27 ಪತ್ರಕರ್ತರಿಗೆ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿ ಪ್ರಕಟ

Posted By:
Subscribe to Oneindia Kannada

ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ನೀಡುವ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿಯನ್ನು ಗುರುವಾರ ಘೋಷಿಸಲಾಗಿದೆ. ಈ ಬಾರಿ 12ನೇ ಆವೃತ್ತಿಯಾಗಿದ್ದು, 27 ಪತ್ರಕರ್ತರು ಪ್ರಶಸಿಗೆ ಭಾಜನರಾಗಿದ್ದಾರೆ. 2016ನೇ ಸಾಲಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ ಪತ್ರಕರ್ತರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ.

ಪ್ರಶಸ್ತಿಯು ತಲಾ ಒಂದು ಲಕ್ಷ ನಗದು, ಟ್ರೋಫಿಯನ್ನು ಒಳಗೊಂಡಿದೆ. ಪತ್ರಿಕೋದ್ಯಮದಲ್ಲಿ ತೋರಿದ ಧೈರ್ಯ, ಬದ್ಧತೆ ಹಾಗೂ ನೀಡಿದ ಕೊಡುಗೆಯನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.

Journalism

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಅಭಿಷೇಕ್ ಸಹಾ, ಹಿಂದೂಸ್ತಾನ್ ಟೈಮ್ಸ್

ಹಿಂದಿ: ರಾಹುಲ್ ಕೊಟಿಯಾಲ್, ಸತ್ಯಾಗ್ರಹ್.ಸ್ಕ್ರಾಲ್.ಇನ್

ಪ್ರಾದೇಶಿಕ ಭಾಷೆ: ರೇಷ್ಮಾ ಸಂಜೀವ್ ಶಿವದೇಕರ್, ಲೋಕ್ ಸತ್ತಾ

ಪರಿಸರ ಪತ್ರಿಕೋದ್ಯಮ: ಜಿಮ್ಮಿ ಫಿಲಿಪ್, ದೀಪಿಕಾ ಡೈಲಿ

ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಎಸ್.ವಿ.ರಾಜೇಶ್, ಮಲಯಾಳ ಮನೋರಮಾ

ಹಿರಿಯ ಪತ್ರಕರ್ತ ಕೆ ಸತ್ಯನಾರಾಯಣಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ

ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಉತ್ಕರ್ಷ್ ಆನಂದ್, ದ ಇಂಡಿಯನ್ ಎಕ್ಸ್ ಪ್ರೆಸ್

ರಾಜಕೀಯ ವರದಿಗಾರಿಕೆ: ಮುಜಮಿಲ್ ಜಲೀಲ್, ದ ಇಂಡಿಯನ್ ಎಕ್ಸ್ ಪ್ರೆಸ್

ಕ್ರೀಡಾ ಪತ್ರಿಕೋದ್ಯಮ: ಕೈಸರ್ ಮೊಹಮ್ಮದ್ ಅಲಿ, ಔಟ್ ಲುಕ್

ಕ್ರೀಡಾ ವರದಿಗಾರಿಕೆ: ಶುಭಜಿತ್ ರಾಯ್, ದ ಇಂಡಿಯನ್ ಎಕ್ಸ್ ಪ್ರೆಸ್

ತನಿಖಾ ವರದಿಗಾರಿಕೆ: ರಿತು ಸರಿನ್, ಪಿವಿ ಅಯ್ಯರ್ ಮತ್ತು ಜೆ ಮಜುಂದಾರ್, ದ ಇಂಡಿಯನ್ ಎಕ್ಸ್ ಪ್ರೆಸ್

ನುಡಿ ಚಿತ್ರ: ಸಂಗೀತಾ ಬರುವಾ ಪಿಶರೊತಿ, ದ ವೈರ್

ಭಾರತದ ಬಗ್ಗೆ ವರದಿ ಮಾಡುವ ವಿದೇಶಿ ಪ್ರತಿನಿಧಿ: ಎಲೆನ್ ಬಾರಿ, ದ ನ್ಯೂಯಾರ್ಕ್ ಟೈಮ್ಸ್

ಅಭಿಪ್ರಾಯ ಮತ್ತು ವ್ಯಾಖ್ಯಾನ ಬರಹ: ತಮಲ್ ಬಂಡೋಪಾಧ್ಯಾಯ, ಮಿಂಟ್

ನಾಗರಿಕ ಪತ್ರಿಕೋದ್ಯಮ: ಚೈತನ್ಯ ಮರ್ಪಕ್ ವರ್, ಮುಂಬೈ ಮಿರರ್

ಫೋಟೋ ಜರ್ನಲಿಸಮ್: ವಸೀಮ್ ಅಂದ್ರಾಬಿ, ಹಿಂದೂಸ್ತಾನ್ ಟೈಮ್ಸ್

ಪ್ರಸಾರ

ಜಮ್ಮು ಕಾಶ್ಮೀರ ಹಾಗೂ ಈಶಾನ್ಯದಿಂದ ವರದಿಗಾರಿಕೆ: ಮೌಮಿತಾ ಸೆನ್, ಇಂಡಿಯಾ ಟುಡೆ

ಹಿಂದಿ: ರವೀಶ್ ಕುಮಾರ್, ಎನ್ ಡಿಟಿವಿ ಇಂಡಿಯಾ

ಪ್ರಾದೇಶಿಕ ಭಾಷೆ: ದಿನೇಶ್ ಅಕುಲಾ, ಟಿವಿ 5 ನ್ಯೂಸ್

ಪರಿಸರ ಪತ್ರಿಕೋದ್ಯಮ: ಯಾರಿಗೂ ಇಲ್ಲ

ಅನ್ ಕವರ್ ಇಂಡಿಯಾ ಇನ್ ವಿಸಿಬಲ್: ಮನೋಗ್ಯ ಲೋಯಿವಾಲ, ಟಿವಿ ಟುಡೇ

ವಾಣಿಜ್ಯ ಹಾಗೂ ಆರ್ಥಿಕ ಪತ್ರಿಕೋದ್ಯಮ: ಹರ್ಷದಾ ಸಾವಂತ್, ಸಿಎನ್ ಬಿಸಿ ಆವಾಜ್

ರಾಜಕೀಯ ವರದಿಗಾರಿಕೆ: ಆಶಿಷ್ ಸಿಂಗ್, ನ್ಯೂಸ್ ಎಕ್ಸ್

ಕ್ರೀಡಾ ಪತ್ರಿಕೋದ್ಯಮ: ಬಿಪಾಷಾ ಮುಖರ್ಜಿ, ಟಿವಿ ಟುಡೇ

ಕ್ರೀಡಾ ವರದಿಗಾರಿಕೆ: ಆಶಿಷ್ ಸಿನ್ಹಾ, ಇಂಡಿಯಾ ನ್ಯೂಸ್

ತನಿಖಾ ವರದಿಗಾರಿಕೆ: ಶ್ರೀನಿವಾಸನ್ ಜೈನ್, ಎನ್ ಡಿಟಿವಿ 24X7

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 12th edition of the Ramnath Goenka Excellence in Journalism Awards on Thursday. 27 journalists winning the prestigious award for outstanding work done in 2016.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ