದು ನಿಜಕ್ಕೂ ಅಚ್ಚರಿಯ ಸಂಗತಿ.












Click it and Unblock the Notifications