Ratan Tata Deepfake: ರತನ್ ಟಾಟಾರ ಬಂಡವಾಳ ಹೂಡಿಕೆ ಶಿಫಾರಸಿನ ನಕಲಿ ವಿಡಿಯೋ
ನವದೆಹಲಿ, ಡಿಸೆಂಬರ್ 07: ತಂತ್ರಜ್ಞಾನಗಳ ಆವಿಷ್ಕಾರ ಹೆಚ್ಚಾಗುತ್ತಿದ್ದಂತೆ ಅದರ ದುರ್ಬಳಕೆಯು ಹೆಚ್ಚಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ಡೀಪ್‌ಫೇಕ್ (Deepfake Video) ವಿಡಿಯೋ ಎಡಿಟ್‌ಗಳೇ ಸಾಕ್ಷಿ. ನಟಿ ಮಣಿಯರು ಈ ನಕಲಿ ವಿಡಿಯೋ, ಧ್ವನಿ, ಫೋಟೊಗಳಿಗೆ ತುತ್ತಾದ ಬೆನ್ನಲ್ಲೆ ದೇಶದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata Fake) ಅವರು ಸಹ ಡೀಪ್‌ಫೇಕ್ ವಿಡಿಯೋಗೆ ಬಲಿಪಶು ಆಗಿದ್ದಾರೆ.
ಹೌದು, ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಯಾವುದೇ ಅಪಾಯ ಇಲ್ಲದೇ ಶೇಕಡಾ 100 ರಷ್ಟು ಗ್ಯಾರಂಟಿಯೊಂದಿಗೆ ಬಂಡವಾಳ ಹೂಡಿಕೆಗೆ ರತನ್‌ಟಾಟಾ ಅವರೇ ಕರೆ ನೀಡಿದಂತೆ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ.

ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಟಾಟಾ ಸೋನಾ ಅಗರವಾಲ್ ಹೆಸರಿನ ಬಳಕೆದಾರರಿಂದ ಬಂಡವಾಳ ಹೂಡಿಕೆ ಕುರಿತು ರತನ್ ಟಾಟಾ ಅವರ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ. ಹೂಡಿಕೆಗಳನ್ನು ಶಿಫಾರಸು ಮಾಡುವ ವೀಡಿಯೋದಲ್ಲಿ ರತನ್ ಟಾಟಾ ಅವರು ಸಂದರ್ಶನವನ್ನು ನಕಲು ಮಾಡಿದ್ದಾರೆ. ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಕಲಿ ವೀಡಿಯೊದಲ್ಲಿ, ರತನ್ ಟಾಟಾ ಅವರು ಸೋನಾ ಅಗರವಾಲ್ ಅವರನ್ನು ತಮ್ಮ ಮ್ಯಾನೇಜರ್ ಎಂದು ಹೇಳಿರುವುದು ಗೊತ್ತಾಗುತ್ತದೆ. ದೇಶದ ಪ್ರತಿಯೊಬ್ಬರಿಗೂ ರತನ್ ಟಾಟಾ ಅವರಿಂದ ಈ ಶಿಫಾರಸು ಮಾಡಲಾಗುತ್ತಿದೆ. ಶೇಕಡಾ 100 ರಷ್ಟು ಗ್ಯಾರಂಟಿಯೊಂದಿಗೆ ಯಾವುದೇ ಅಪಾಯ ಇಲ್ಲದೇ ನೀವು ಹೂಡಿಕೆ ಮಾಡಲು ಅವಕಾಶ ಇದೆ ಎಂದು ಉತ್ತೇಜನ ನೀಡಲಾಗಿದೆ.

ಈ ವಿಡಿಯೋದಲ್ಲಿ ಜನರು ತಮ್ಮ ಖಾತೆಯಲ್ಲಿ ಹಣ ಸ್ವೀಕರಿಸುತ್ತಿರುವ ಸಂದೇಶಗಳನ್ನೂ ಪ್ರದರ್ಶಿಸಲಾಗಿದೆ. ರತನ್ ಟಾಟಾ ಅವರು ವೀಡಿಯೊದಲ್ಲಿ ಇದು ನನ್ನದಲ್ಲ, ಇದು ನಕಲಿ ಡೀಪ್‌ಫೇಕ್ ವಿಡಿಯೋ ಎಂದು ತಿಳಿಸಿದ್ದಾರೆ. ಅಲ್ಲದೇ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಸಹ ಅವರು ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಧ್ವನಿ ಬದಲಿಸಿ ವಿಡಿಯೋ
ಬುಧವಾರ ವಷ್ಟೇ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಧ್ವನಿಯನ್ನು ಬದಲಾಯಿಸಿ ಡೀಪ್‌ಫೇಕ್ ಮಾಡಲಾಗಿತ್ತು. ಈ ಕುರಿತು ಕೇಂದ್ರ ಸರ್ಕಾರವು ಕೆಲವು ಬಾರಿ ಎಚ್ಚರಿಕೆ ನೀಡಿದ್ದರು. ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಇದಕ್ಕೂ ಹಿಂದೆ ಬಹುಬಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿತ್ತು. ನಂತರ ನಟಿ ಕಾಜೋಲ್ ಅವರು ಬಟ್ಟೆ ಬದಲಿಸುವಂತಹ ಎಡಿಟೆಡ್ ವಿಡಿಯೋ, ಅಲಿಯಾ ಭಟ್ ಅವರ ಬೆಡ್ ಮೇಲಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಅವೆಲ್ಲವುಗಳು ಡೀಪ್‌ಫೇಕ್ ವಿಡಿಯೋಗಳಾಗಿವೆ. ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಐಟಿ ನಿಯಮ ಪಾಲಿಸುವಂತೆ ಸರ್ಕಾರ ಎಚ್ಚರಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications