Get Updates
Get notified of breaking news, exclusive insights, and must-see stories!

ರಾಮ್ ರಹೀಮ್ ನ ಕೋಣೆಯ ವಯಾಗ್ರ, ಹನಿಪ್ರೀತ್ ಳಾಗಿ ರಾಖಿ ಸಾವಂತ್

ಮೇರಿ ಕೋಮ್, ಸಚಿನ್ ತೆಂಡೂಲ್ಕರ್, ಧೋನಿ, ಮಿಲ್ಖಾ ಸಿಂಗ್... ಹೀಗೆ ದೇಶದ ಹೆಮ್ಮೆಯ ಕ್ರೀಡಾ ಪಟುಗಳ ಬಗ್ಗೆ ಬಾಲಿವುಡ್ ನಲ್ಲಿ ಸಿನಿಮಾಗಳಾಗಿವೆ. ಈಗ ಜೀವನ ಚರಿತ್ರೆಗಳ ಸಾಲಿಗೆ ಹೊಸ ಸೇರ್ಪಡೆ ಹನಿಪ್ರೀತ್ ಇನ್ಸಾನ್. ನಿಮ್ಮ ಊಹೆ ಸರಿ ಈ ಮಹಿಳೆ ಅದೇ ಗುರ್ಮೀತ್ ರಾಮ್ ರಹೀಮ್ ಸಿಂಗ್ ನ 'ದತ್ತು ಮಗಳು'.

ಆದರೆ, ರಾಖಿ ಸಾವಂತ್ ಈ ಹನಿಪ್ರೀತ್ ಳ ಪಾತ್ರ ಮಾಡುತ್ತಿದ್ದು, ತನಗೆ ಬಾಬಾನೂ ಗೊತ್ತು, ಅವರ 'ಮಗಳು' ಹನಿಪ್ರೀತ್ ಗೊತ್ತು. ಇಬ್ಬರನ್ನೂ ಜನರ ಮಧ್ಯೆ ಬಯಲು ಮಾಡ್ತೀನಿ ಅಂತಿದ್ದಾಳೆ. ಸದ್ಯಕ್ಕೆ ಹನಿಪ್ರೀತ್ ತಲೆ ತಪ್ಪಿಸಿಕೊಂಡಿದ್ದಾಳೆ. ಆಕೆಗಾಗಿ ಹುಡುಕಾಟವಂತೂ ನಡೆಯುತ್ತಿದೆ. ಇನ್ನು ಬಾಬಾ ರಾಮ್ ರಹೀಮ್ ಗೆ ರೋಹ್ಟಕ್ ಜೈಲಿನಲ್ಲಿ ತರಕಾರಿ ಬೆಳೆಯುವುದಕ್ಕೆ ದಿನಕ್ಕೆ ಇಪ್ಪತ್ತು ರುಪಾಯಿ ಕೂಲಿ ಸಿಗುತ್ತಿದೆ.

ಇದೀಗ ಸಿನಿಮಾದ ಚಿತ್ರೀಕರಣದ ವೇಳೆಯೇ ರಾಖಿ ಸಾವಂತ್ ಸಿಕ್ಕಾಪಟ್ಟೆ ಮಾತನಾಡಿದ್ದಾಳೆ. ಬಾಬಾ ರಹೀಮ್ ನ ಕೋಣೆ ಹಾಗೂ ಅಲ್ಲಿಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಕಂಡಿದ್ದು ಏನು ಎಂಬುದನ್ನು ರಸವತ್ತಾಗಿ ವಿವರಿಸಿದ್ದಾಳೆ. ಆದರೆ ಆಕೆಯ ಮಾತುಗಳನ್ನೇ ನಂಬುವುದಾದರೆ ಜನರ ಮುಂದೆ ಬಾಬಾನ ಬದುಕು ಬತ್ತಲಾಗುತ್ತದೆ. ಆಕೆ ಏನು ಮಾತನಾಡಿದ್ದಾಳೆ ಅಂತ ತಿಳಿಯೋಕೆ ಮುಂದಿನ ಸ್ಲೈಡ್ ಗಳನ್ನು ಓದಿ.

ಸಿನಿಮಾ ಹೆಸರು ಅಬ್ ಇನ್ಸಾನ್ ಹೋಗಾ

ಸಿನಿಮಾ ಹೆಸರು ಅಬ್ ಇನ್ಸಾನ್ ಹೋಗಾ

ನಾನು ಒಪ್ಪಿಕೊಳ್ತೀನಿ, ಇವೆಲ್ಲ ದಿಢೀರ್ ಆಗಿದ್ದು. ಆದರೆ ನನಗೆ ಅನ್ನಿಸುತ್ತದೆ: ಈ ಬಾಬಾ ರಾಮ್ ರಹೀಮ್ ಹಾಗೂ ಆತನ ಸೋ ಕಾಲ್ಡ್ ಮಗಳ ದುರುದ್ದೇಶಪೂರಿತ ದಂಧೆಗಳನ್ನು ಬಯಲು ಮಾಡಬೇಕು. ಆಗ ಜನರು ಇಂಥ ದೇವ ಮಾನವರ ಹಳ್ಳಕ್ಕೆ ಬೀಳುವುದಿಲ್ಲ. ನನ್ನ ಸೋದರ ರಾಕೇಶ್ ಸಾವಂತ್ ಈ ಕಥೆ ಹೇಳಿದ ತಕ್ಷಣ ಒಪ್ಪಿಕೊಂಡು ಬಿಟ್ಟೆ. ಈ ಸಿನಿಮಾಗೆ ಅವನೇ ನಿರ್ದೇಶಕ.

ನಾವು ಸಿನಿಮಾ ಅಬ್ ಇನ್ಸಾನ್ ಹೋಗಾ ಎಂಬ ಹೆಸರು ಇಟ್ಟಿದ್ದೇವೆ. ನಾವು 'ಬೇವಫಾ' ಎಂಬ ಐಟಮ್ ಸಾಂಗ್ ಚಿತ್ರೀಕರಣ ಮಾಡ್ತಿದ್ದೀವಿ.

Recommended Video

    Gurmeet Ram Rahim Singh, Secret Behind His Popularity | Oneindia Kannada
    ತಂದೆ-ಮಗಳ ರೀತಿ ಅವರ ನಡವಳಿಕೆ ಇರಲಿಲ್ಲ

    ತಂದೆ-ಮಗಳ ರೀತಿ ಅವರ ನಡವಳಿಕೆ ಇರಲಿಲ್ಲ

    ನನಗೆ ಅವರಿಬ್ಬರ ಪರಿಚಯ ಹಲವು ವರ್ಷಗಳಿಂದ ಇದೆ. ರಾಮ್ ರಹೀಮ್ ಹಾಗೂ ಅವರ ಸೋ ಕಾಲ್ಡ್ ಮಗಳನ್ನು ಬಯಲು ಮಾಡುವುದಕ್ಕೆ ನಾನೇ ಬೆಸ್ಟ್. ಆರಂಭದಲ್ಲಿ ಅವರಿಬ್ಬರನ್ನು ನನಗೆ ತಂದೆ-ಮಗಳು ಅಂತ ಪರಿಚಯಿಸಿದರು. ಆದರೆ ಆ ನಂತರ ಏನೋ ಮಿಸ್ ಹೊಡೆಯುತ್ತಿದೆ ಅನ್ನಿಸಿತು. ತಂದೆ-ಮಗಳ ರೀತಿ ಅವರ ನಡವಳಿಕೆ ಇರಲಿಲ್ಲ.

    ನಾನು ಸಿರ್ಸಾಗೆ ಭೇಟಿ ನೀಡಿದ್ದೆ

    ನಾನು ಸಿರ್ಸಾಗೆ ಭೇಟಿ ನೀಡಿದ್ದೆ

    ಬಾಬಾರ ರಹಸ್ಯ ಗುಹೆ ನೋಡುವುದಕ್ಕೆ ನಾನು ಸಿರ್ಸಾಗೆ ಭೇಟಿ ನೀಡಿದ್ದೆ. ಎಲ್ಲ ಪೂಜೆಗಳನ್ನು ಅಲ್ಲೇ ಮಾಡುವುದಾಗಿ ಆತ ಹೇಳಿದ್ದರು. ಆ ನಂತರ ನನಗೆ ಗೊತ್ತಾಯಿತು, ಬಡ ಹೆಣ್ಣುಮಕ್ಕಳನ್ನು ಅಲ್ಲೇ ಅತ್ಯಾಚಾರ ಮಾಡುತ್ತಿದ್ದ. ಈ ವಿಚಾರ ಗೊತ್ತಾಗಿ ಆಘಾತ ಆಯಿತು. ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ.

    ಹೆಣ್ಣುಮಕ್ಕಳ ಪೋಷಕರಿಗೆ ಹೆಂಡದ ಆಮಿಷ

    ಹೆಣ್ಣುಮಕ್ಕಳ ಪೋಷಕರಿಗೆ ಹೆಂಡದ ಆಮಿಷ

    ಆಶ್ರಮದಲ್ಲಿದ್ದ ಮಕ್ಕಳು ಬಾಬಾನ ಕರ್ಮ ಕಾಂಡದ ಬಗ್ಗೆ ತಮ್ಮ ಪೋಷಕರಿಗೆ ಹೇಳಿದರೂ ಮತ್ತೆ ಬಾಬಾನ ಬಳಿಗೆ ಕಳಿಸುತ್ತಿದ್ದರು. ಏಕೆ ಅಂತ ಗೊತ್ತಾ? ಏಕೆಂದರೆ ಅವರಿಗೆ ಆಮಿಷ ಒಡ್ಡಲಾಗುತ್ತಿತ್ತು. ಅದು ಎಂಥ ಆಮಿಷ ಗೊತ್ತಾ? ಹೆಂಡದ ಆಮಿಷ. ಮನೆಯ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಇವರಿಗೆ ಹೆಂಡದ ಚಿಂತೆ. ಇದು ಭಾರತ.

    ದೇವಮಾನವನ ಕೋಣೆಯಲ್ಲಿ ವಯಾಗ್ರ

    ದೇವಮಾನವನ ಕೋಣೆಯಲ್ಲಿ ವಯಾಗ್ರ

    ಬಾಬಾ ರಹೀಮ್ ರ ಸೆಕ್ರೆಟರಿ ಸಿ.ಪಿ.ಅರೋರಾ ನನ್ನನ್ನು ಮೇರಿಯಟ್ ಹೋಟೆಲ್ ಗೆ ಆಹ್ವಾನಿಸಿದ್ದರು. ಅಲ್ಲಿನ ಬಾಬಾ ಕೋಣೆಯಲ್ಲಿ ನನಗೆ ಕಂಡಿದ್ದೇನು ಗೊತ್ತೆ? ವಯಾಗ್ರ. ದೇವಮಾನವನ ಕೋಣೆಯಲ್ಲಿ ವಯಾಗ್ರ ಏಕೆ? ಆ ದಿನವೇ ನಿರ್ಧರಿಸಿದೆ: ಒಂದು ದಿನ ಈ ವ್ಯಕ್ತಿಯನ್ನು ಬಯಲು ಮಾಡಬೇಕು ಅಂದುಕೊಂಡೆ. ಅದಕ್ಕೆ ಈ ದಿನ ಇಲ್ಲಿದ್ದೀನಿ.

    ಹೃತಿಕ್ ರೋಷನ್ ಗೆ ಪರಿಚಯ ಮಾಡಿಸಿದ್ದೆ

    ಹೃತಿಕ್ ರೋಷನ್ ಗೆ ಪರಿಚಯ ಮಾಡಿಸಿದ್ದೆ

    ಚಿತ್ರರಂಗದಲ್ಲಿ ಬಹಳ ಮಂದಿಗೆ ರಾಮ್ ರಹೀಮ್ ಹಾಗೂ ಹನಿಪ್ರೀತ್ ಗೊತ್ತಿದ್ದಾರೆ. ನಾನೇ ವೈಯಕ್ತಿಕವಾಗಿ ಹೃತಿಕ್ ರೋಷನ್ ಗೆ ಪರಿಚಯ ಮಾಡಿಸಿದ್ದೆ. ಬಾಬಾ, ಹನಿಪ್ರೀತ್ ಹಾಗೂ ಹೃತಿಕ್ ಒಟ್ಟಿಗೆ ಇರುವ ಫೋಟೋ ನನ್ನ ಹತ್ತಿರ ಇದೆ.

    ಬಾಬಾ ರಹೀಮ್ ನ ಕಾರ್ಬನ್ ಕಾಪಿ

    ಬಾಬಾ ರಹೀಮ್ ನ ಕಾರ್ಬನ್ ಕಾಪಿ

    ಜೈಲಿನಲ್ಲಿ ಬಾಬಾ ರಹೀಮ್ ತನ್ನ ಹಿಂದಿನ ಜೀವನದ ಬಗ್ಗೆ ಹೇಳಿಕೊಳ್ಳುವ ಮೂಲಕ ಕಥೆ ತೆರೆದುಕೊಳ್ಳುತ್ತದೆ. ಬಾಬಾ ರಹೀಮ್ ನನ್ನೇ ಹೋಲುವಂಥ ನಟರೊಬ್ಬರು ನಮಗೆ ಸಿಕ್ಕಿದ್ದಾರೆ. ಕಾರ್ಬನ್ ಕಾಪಿ ಅಂತಾರಲ್ಲ ಹಾಗೆ ಹೋಲಿಕೆ ಇದೆ. ಅದೇ ಕೂದಲು, ನಡೆಗೆ, ಮಾತು ಎಲ್ಲವೂ. ನೋಡುಗರು ಖಂಡಿತಾ ಬೇಸ್ತು ಬೀಳ್ತಾರೆ. ಈತ ಎಲ್ಲಿಂದ ಬಂದ ಎಂದು ಅವರು ಅಚ್ಚರಿ ಪಡ್ತಾರೆ.


    ಹನಿಪ್ರೀತ್ ಳ ಜತೆಗೆ ನಾನು ಹೋಲಿಕೆ ಆಗದೆ ಇರಬಹುದು. ಆದರೆ ನಾನು ನಟಿ. ನನಗೆ ಅಭಿನಯ ಬರುತ್ತದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+