ಭ್ರೂಣವಿದ್ದ ಬ್ಯಾಗಿನೊಂದಿಗೆ ಬಂದು ದೂರು ನೀಡಿದ ಅತ್ಯಾಚಾರ ಸಂತ್ರಸ್ತೆ
ಮಧ್ಯಪ್ರದೇಶ, ಏಪ್ರಿಲ್ 05: ಅತ್ಯಾಚಾರ ಸಂತ್ರಸ್ತೆ ಆರು ತಿಂಗಳ ಭ್ರೂಣವನ್ನು ತನ್ನ ಬ್ಯಾಗಿನಲ್ಲಿರಿಸಿಕೊಂಡು ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಲಾಗಿದ್ದದ ಆರು ತಿಂಗಳ ಭ್ರೂಣವನ್ನು ಪ್ಲಾಸ್ಟಿಕ್ ಬ್ಯಾಗಿನೊಳಗೆ ಹಾಕಿಕೊಂಡು ಅತ್ಯಾಚಾರಿಗಳ ವಿರುದ್ಧ ಎಸ್‌ಪಿ ಕಚೇರಿಗೆ ಬಂದು ದೂರು ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ದಲಿತ ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಳು, ಶೌಚಕ್ಕಾಗಿ ಮನೆಯಿಂದ ಹೊರಗಡೆ ಬಂದಾಗ ಅತ್ಯಾಚಾರ ನಡೆದಿತ್ತು. ನಂತರ ಬೇರೆ ಜಾಗಕ್ಕೆ ಎಳೆದೊಯ್ದು ಅತ್ಯಾಚಾರ ಎರಡನೇ ಬಾರಿ ಅತ್ಯಾಚಾರವೆಸಗಲಾಗಿತ್ತು. ಎಂದು ಸಂತ್ರಸ್ತೆ ನೋವನ್ನು ಹಂಚಿಕೊಂಡಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಎಸ್‌ಸಿ ಎಸ್ಟಿ(ಪ್ರಿವೆನ್ಷನ್ ಆಫ್ ಅಟ್ರೋಸಿಟೀಸ್) ಕಾಯ್ದೆ, ಅಪಹರಣ, ಒತ್ತಾಯದ ಗರ್ಭಪಾತ ಪ್ರಕರಣದಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಗುರುವಾರ ಸಂಜೆಯವರೆಗೂ ಅಪರಾಧಿಯನ್ನು ಬಂಧಿಸಿಲ್ಲ.
ಆರೋಪಿಯ ಕುಟುಂಬದಲ್ಲಿ ಇರುವ ಇಬ್ಬರು ಹೆಣ್ಣು ಮಕ್ಕಳು ಈ ಅಪರಾಧದಲ್ಲಿ ಸಹಾಯ ಮಾಡಿದ್ದಾರೆ ಎಂದು ಸಂತ್ರಸ್ತೆ ಕುಟುಂಬದವರು ಆರೋಪಿಸಿದ್ದಾರೆ.
ಹಾಗೆಯೇ ಆರೋಪಿಯ ಮನೆಯವರು ಆಕೆಯನ್ನು ಮುಖ್ಯ ಆರೋಪಿಯಾದ ನೀರಜ್ ಗೆ ಕೊಟ್ಟು ವಿವಾಹ ಮಾಡುತ್ತೇವೆ ಎಂದು ಪೊಲೀಸಿರಿಗೆ ದೂರು ನೀಡದಿರಲು ಒತ್ತಾಯಿಸಿದ್ದರು. ನಂತರ ತಮ್ಮ ಮಾತಿನಿಂದ ಹಿಂದೆ ಸರಿದಿದ್ದರು. ನಂತರ ಆರೋಪಿ ತನ್ನ ಕುಟುಂಬದವರೊಂದಿಗೆ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾನೆ.
ಸಿವಿಲ್ ಲೈನ್ಸ್ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಆರೋಪಿಗಳ ಕಡೆಯವರು ಬೆದರಿಕೆ ಹಾಕಿದ್ದರು ಜತೆಗೆ ಆಕೆಯನ್ನು ಥಳಿಸಿದ್ದರು. ಇದೀಗ ಎಸ್‌ಪಿ ರಾಜಶೇಖರ್ ಹಿಂಗಾಂನ್ ಕರ್ ನಗರ ಎಸ್ ಪಿಯಾದ ಬಿಡಿ ಪಾಂಡೆ ಅವರಿಗೆ ದೂರಿನ ತನಿಖೆ ಮಾಡಲು ನಿರ್ದೇಶನ ನೀಡಿದ್ದಾರೆ.












Click it and Unblock the Notifications