ರಾಮ್ ರಹೀಮ್ ಶಿಕ್ಷೆ ಪ್ರಕಟ, ಕಂಡಲ್ಲಿ ಗುಂಡು ಆದೇಶ
ಚಂಡೀಗಢ, ಆಗಸ್ಟ್. 28 : ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸಲಾಗುತ್ತದೆ. ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.
ಶುಕ್ರವಾರ ಸಿಬಿಐ ವಿಶೇಷ ಕೋರ್ಟ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ತೀರ್ಪು ಕೊಟ್ಟಿದೆ. ರೋಹ್ಟಕ್ ಜೈಲಿನಲ್ಲಿ ಸಿಂಗ್ ಇದ್ದು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ಇಂದು ಅಲ್ಲಿಗೆ ತೆರಳಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.
Recommended Video


2002ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಈ ತೀರ್ಪು ಪ್ರಕಟವಾದ ನಂತರ ಬಾಬಾ ಅಭಿಮಾನಿಗಳು ಹಿಂಸಾಚಾರ ನಡೆಸಿದ್ದು, ಮೂವತ್ತು ಜನರು ಗಲಭೆಯಲ್ಲಿ ಮೃತಪಟ್ಟಿದ್ದಾರೆ.
ರೋಹ್ಟಕ್ ಜೈಲಿನಲ್ಲಿ ರಾಮ್ ರಹೀಮ್ ಸಿಂಗ್ ಇದ್ದು, ಹೆಲಿಕಾಪ್ಟರ್ ಮೂಲಕ ನ್ಯಾಯಮೂರ್ತಿಗಳು ಮತ್ತು ಕೋರ್ಟಿನ ಸಿಬ್ಬಂದಿ ಜೈಲಿಗೆ ತೆರಳಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ಇಂದು ಗಲಭೆ ನಡೆಯುವ ಸಾಧ್ಯತೆ ಇದ್ದು, ಹಿಂಸಾಚಾರ ನಡೆದರೆ ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿದೆ.
ಹರ್ಯಾಣ, ಪಂಜಾಬ್ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ಗುಪ್ತಚರ ಇಲಾಖೆಯೂ ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.











Click it and Unblock the Notifications