ಸಿಬಿಐ ಕೋರ್ಟ್ ಆದೇಶದ ವಿರುದ್ಧ ರಾಮ್ ರಹೀಮ್ ಮೇಲ್ಮನವಿ
ಸಿಬಿಐ ಕೋರ್ಟ್ ನೀಡಿದ ಇಪ್ಪತ್ತು ವರ್ಷದ ಕಠಿಣ ಜೈಲು ಶಿಕ್ಷೆ ವಿರುದ್ಧ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮೇಲ್ಮನವಿ ಸಲ್ಲಿಸಲಿದ್ದು, ಈ ವಿಷಯವನ್ನು ಬಾಬಾ ರಾಮ್ ರಹೀಮ್ ಪರ ವಕೀಲರು ಸೋಮವಾರ ಖಾತ್ರಿ ಪಡಿಸಿದ್ದಾರೆ.

ಅತ್ಯಾಚಾರಿ ಬಾಬಾ ರಾಮ್ ರಹೀಂಗೆ 10 ಅಲ್ಲ, 20 ವರ್ಷ ಜೈಲು!
"ಇದು ಹದಿನೆಂಟು ವರ್ಷದ ಹಿಂದಿನ ಪ್ರಕರಣ. ಈ ಅವಧಿಯಲ್ಲಿ ರಾಮ್ ರಹೀಮ್ ವಿರುದ್ಧ ಯಾವ ಪ್ರಕರಣವೂ ದಾಖಲಾಗಿಲ್ಲ. ಜತೆಗೆ ಬಾಬಾ ಸಮಾಜಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಕನಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಅನ್ನು ಕೇಳಿಕೊಂಡೆವು" ಎಂದು ವಕೀಲ ಗರ್ಗ್ ತಿಳಿಸಿದ್ದಾರೆ.
ಇನ್ನು ಸರಕಾರಿ ಪರ ವಕೀಲರು ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದ ವೇಳೆ, ಇನ್ನು ನಲವತ್ತೈದು ಸಂತ್ರಸ್ತೆಯರಿದ್ದಾರೆ. ಅವರು ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಅವರನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿ
ಎರಡು ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯವು ತಲಾ ಹತ್ತು ವರ್ಷದಂತೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಮೂವತ್ತು ಲಕ್ಶ್ಗ ದಂಡ ವಿಧಿಸಿ, ಆದೇಶಿಸಿದೆ.
ಒನ್ಇಂಡಿಯಾ ನ್ಯೂಸ್